For Quick Alerts
  ALLOW NOTIFICATIONS  
  For Daily Alerts

  ಮತ್ತೆ 'ತ್ರೀ ಈಡಿಯಟ್ಸ್' ಜೊತೆಗೆ ಬರ್ತಾರೆ ಇರಾನಿ

  By Naveen
  |

  ಬಾಲಿವುಡ್ ನಲ್ಲಿ ಬಂದ ಎವರ್ ಗ್ರೀನ್ ಸಿನಿಮಾಗಳ ಪೈಕಿ 'ತ್ರೀ ಈಡಿಯಟ್ಸ್' ಚಿತ್ರ ಕೂಡ ಒಂದು. ಜೊತೆಗೆ ನಟ ಅಮೀರ್ ಖಾನ್ ಕೆರಿಯರ್ ನ ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ 'ತ್ರೀ ಈಡಿಯಟ್ಸ್' ಪ್ರಮುಖವಾದುದ್ದು. ಇಂತಹ ಸಿನಿಮಾ ಈಗ ಮತ್ತೆ ಬರುತ್ತಿದೆ.

  ಸ್ಟಾರ್ ಫಿಲ್ಮ್ ಮೇಕರ್ ರಾಜ್ ಕುಮಾರ್ ಇರಾನಿ 'ತ್ರೀ ಈಡಿಯಟ್ಸ್' ಸಿನಿಮಾದ ಸೀಕ್ವೆಲ್ ಮಾಡುವ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು 'ತ್ರೀ ಈಡಿಯಟ್ಸ್' ಪಾರ್ಟ್ 2 ಬರುವುದು ಪಕ್ಕಾ ಎಂದಿದ್ದಾರೆ. ಈಗಾಗಲೇ ಆ ಸಿನಿಮಾಗೆ ಅಭಿಜಿತ್ ಜೋಶಿ ಸ್ಕ್ರಿಪ್ಟ್ ಕೆಲಸಗಳು ಶುರು ಮಾಡಿದ್ದಾರಂತೆ.

  ಸದ್ಯ ರಾಜ್ ಕುಮಾರ್ ಇರಾನಿ ಸಂಜಯ್ ದತ್ ಬರೋಪಿಕ್ 'ಸಂಜು' ಸಿನಿಮಾದ ಬಿಡುಗಡೆ ಕೆಲಸದಲ್ಲಿ ತೊಡಗಿದ್ದಾರೆ. ಈ ಸಿನಿಮಾ ಇದೇ ತಿಂಗಳು 29ಕ್ಕೆ ಬಿಡುಗಡೆಯಾಗಲಿದೆ. ಆ ಚಿತ್ರದ ನಂತರ 'ಮುನ್ನಾಭಾಯಿ' ಸಿನಿಮಾ ಸರಣಿ ಮಾಡಲಿದ್ದಾರೆ. ಇವುಗಳ ಬಳಿಕ ಮತ್ತೆ 'ತ್ರೀ ಈಡಿಯಟ್ಸ್' ಚಿತ್ರ ಶುರು ಆಗಲಿದೆ.

  'ತ್ರೀ ಈಡಿಯಟ್ಸ್' ಪಾರ್ಟ್ 2 ಬರುವುದು ನಿಜ ಎಂದಿರುವ ರಾಜ್ ಕುಮಾರ್ ಇರಾನಿ ಪಾರ್ಟ್ 1 ನಲ್ಲಿ ನಟಿಸಿದ್ದ ನಟರೇ ಇಲ್ಲಿಯೂ ಇರುತ್ತಾರಾ.. ಇಲ್ವಾ..? ಎನ್ನುವುದನ್ನು ಬಿಟ್ಟು ಕೊಟ್ಟಿಲ್ಲ. ಅಂದಹಾಗೆ, 2009 ರಲ್ಲಿ ಕೇವಲ 55 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ 459 ಕೋಟಿ ಕಲೆಕ್ಷನ್ ಮಾಡಿತ್ತು.

  English summary
  Director Rajkumar Hirani planning to do '3 Idiots' sequel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X