For Quick Alerts
  ALLOW NOTIFICATIONS  
  For Daily Alerts

  ಹಾಟ್ ಫೋಟೋ ಹಂಚಿಕೊಂಡ ದಿಶಾ ಪಠಾನಿ: 'ವಾವ್ ದಿಶು' ಎಂದ ಟೈಗರ್ ಶ್ರಾಫ್ ತಾಯಿ

  |

  ಬಾಲಿವುಡ್ ನಟಿ ದಿಶಾ ಪಟಾನಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫೋಟೋಗಳಿಂದಲೇ ಸಖತ್ ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹೆಚ್ಚಿಸಿರುವ ಈ ಬೆಡಗಿ ಆಗಾಗ ವಿವಿಧ ಭಂಗಿಯ ಫೋಟೋಸ್ ಶೇರ್ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಸದ್ಯ ದಿಶಾ ಪಠಾನಿ ಫೋಟೋವೊಂದು ಹಲ್ ಚಲ್ ಎಬ್ಬಿಸಿದೆ.

  ನಟಿ ದಿಶಾ ಪಟಾನಿ ಬಾಲಿವುಡ್ ನ ಹಾಟ್ ನಟಿಯರಲ್ಲೊಬ್ಬರು. ಬಿಕಿನಿ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಹಾಟ್ ಫೋಟೋಶೂಟ್ ಜೊತೆ ಅಭಿಮಾನಿಗಳ ಜೊತೆ ಆಗಾಗ ಇಂಟರಾಕ್ಷನ್ ಮಾಡುತ್ತಿರುತ್ತಾನೆ. ದಿಶಾ ಪಟಾನಿ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 56 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ದಿಶಾ ಪಟಾನಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಜೀನ್ಸ್ ನೊಂದಿಗೆ ಕ್ಯಾಲಿನ್ ಕ್ಲೀನ್ ಪ್ರಿಂಟೆಡ್ ಬಿಕಿನಿ ತೊಟ್ಟು ಮಾದಕ ಪೋಸ್ ಕೊಟ್ಟಿದ್ದಾರೆ. ಈ ಸದ್ಯ ಈ ಹಾಟ್ ಫೋಟೋ ಸಖತ್ ವೈರಲ್ ಆಗಿದೆ.

  Disha patani shares bikini photos

  ಟೈಗರ್ ಶ್ರಾಫ್ ತಾಯಿ, ಸಹೋದರಿ ಪ್ರತಿಕ್ರಿಯೆ

  ದಿಶಾ ಪಟಾನಿ ಪೋಸ್ಟ್‌ಗೆ ಟೈಗರ್ ಶ್ರಾಫ್ ತಾಯಿ, ಸಹೋದರಿ ಪ್ರತಿಕ್ರಿಯೆ ನೀಡಿದ್ದಾರೆ. ಟೈಗರ್ ಶ್ರಾಫ್ ತಾಯಿ ಆಯೇಶಾ ಶ್ರಾಫ್ 'ವಾವ್ ದಿಶು' ಎಂದಿದ್ದಾರೆ. ಸಹೋದರಿ ಕೃಷ್ಣ ಅಕಾ ಕಿಶು ಶ್ರಾಫ್ 'you are unreal' ಎಂದು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಫ್ಯಾನ್ಸ್ ಕೂಡ ದಿಶಾ ಪಟಾನಿ ಫೋಟೋಗೆ ಕಾಮೆಂಟ್ ಮಾಡಿದ್ದು, ನಿಮ್ಮ ಈ ರೀತಿಯ ಫೋಟೋಶೂಟ್ ನಿಂದ ಬೇಸತ್ತು ಟೈಗರ್ ಶ್ರಾಫ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಕಾಳೆದಿದ್ದಾರೆ.

  ಟೈಗರ್ ಶ್ರಾಫ್ -ದಿಶಾ ಪಟಾನಿ ಬ್ರೇಕಪ್

  ಬಾಲಿವುಡ್‌ನಲ್ಲಿ ಕ್ಯೂಟ್ ಅಂಡ್ ಹಾಟ್ ಜೋಡಿ ಎಂದು ಕರೆಸಿಕೊಂಡಿರುವ ಜೋಡಿಗಳಲ್ಲೊಂದು ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ. ಈ ಜೋಡಿ ಹೇಳಿ ಮಾಡಿಸಿದಮತಿದೆ ಎನ್ನುವ ವಿರುದನ್ನು ಕುಡ ಪಡೆದುಕೊಂಡಿದೆ. ಇಬ್ಬರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿರೋ ಸುದ್ದಿ ಹರಿದಾಡುತ್ತಲೇ ಇತ್ತು. ಇನ್ನು ಈ ಜೋಡಿಗೆ ಅದೆಷ್ಟೋ ಅಭಿಮಾನಿಗಳು ಕೂಡ ಇದ್ದಾರೆ. ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ಕೈ-ಕೈ ಹಿಡಿದು ಸುತ್ತಾಡಿದ ವಿಡಿಯೋಗಳು, ಫೋಟೊಗಳು ಹರಿದಾಡಿದ್ದವು. ಆದರೂ ಈ ಜೋಡಿ ಎಲ್ಲೂ ತಾವಿಬ್ಬರೂ ಪ್ರೇಮಿಗಳು ಎಂದು ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆದರೆ, ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಹಕ್ಕಿಗಳು ಬೇರೆ-ಬೇರೆಯಾಗಿದ್ದು, ಈ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು.

  6 ವರ್ಷ ಪ್ರೀತಿಸಿದ್ದ ಜೋಡಿ

  ಬಾಲಿವುಡ್‌ನ ಫಿಟ್ಟೆಸ್ಟ್ ಆಕ್ಟರ್ ಟೈಗರ್ ಶ್ರಾಫ್. ಈ ನಟನ ಸ್ಟಂಟ್ಸ್‌ಗೆ ಮರುಳಾಗದವರು ಯಾರಿಲ್ಲ. ಹಾಗೇ ಬೋಲ್ಡ್ ಅಂಡ್ ಸ್ಲಿಮ್ ನಟಿಯರಲ್ಲಿ ದಿಶಾ ಪಟಾನಿ ಕೂಡ ಒಬ್ಬರು. ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ 6 ವರ್ಷಗಳಿಂದ ಎಲ್ಲೇ ಹೋದರೂ ಒಟ್ಟಿಗೆ ಹೋಗಿದ್ದೂ ಇದೆ. ಒಟ್ಟೊಟ್ಟಿಗೆ ಕಂಡಿದ್ದೂ ಇದೆ. ಇವರಿಬ್ಬರ ಈ ಲವ್ ಸ್ಟೋರಿಗೆ 6 ವರ್ಷ. 6 ವರ್ಷಗಳು ಪ್ರೀತಿಯಲ್ಲಿ ಇದ್ದ ಈ ಜೋಡಿ ಸದ್ಯ ಬ್ರೇಕಪ್ ಮಾಡಿಕೊಂಡು ದೂರಾಗಿದೆ.

  English summary
  Disha patani shares bikini photos: tiger shroff's mom, sister react, Know More.
  Friday, January 20, 2023, 17:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X