For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಬಾಲಿವುಡ್ ಸ್ಟಾರ್ ನಟರು ಮೌನವಹಿಸಿದ್ದೇಕೆ?

  |

  ಡ್ರಗ್ಸ್ ಮಾಫಿಯಾದ ಜಾಲ ಇಡೀ ಭಾರತೀಯ ಸಿನಿಮಾರಂಗವನ್ನೇ ಬೆಚ್ಚಿ ಬೀಳಿಸಿದೆ. ಡ್ರಗ್ಸ್ ದಂಧೆಯಲ್ಲಿ ಘಟಾನುಘಟಿಗಳ ಹೆಸರುಗಳ ಹೆಸರು ಕೇಳಿ ಬರುತ್ತಿದೆ. ಮತ್ತೊಂದೆಡೆ ನಟಿಮಣಿಯರೇ ಟಾರ್ಗೆಟ್ ಆಗುತ್ತಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

  ಸದ್ಯ ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡೋಣೆ, ರಕುಲ್ ಪ್ರೀತಿ ಸಿಂಗ್, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ವಿರುದ್ಧ ಗ್ರಡ್ಸ್ ಆರೋಪ ಕೇಳಿ ಬಂದಿದ್ದು ಎನ್ ಸಿ ಬಿ ನೋಟಿಸ್ ನೀಡಿದೆ. ಬಾಲಿವುಡ್ ನಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಆದರೆ ಯಾರೊಬ್ಬ ಸ್ಟಾರ್ ನಟರು ಈ ಬಗ್ಗೆ ದ್ವನಿ ಎತ್ತದೆ ಇರುವುದು ಅಚ್ಚರಿ ಮೂಡಿಸಿದೆ.

  ಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿ

  ಸೂಪರ್ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ರಣವೀರ್ ಸಿಂಗ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಸೇರಿದಂತೆ ಅನೇಕರು ಈ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೇರೆಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಿರುವ ಸ್ಟಾರ್ಸ್ ಡ್ರಗ್ಸ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ.

  ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ನೆಪೋಟಿಸಂ, ಒಳಗಿನವರು ಮತ್ತು ಹೊರಗಿನವರು ಎನ್ನುವ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು. ಬಳಿಕ ಅನೇಕ ಕಲಾವಿದರು ಸಾಮಾಜಿಕ ಜಾಲತಾಣದಿಂದ ಕೊಂಚ ಅಂತರ ಕಾಯ್ದುಕೊಂಡರು. ನಟ ರಣವೀರ್ ಸಿಂಗ್ ಮತ್ತು ಆಯುಷ್ಮಾನ್ ಖುರಾನ ಟ್ವಿಟ್ಟರ್ ನಲ್ಲಿ ಜೂನ್ ನಿಂದ ಮೌನವಾಗಿದ್ದಾರೆ. ಇನ್ನೂ ಬಾಲಿವುಡ್ ಬಿಗ್ ಬಿ ಪ್ರತಿದಿನ ಚಿತ್ರೀಕರಣದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರುವ ಮೂಲಕ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದ್ದರು.

  ಸ್ಟಾರ್ ಗಳು ಹೆಚ್ಚು ಬಳಸುವ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿಯೂ ಯಾರು ಈ ಬಗ್ಗೆ ಮಾತನಾಡುತ್ತಿಲ್ಲ. ಸಮಾಜದಲ್ಲಿ, ಚಿತ್ರರಂಗದಲ್ಲಿ ದೊಡ್ಡ ಪಿಡುಗಾಗಿ ಕಾಡುತ್ತಿರುವ ಡ್ರಗ್ಸ್ ಮಾಫಿಯಾದ ಬಗ್ಗೆ ಯಾರು ಪ್ರತಿಕ್ರಿಯೆ ನೀಡದೆ ಇರುವುದು ಬಾಲಿವುಡ್ ನಟರ ನಿರ್ಲಕ್ಷ್ಯ ಎತ್ತಿ ತೋರುತ್ತಿದೆ.

  ಕನ್ನಡದ ಚಿತ್ರರಂಗಕ್ಕೆ ಮತ್ತೊಂದು ಆಘಾತ | Filmibeat Kannada

  ಪ್ರತಿಕ್ರಿಯೆ ನೀಡಿದರೆ ಟ್ರೋಲ್ ಆಗುತ್ತೇವೆ ಎನ್ನುವ ಭಯನಾ ಅಥವಾ ಡ್ರಗ್ಸ್ ಮಾಫಿಯಾದಲ್ಲಿ ತನ್ನ ಹೆಸರು ಸಹ ಕೇಳಿಬರಹುದು ಎನ್ನುವ ಕಾರಣಕ್ಕಾ ಗೊತ್ತಿಲ್ಲ, ಮಾದಕ ವಸ್ತು ಮಾಫಿಯಾ ದಂಧೆ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರು, ಚಿತ್ರರಂಗಕ್ಕೆ ದೊಡ್ಡ ಕಳಂಕ ಅಂಟಿದರೂ ಮೌನಕ್ಕೆ ಶರಣಾಗಿ ಕುಳಿತಿರುವುದು ಅಚ್ಚರಿ ಮೂಡಿಸಿದೆ.

  English summary
  Bollywood stars such as Amitabh Bachchan, Shah Rukh Khan and Deepika Padukone and others maintained Silence on the Bollywood drug probe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X