For Quick Alerts
  ALLOW NOTIFICATIONS  
  For Daily Alerts

  ನಮಗೆ ಕಲಿಸಲು ಬರಬೇಡಿ: ಸೋನು ಸೂದ್ ಮೇಲೆ ಸಿಟ್ಟಾದ ವೈದ್ಯರು

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಮಾಡುತ್ತಿರುವ ಮಾನವೀಯ ಕಾರ್ಯಕ್ಕೆ ಅತೀವ ಪ್ರಶಂಸೆ ವ್ಯಕ್ತವಾಗಿದೆ. ಸೋನು ಸೂದ್ ಅನ್ನು 'ಮಸೀಯಾ' (ದೇವರು) ಎಂದೇ ಕರೆಯಲಾಗುತ್ತಿದೆ.

  ಆದರೆ ಸೋನು ಸೂದ್ ಅವರು ಇತ್ತೀಚೆಗೆ ಮಾಡಿರುವ ಒಂದು ಟ್ವೀಟ್ ಕೆಲವು ವೈದ್ಯರ ಕೆಂಗಣ್ಣಿಗೆ ಗುರಿಯಾಗಿದೆ. ನೆಟ್ಟಿಗರಲ್ಲಿ ಕೆಲವರು ಸೋನು ಸೂದ್ ಪರ ಕೆಲವರು ವೈದ್ಯರ ಪರ ಕಮೆಂಟ್‌ಗಳನ್ನು ಮಾಡಿ ವಿಷಯ ದೊಡ್ಡದು ಮಾಡುವುದರಲ್ಲಿ ನಿರತರಾಗಿದ್ದಾರೆ.

  ಟ್ವೀಟ್ ಮಾಡಿರುವ ಸೋನು ಸೂದ್, 'ಒಂದು ಸರಳ ಪ್ರಶ್ನೆ, ಇಂಜೆಕ್ಷನ್ ಒಂದು ಎಲ್ಲಿಯೂ ಲಭ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿರುವಾಗ ವೈದ್ಯರು ಏಕೆ ಅದೇ ಇಂಜೆಕ್ಷನ್ ಎನ್ನು ಎಲ್ಲ ರೋಗಿಗಳಿಗೂ ರೆಕೆಮೆಂಡ್ ಮಾಡುತ್ತಿದ್ದಾರೆ? ಆಸ್ಪತ್ರೆಗಳಿಗೇ ಆ ಇಂಜೆಕ್ಷನ್ ಸಿಗದೇ ಇರುವಾಗ ಸಾಮಾನ್ಯ ವ್ಯಕ್ತಿಗೆ ಹೇಗೆ ಸಿಗಲು ಸಾಧ್ಯ? ಆ ಇಂಜೆಕ್ಷನ್ ಬದಲಿಗೆ ಬೇರೆ ಔಷಧಗಳನ್ನು ಬಳಸಿ ಜೀವ ಉಳಿಸುವ ಪ್ರಯತ್ನ ಮಾಡಲಾಗುತ್ತಿಲ್ಲ ಏಕೆ?' ಎಂದು ಸೋನು ಸೂದ್ ಪ್ರಶ್ನೆ ಮಾಡಿದ್ದಾರೆ.

  'ಚಿಕಿತ್ಸೆ ಹೇಗೆ ಕೊಡಬೇಕು ಎಂಬುದನ್ನು ಹೇಳಿಕೊಡಬೇಡಿ'

  'ಚಿಕಿತ್ಸೆ ಹೇಗೆ ಕೊಡಬೇಕು ಎಂಬುದನ್ನು ಹೇಳಿಕೊಡಬೇಡಿ'

  ಸೋನು ಸೂದ್‌ರ ಈ ಪ್ರಶ್ನೆ ಕೆಲವು ವೈದ್ಯರಿಗೆ ಸಿಟ್ಟು ತರಿಸಿದೆ. ಅಮಿತ್ ತಂಡಾನಿ ಎಂಬ ವೈದ್ಯರು ಸೋನು ಸೋದ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, 'ನಾವು ನಿಮಗೆ ನಟನೆ ಹೇಳಿಕೊಟ್ಟಿಲ್ಲ. ದಯವಿಟ್ಟು ನೀವು ನಮಗೆ ಚಿಕಿತ್ಸೆ ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಡಬೇಡಿ' ಎಂದಿದ್ದಾರೆ.

  'ತುರ್ತು ಕೆಲಸವಿದೆ ಎಂದು ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿಸುತ್ತೀರೇನು?'

  'ತುರ್ತು ಕೆಲಸವಿದೆ ಎಂದು ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿಸುತ್ತೀರೇನು?'

  ಮತ್ತೊಬ್ಬ ವೈದ್ಯ ಬ್ರಜೇಂದರ್ ಸಿಂಗ್ ಟ್ವೀಟ್ ಮಾಡಿ, 'ನಿಮ್ಮ ಪ್ರಶ್ನೆಗಳಿಗೆ ಒಂದು ಸಾಲಿನಲ್ಲಿ ಉತ್ತರ ನೀಡುತ್ತೇನೆ. ನೀವು ಅರ್ಜೆಂಟ್‌ ಆಗಿ ಎಲ್ಲಿಗಾದರೂ ನಿಮ್ಮ ಕಾರಿನಲ್ಲಿ ಹೋಗುವಾಗ ಪೆಟ್ರೋಲ್ ಖಾಲಿಯಾದರೆ ಅರ್ಜೆಂಟ್‌ ಇದೆ ಎಂದು ಪೆಟ್ರೋಲ್ ಬದಲು ಡೀಸೆಲ್ ಹಾಕಿಸಿಕೊಂಡು ಹೋಗುತ್ತೀರೇನು?' ಎಂದು ಪ್ರಶ್ನೆ ಮಾಡಿದ್ದಾರೆ.

  'ಎಲ್ಲ ಔಷಧಗಳಿಗೂ ಪರ್ಯಾಯ ಔಷಧಗಳಿರುವುದಿಲ್ಲ'

  'ಎಲ್ಲ ಔಷಧಗಳಿಗೂ ಪರ್ಯಾಯ ಔಷಧಗಳಿರುವುದಿಲ್ಲ'

  ಮತ್ತೊಬ್ಬ ವೈದ್ಯ ಶುಕ್ಲಾ ಶಲ್ಲಾಕೌಲ್ ಎಂಬುವರು ಟ್ವೀಟ್ ಮಾಡಿ, 'ಹಾಗಾಗಿಯೇ ನಿನ್ನಂಥಹಾ ಬುದ್ಧಿವಂತರು ವೈದ್ಯರಾಗುವುದಿಲ್ಲ, ನಟರಾಗುತ್ತಾರೆ. ಎಲ್ಲ ಔಷಧಗಳಿಗೂ ಪರ್ಯಾಯ ಔಷಧಗಳು ಇರುವುದಿಲ್ಲ. ನಿನ್ನ ಮೆದುಳಿನಲ್ಲಿ ಇನ್ನಷ್ಟು ಗ್ರೇ ಮ್ಯಾಟರ್ (ಬುದ್ಧಿವಂತಿಕೆಯ ನರತಂತು) ಇರಬೇಕಿತ್ತು' ಎಂದಿದ್ದಾರೆ.

  Fake! Fake!! ಇದು ನಾನಲ್ಲ ಹುಷಾರಾಗಿರಿ ಎಂದ ಸೋನು ಸೂದ್ | Filmibeat Kannada
  ವೈದ್ಯರ ಬಗ್ಗೆ ಪ್ರತ್ಯೇಕ ಟ್ವೀಟ್ ಮಾಡಿದ ಸೋನು ಸೂದ್

  ವೈದ್ಯರ ಬಗ್ಗೆ ಪ್ರತ್ಯೇಕ ಟ್ವೀಟ್ ಮಾಡಿದ ಸೋನು ಸೂದ್

  ತಮ್ಮ ಟ್ವೀಟ್‌ ಬಗ್ಗೆ ವೈದ್ಯರು ಅಸಮಾಧಾನಗೊಂಡು ಪ್ರತಿಕ್ರಿಯೆ ನೀಡುತ್ತಿರುವುದನ್ನು ಗಮನಿಸಿದ ಸೋನು ಸೂದ್ ಮತ್ತೊಂದು ಟ್ವೀಟ್ ಮಾಡಿ, 'ಒಂದು ಮಾತಂತೂ ಸತ್ಯ. ವೈದ್ಯರಿದ್ದರಷ್ಟೆ ನಾವಿರಲು ಸಾಧ್ಯ' ಎಂದಿದ್ದಾರೆ. ಆದರೆ ಸೋನು ಸೂದ್ ಇಂಜೆಕ್ಷನ್‌ ಬಗ್ಗೆ ಎತ್ತಿದ ಪ್ರಶ್ನೆಗೆ ಬೆಂಬಲವನ್ನು ಸೂಚಿಸಿದ್ದಾರೆ.

  English summary
  Some doctors express their unhappiness about Sonu Sood's recent tweet. In the tweet Sonu Sood questioned why doctors suggesting medicine that did not available in the market.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X