For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಕೇಸ್: ನಟಿ ಭಾರತಿ ಸಿಂಗ್ ನಂತರ ಪತಿಯನ್ನು ಬಂಧಿಸಿದ ಎನ್‌ಸಿಬಿ

  |

  ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಬೇಟೆ ಮುಂದುವರಿದಿದೆ. ಹಾಸ್ಯನಟಿ ಭಾರತಿ ಸಿಂಗ್ ಮನೆ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ಮಾಡಿದ್ದರು.

  ವಿಚಾರಣೆ ಬಳಿಕ ನಟಿ ಭಾರತಿ ಸಿಂಗ್‌ ಅವರನ್ನು ಎನ್‌ಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದೀಗ, ಭಾರತಿ ಸಿಂಗ್ ಅವರ ಪತಿ ಹರ್ಷಾ ಲಿಂಬಾಚಿಯಾ ಅವರನ್ನು ಸಹ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  ಭಾರತಿ ಸಿಂಗ್ ಮತ್ತು ಪತಿ ಹರ್ಷಾ ಲಿಂಬಾಚಿಯಾ ಇಬ್ಬರು ಡ್ರಗ್ಸ್ ಸೇವನೆ ಮಾಡುತ್ತಾರೆ ಎಂಬ ಮಾಹಿತಿ ಮೆರೆಗೆ ಶನಿವಾರ ಬೆಳಗ್ಗೆ ನಟಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ದಾಳಿಯ ವೇಳೆ ಎನ್‌ಸಿಬಿ ಅಧಿಕಾರಿಗಳಿಗೆ 86.5 ಗ್ರಾಂ ಗಾಂಜಾ ವಶಕ್ಕೆ ಸಿಕ್ಕಿದೆ.

  ಕಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ಎನ್‌ಸಿಬಿ ದಾಳಿ

  ಈ ಕುರಿತು ವಿಚಾರಣೆ ನಡೆಸಿದಾಗ ಭಾರತಿ ಮತ್ತು ಪತಿ ಇಬ್ಬರೂ ಗಾಂಜಾ ಸೇವಿಸುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಶನಿವಾರ ಭಾರತಿ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಇದೀಗ, ಹರ್ಷಾ ಅವರನ್ನು ಸಹ ಅರೆಸ್ಟ್ ಮಾಡಲಾಗಿದೆ.

  ಭಾರತಿ 'ಕಾಮಿಡಿ ಸರ್ಕಸ್' ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಹಲವು ವರ್ಷ ಕಾಮಿಡಿ ಶೋ ನಡೆಸಿದ್ದರು, ಪ್ರಸ್ತುತ ಭಾರತಿ ಮತ್ತು ಆಕೆಯ ಪತಿ 'ಗ್ರೇಟ್ ಇಂಡಿಯನ್ ಡಾನ್ಸರ್' ಶೋ ನಿರೂಪಿಸುತ್ತಾರೆ. ಭಾರತಿ ಕಪಿಲ್ ಶರ್ಮಾ ಶೋ ನ ಭಾಗವೂ ಆಗಿದ್ದಾರೆ.

  ಇನ್ನು ಭಾರತಿ ಸಿಂಗ್ ಕನ್ನಡದ 'ರಂಗನ್ ಸ್ಟೈಲ್' ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

  English summary
  After comedians Bharti Singh, NCB arrested her husband Harsh Limbachiyaa in drugs probe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X