For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 6ರವರೆಗೂ ರಿಯಾ ಚಕ್ರವರ್ತಿಗೆ ಜೈಲು, ಕೋರ್ಟ್ ಆದೇಶ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ರಿಯಾ ಚಕ್ರವರ್ತಿಗೆ ಅಕ್ಟೋಬರ್ 6ರವರೆಗೂ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

  ಬೈಕುಲ್ಲಾ ಜೈಲಿನಲ್ಲಿರುವ ನಟಿ ರಿಯಾ ಅವರ 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಗಿದ ಹಿನ್ನೆಲೆ ಮುಂಬೈ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಹೆಚ್ಚಿನ ತನಿಖೆ ಅಗತ್ಯವಿರುವ ಕಾರಣ ರಿಯಾಗೆ ಮತ್ತೆ 14 ದಿನಗಳ ಕಾಲ ಜೈಲು ವಾಸಕ್ಕೆ ಕೋರ್ಟ್ ಆದೇಶಿಸಿದೆ. ಮುಂದೆ ಓದಿ.....

  ಡ್ರಗ್ಸ್ ಪ್ರಕರಣ: ಇಬ್ಬರು ಸ್ಟಾರ್ ನಟಿಯರಿಗೆ ಶೀಘ್ರ ಎನ್‌ಸಿಬಿ ನೊಟೀಸ್ಡ್ರಗ್ಸ್ ಪ್ರಕರಣ: ಇಬ್ಬರು ಸ್ಟಾರ್ ನಟಿಯರಿಗೆ ಶೀಘ್ರ ಎನ್‌ಸಿಬಿ ನೊಟೀಸ್

  ಡ್ರಗ್ಸ್ ಪ್ರಕರಣದಲ್ಲಿ ರಿಯಾ ಬಂಧನ

  ಡ್ರಗ್ಸ್ ಪ್ರಕರಣದಲ್ಲಿ ರಿಯಾ ಬಂಧನ

  ಸುಶಾಂತ್ ಸಿಂಗ್ ರಜಪೂತ್ ಅವರಿಗೆ ರಿಯಾ ಚಕ್ರವರ್ತಿ ಡ್ರಗ್ಸ್ ನೀಡುತ್ತಿದ್ದರು ಎಂಬ ಆರೋಪದಲ್ಲಿ ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 8 ರಂದು ರಿಯಾ ಅವರನ್ನು ಎನ್‌ಸಿಬಿ ಕಸ್ಟಡಿಗೆ ಪಡೆದುಕೊಂಡಿದ್ದರು. ಬಳಿಕ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಸೆಪ್ಟೆಂಬರ್ 22ರವರೆಗೂ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚನೆ ನೀಡಿತ್ತು.

  ಅಕ್ಟೋಬರ್‌ 6ರವರೆಗೂ ಜೈಲು

  ಅಕ್ಟೋಬರ್‌ 6ರವರೆಗೂ ಜೈಲು

  ನಟಿ ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮ್ಯಾನೇಜರ್ ಸ್ಯಾಮುಯೆಲ್ ಮಿರಂಡಾ, ಜೈದ್ ಸೇರಿದಂತೆ ಎಲ್ಲ ಆರೋಪಿಗಳಿಗೂ ಅಕ್ಟೋಬರ್ 14ವರೆಗೂ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಇನ್ನು ಹದಿನಾಲ್ಕು ದಿನಗಳ ಕಾಲ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನ ಮಹಿಳಾ ವಿಭಾಗದ ಕೊಠಡಿಯಲ್ಲಿ ವಾಸವಾಗಿರಬೇಕಿದೆ.

  ರಿಯಾ ಚಕ್ರವರ್ತಿ ಜಾಮೀನು ನಿರಾಕರಣೆ, ಸುಶಾಂತ್ ಪ್ರೇಯಸಿಗೆ ಜೈಲೇ ಗತಿರಿಯಾ ಚಕ್ರವರ್ತಿ ಜಾಮೀನು ನಿರಾಕರಣೆ, ಸುಶಾಂತ್ ಪ್ರೇಯಸಿಗೆ ಜೈಲೇ ಗತಿ

  ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ನಟಿ

  ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ನಟಿ

  ರಿಯಾ ಚಕ್ರವರ್ತಿ ಮತ್ತು ಶೌವಿಕ್ ಚಕ್ರವರ್ತಿ ಜಾಮೀನಿಗಾಗಿ ಮುಂಬೈ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 23 ರಂದು ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಜಾಮೀನು ಸಿಗುತ್ತಾ ಇಲ್ಲವಾ ಎನ್ನುವುದು ನಾಳೆಗೆ ತೀರ್ಮಾನವಾಗಲಿದೆ.

  DIRECTORS DIARY | ಕೋಣನಕುಂಟೆ ರಮ್ಯಾ ಬಾರ್ ನಲ್ಲಿ ಡೈಲಿ ಮಲಗುತ್ತಿದ್ದೆ | R. Chandru | Filmibeat Kannada
  ಬಾಲಿವುಡ್‌ ಸ್ಟಾರ್‌ಗಳ ಹೆಸರು ಬಾಯ್ಬಿಟ್ಟಿರುವ ರಿಯಾ

  ಬಾಲಿವುಡ್‌ ಸ್ಟಾರ್‌ಗಳ ಹೆಸರು ಬಾಯ್ಬಿಟ್ಟಿರುವ ರಿಯಾ

  ಡ್ರಗ್ಸ್ ಪ್ರಕರಣದಲ್ಲಿ ಪೆಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ತನಿಖೆ ಮಾಡಿರುವ ಎನ್‌ಸಿಬಿ ಪೊಲೀಸರ ಬಳಿ ರಿಯಾ ಹಾಗೂ ಇನ್ನಿತರ ಆರೋಪಿಗಳು ಸಾಕಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಸ್ಟಾರ್ ನಟಿಯರಿಗೆ ಎನ್‌ಸಿಬಿ ನೋಟಿಸ್ ನೀಡಲು ಮುಂದಾಗಿದೆ.

  English summary
  Sushant singh rajput case; Mumbai NDPS court extended the judicial custody of actress Rhea Chakraborty till October 6.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X