»   » ರಾಜಮೌಳಿ ನಿರ್ದೇಶನದಲ್ಲಿ ನಟ ಅಮೀರ್ ಖಾನ್

ರಾಜಮೌಳಿ ನಿರ್ದೇಶನದಲ್ಲಿ ನಟ ಅಮೀರ್ ಖಾನ್

Posted By:
Subscribe to Filmibeat Kannada
SS Rajamouli
ತೆಲುಗು ಚಿತ್ರರಂಗದಲ್ಲಿ ಒಂದಾದ ಬಳಿಕ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ. ಈಗವರಿಗೆ ಬಾಲಿವುಡ್ ಮೇಲೆ ಮನಸ್ಸಾಗಿದೆಯಂತೆ. ಅದರಲ್ಲೂ ಸೂಪರ್ ಸ್ಟಾರ್ ಅಮೀರ್ ಖಾನ್ ಅವರೊಂದಿಗೆ ಚಿತ್ರ ಮಾಡಬೇಕೆಂದಿದ್ದಾರೆ ರಾಜಮೌಳಿ.

ಅವರ ಈ ಆಸೆ ನೆರವೇರಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು. ಅಮೀರ್ ಎಂದರೆ ತಮಗೆ ತುಂಬಾ ಇಷ್ಟ. ಅವರು ನನಗೆ ಗುರು ಇದ್ದಂತೆ. ಚಿತ್ರ ನಿರ್ಮಿಸುವುದು, ಅದನ್ನು ಪ್ರಚಾರ ಮಾಡುವ ರೀತಿಯನ್ನು ನಾನು ಅವರಿಂದಲೇ ಕಲಿತಿದ್ದು.

ಒಂದು ವೇಳೆ ಚಾನ್ಸ್ ಸಿಕ್ಕಿದರೆ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕೆಂದಿದ್ದೇನೆ. ಈ ಮೂಲಕ ಅವರ ಬಳಿ ಇನ್ನಷ್ಟು ಪಾಠಗಳನ್ನು ಕಲಿತಂತಾಗುತ್ತದೆ ಎಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ರಾಜಮೌಳಿ ಹೇಳಿಕೊಂಡಿದ್ದ್ದಾರೆ.

ಅಮೀರ್ ಅವರ 'ಸರ್ಪರೋಷ್' ಚಿತ್ರದಿಂದ ಅವರ ಎಲ್ಲ ಚಿತ್ರಗಳನ್ನು ಇಷ್ಟಪಟ್ಟಿದ್ದೇನೆ ಎನ್ನುವ ಅವರು ಅಮೀರ್ ಜೊತೆ ಕೆಲಸ ಮಾಡಲು ನಿರ್ಧರಿಸಿದ್ದಾರೆ. ರಾಜಮೌಳಿ ನಿರ್ದೇಶನದ 'ವಿಕ್ರಮಾರ್ಕುಡು' ಚಿತ್ರ 'ರೌಡಿ ರಾಥೋಡ್' ಆಗಿ ಹಿಂದಿಗೆ ರೀಮೇಕ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತು. 'ಮರ್ಯಾದಾ ರಾಮಣ್ಣ' ಚಿತ್ರ 'ಸನ್ ಆಫ್ ಸರ್ದಾರ್' ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈಗವರು ಮತ್ತೆ ಅದೇ ರೀತಿಯ ರೊಮ್ಯಾನ್ಸ್, ಆಕ್ಷನ್, ಕಾಮಿಡಿ ಚಿತ್ರಗಳಿಗಿಂತ ಪೌರಾಣಿಕ ಚಿತ್ರ ಮಾಡಬೇಕೆಂದಿದ್ದಾರೆ. ಮಹಾಭಾರತದ ಕಥೆಯನು ಅವರು ಬೆಳ್ಳಿತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಪೌರಾಣಿಕ ಚಿತ್ರವನ್ನು ಬೆಳ್ಳಿತೆರೆಗೆ ತರುವುದು ನಿಜಕ್ಕೂ ಚಾಲೆಂಜ್. ಈ ರೀತಿಯ ಚಾಲೆಂಜ್ ಗಳೇ ಅವರಿಗೆ ಇಷ್ಟವಂತೆ. ತಮ್ಮ ಈ ಕನಸು ನನಸಾಗಲು ಎಂಟರಿಂದ ಒಂಭತ್ತು ವರ್ಷ ಸಮಯ ಬೇಕಾಗುತ್ತದೆ ಎನ್ನುತ್ತಾರೆ ರಾಜಮೌಳಿ. (ಪಿಟಿಐ)

English summary
Renowned Telugu director SS Rajamouli has expressed his desire to make a Bollywood film with superstar Aamir Khan. I would jump to direct him because I would learn so much from him," Rajamouli told PTI, adding that from 'Sarfarosh', he loved all of Aamir's films.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada