twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ವಿಮರ್ಶಕರಿಗೆ ದುಲ್ಕರ್​ ಸಲ್ಮಾನ್​ ಖಡಕ್​ ಮಾತು

    |

    ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ದುಲ್ಕರ್​ ಸಲ್ಮಾನ್ ​ ಸದ್ಯ ಭಾರತ ಚಿತ್ರರಂಗದ ಬಹುಬೇಡಿಕೆಯ ನಟರಲ್ಲೊಬ್ಬರು. ಇತ್ತೀಚಿಗೆ ಬಿಡುಗಡೆಯಾದ 'ಸೀತಾ ರಾಮನ್'​ ಚಿತ್ರ ದುಲ್ಕರ್​ ಸಲ್ಮಾನ್​ ಖ್ಯಾತಿ ಇನ್ನಷ್ಟು ಹೆಚ್ಚಿದ್ದು, ಚಿತ್ರ ಹಿಂದಿಯ್ಲಲೂ ಡಬ್​ ಆಗಿದೆ. ಬಾಲಿವುಡ್​ ಚಿತ್ರಗಳಲ್ಲೂ ಬ್ಯೂಸಿಯಾಗಿರುವ ದುಲ್ಕರ್​ ಸಲ್ಮಾನ್​ ಥ್ರಿಲ್ಲರ್​ ಸಿನಿಮಾವೊಂದರಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಪ್ಯಾಡ್​ಮ್ಯಾನ್​ನಂತಹ ವಿಭಿನ್ನ ಚಿತ್ರಗಳನ್ನು ನೀಡಿರುವ ಆರ್​.ಬಾಲ್ಕಿ ನಿರ್ದೇಶನದ ಥ್ರಿಲ್ಲರ್​ 'ಚುಪ್'​ ಚಿತ್ರದಲ್ಲಿ ದುಲ್ಕರ್​ ಸಲ್ಮಾನ್​ ಅಭಿನಯಿಸುತ್ತಿದ್ದು, ಈಗಾಗಲೇ ಚಿತ್ರದ ಟ್ರೈಲರ್​ ಕೂಡ ಬಿಡುಗಡೆಯಾಗಿದೆ. ಕೇವಲ 2 ನಿಮಿಷದ ಟ್ರೈಲರ್​ ಹತ್ತಾರು ಕಥೆಗಳನ್ನು ಹೇಳುತ್ತಿದ್ದು, ಒಬ್ಬ ಸೀರಿಯಲ್​ ಕಿಲ್ಲರ್​ನ ಬದುಕಿನ ಸುತ್ತಾ 'ಚುಪ್'​ ಚಿತ್ರದ ಕಥೆ ಸುತ್ತಲಿದೆ ಎನ್ನುವುದು ಟ್ರೈಲರ್​ನಲ್ಲಿ ಕಂಡುಬಂದಿದೆ.

    ಸಿನಿಮಾ ವಿಮರ್ಶಕರನ್ನು ಕೊಲ್ಲುತ್ತಿರುವ ಸೈಕೋ ಕಿಲ್ಲರ್!ಸಿನಿಮಾ ವಿಮರ್ಶಕರನ್ನು ಕೊಲ್ಲುತ್ತಿರುವ ಸೈಕೋ ಕಿಲ್ಲರ್!

    'ಚುಪ್​- ರಿವೇಂಜ್​ ಆಫ್​ ಆರ್ಟಿಸ್ಟ್'​ ಚಿತ್ರದ ಬಗ್ಗೆ ಟ್ರೈಲರ್​ ಭಾರಿ ಕುತೂಹಲ ಹುಟ್ಟುಹಾಕಿದೆ. ಚಿತ್ರದ ಶೀರ್ಷಿಕೆಯೆ ಹೇಳುವಂತೆ ಇದೊಂದು ನಟ ರಿವೇಂಜ್ ​ ಸ್ಟೋರಿಯಾಗಿದೆ. ಚಿತ್ರಗಳನ್ನು ವಿಮರ್ಶೆ ಮಾಡುವರನ್ನು ಸೈಕೋಪಾತ್​ ಕಿಲ್ಲರ್ ​ ಒಬ್ಬ ಕೊಲ್ಲುವುದೇ ಚಿತ್ರದ ಕಥಾ ವಸ್ತುವಾಗಿದೆ.

     ವಿಮರ್ಶಕರನ್ನೇ ಕೊಲ್ಲುವ ಸೈಕೋ ಕಿಲ್ಲರ್​ ಯಾರು..?

    ವಿಮರ್ಶಕರನ್ನೇ ಕೊಲ್ಲುವ ಸೈಕೋ ಕಿಲ್ಲರ್​ ಯಾರು..?

    ಇನ್ನು 'ಚುಪ್'​ ಚಿತ್ರದ ಟ್ರೈಲರ್​ ಸಖತ್​ ಸಂಚಲನ ಮೂಡಿಸಿದ್ದು, ಯೂಟ್ಯೂಬ್​ನಲ್ಲಿ 10 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ​ಒಂದು ಚಿತ್ರದ ಫೇಕ್​ ರಿವ್ಯೂನಿಂದ ಒಬ್ಬ ನಟ ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಇದರಿಂದ ಸೈಕೋ ಕಿಲ್ಲರ್​ ಆಗಿ ಬದಲಾಗುವ ಆತ ಫೇಕ್​ ರಿವ್ಯೂ ಬರೆದವರ ವಿರುದ್ಧ ಸೇಡುತೀರಿಸಿಕೊಳ್ಳುತ್ತಾನೆ ಎನ್ನುವುದು ಟ್ರೈಲರ್​ನಲ್ಲಿ ರಿವೀಲ್​ ಮಾಡಲಾಗಿದೆ. ಇನ್ನು ಸೈಕೋ ಕಿಲ್ಲರ್​ ಹಾಗೂ ನಾಯಕನಿಗೂ ಏನು ಸಂಬಂಧ..ಚಿತ್ರದಲ್ಲಿ ಹಿರಿಯ ಪೊಲೀಸ್​ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸನ್ನಿ ಡಿಯೋಲ್​ ಸೈಕೋ ಕಿಲ್ಲರ್​ನನ್ನು ಹಿಡಿಯುತ್ತಾರಾ..? ಎನ್ನುವುದು ಚಿತ್ರ ತೆರೆಕಂಡ ಬಳಿಕವಷ್ಟೇ ತಿಳಿದು ಬರಬೇಕಿದೆ.

    ಉಡುಪಿ: 'ಕುರುಪ್' ಸಿನಿಮಾ ನೋಡಿ ಕೊಲೆ, ಪೊಲೀಸರ ಮುಂದೆ ನಡೆಯಲಿಲ್ಲ ಆಟ!ಉಡುಪಿ: 'ಕುರುಪ್' ಸಿನಿಮಾ ನೋಡಿ ಕೊಲೆ, ಪೊಲೀಸರ ಮುಂದೆ ನಡೆಯಲಿಲ್ಲ ಆಟ!

     ಚಿತ್ರದ ವಿಮರ್ಶೆ ಎನ್ನುವುದು ನಾಯಕನಿಗೆ ಅತಿ ಮುಖ್ಯ

    ಚಿತ್ರದ ವಿಮರ್ಶೆ ಎನ್ನುವುದು ನಾಯಕನಿಗೆ ಅತಿ ಮುಖ್ಯ

    'ಚುಪ್'​ ಸಿನಿಮಾ ಬಗ್ಗೆ ಚಿತ್ರದ ನಾಯಕ ದುಲ್ಕರ್​ ಸಲ್ಮಾನ್​ ಫಿಲ್ಮೀಬೀಟ್ ​ ಜೊತೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫೋನ್​ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಚಲನಚಿತ್ರ ವಿಮರ್ಶಕನಾಗುತ್ತಾನೆ. ಒಬ್ಬ ವ್ಯಕ್ತಿಗೆ ಟೀಕಿಸಲು ಚಲನಚಿತ್ರ ಒಂದು ಸುಲಭ ಮಾಧ್ಯಮ. ಅದೇ ಇತರ ವಿಚಾರದಲ್ಲಿ ಅಧ್ಯಯನ ಮಾಡಬೇಕಾಗುತ್ತದೆ. ಹೀಗಾಗಿ ಜನ ಬಹುಬೇಗ ಚಿತ್ರವನ್ನು ಟೀಕಿಸುತ್ತಾರೆ. ಆದರೆ ಚಿತ್ರದ ವಿಮರ್ಶೆ ಎನ್ನುವುದು ಒಬ್ಬ ನಾಯಕನಿಗೆ ಬಹಳ ಮುಖ್ಯ ಏಕೆಂದರೆ ಅದು ಆತ ಇನ್ನೂ ಉತ್ತಮ ಸಿನಿಮಾಗಳನ್ನು ಮಾಡಲು ನೀಡುವ ಪ್ರೋತ್ಸಾಹ ಎಂದಿದ್ದಾರೆ.

     ಒಂದು ಚಿತ್ರಕ್ಕಾಗಿ 400 ಜನರ ಶ್ರಮವಿರುತ್ತದೆ

    ಒಂದು ಚಿತ್ರಕ್ಕಾಗಿ 400 ಜನರ ಶ್ರಮವಿರುತ್ತದೆ

    ಒಂದು ಸಿನಿಮಾವನ್ನು ನೋಡಿದ ಒಬ್ಬ ಪ್ರೇಕ್ಷಕ ಯಾವುದೇ ರೀತಿಯ ಅಭಿಪ್ರಾಯವನ್ನು ಹೊಂದಿರಬಹುದು. ಒಬ್ಬಬೊಬ್ಬರ ಆಲೋಚನೆ ವಿಭಿನ್ನ. ನಟನ ಅಭಿಪ್ರಾಯವೂ ಕೂಡ ಚಿತ್ರದ ಮೇಲೆ ಪರಿಣಾಮ ಬೀರುತ್ತದೆ. ನಟನ ಜೀವನ ಶೈಲಿ, ಅಥವಾ ಆತನ ನಡವಳಿಕೆಯಿಂದ ಒಬ್ಬ ವ್ಯಕ್ತಿ ಆತನನ್ನು ದ್ವೇಷಿಸಬಹುದು ಆದರೆ ಆತನ ಸಿನಿಮಾಗಳನ್ನು ದ್ವೇಷಿಸುವುದು ಸರಿಯಲ್ಲ. ಆತನೊಂದಿಗೆ ಇನ್ನೂ ಅನೇಕ ನಟರು ನಟಿಸಿರಬಹುದು. ಅಲ್ಲದೇ ಒಂದು ಚಿತ್ರಕ್ಕಾಗಿ 300-400 ಜನ ಕೆಲಸ ಮಾಡಿರುತ್ತಾರೆ ಹೀಗಾಗಿ ಒಬ್ಬ ವ್ಯಕ್ತಿಯ ಕಾರಣಕ್ಕೆ ಒಂದು ಸಿನಿಮಾವನ್ನು ದ್ವೇಷಿಸಬಾರದು ಎಂದರು.

    ದಿಲ್ ಸೇ, ರೋಜಾ ನೆನಪಿಸಿದ ರಶ್ಮಿಕಾ ಹೊಸ ಸಿನಿಮಾ 'ಸೀತಾ ರಾಮಂ'ದಿಲ್ ಸೇ, ರೋಜಾ ನೆನಪಿಸಿದ ರಶ್ಮಿಕಾ ಹೊಸ ಸಿನಿಮಾ 'ಸೀತಾ ರಾಮಂ'

    ಸಂಗೀತ ಸಂಯೋಜಕರಾದ ಅಮಿತಾಭ್​ ಬಚ್ಚನ್​

    ಸಂಗೀತ ಸಂಯೋಜಕರಾದ ಅಮಿತಾಭ್​ ಬಚ್ಚನ್​

    ಆರ್​.ಬಾಲ್ಕಿ ನಿರ್ದೇಶನದ 'ಚುಪ್' ಚಿತ್ರದಲ್ಲಿ ಮತ್ತೊಂದು ವಿಶೇಷತೆಯನ್ನು ನಾವು ಗುರುತಿಸಬಹುದಾಗಿದೆ. ಬಾಲಿವುಡ್​ನ ಬಿಗ್ ಬಿ ಅಮಿತಾಭ್​ ಬಚ್ಚನ್​ 'ಚುಪ್'​ ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ​ ಚಿತ್ರ ಸಪ್ಟೆಂಬರ್​ 23ರಂದು ತೆರೆ ಕಾಣಲಿದ್ದು, ದುಲ್ಕರ್​ ಸಲ್ಮಾನ್​ ಜೊತೆ ಸನ್ನಿ ಡಿಯೋಲ್​, ಶ್ರೆಯಾ ಧನ್ವಂತರಿ ಹಾಗೂ ಪೂಜಾ ಭಟ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    English summary
    Actror Dulquer Salman react on his next movie Chup. He says that you might dislike an actor but that doesn't mean their films deserves hate.
    Saturday, September 17, 2022, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X