»   » ಆಸ್ಕರ್ ಪ್ರಶಸ್ತಿಯ ಗರಿ 'ಏಕಲವ್ಯ'ನಿಗೆ ಇಲ್ಲ!

ಆಸ್ಕರ್ ಪ್ರಶಸ್ತಿಯ ಗರಿ 'ಏಕಲವ್ಯ'ನಿಗೆ ಇಲ್ಲ!

Posted By:
Subscribe to Filmibeat Kannada

ನವದೆಹಲಿ, ಜ.17: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತಾಬ್ ಅಭಿನಯದ, ವಿದುವಿನೋದ್ ಚೋಪ್ರಾ ಅವರ 'ಏಕಲವ್ಯ' ಮೊದಲ ಸುತ್ತಿನಲ್ಲೇ ಸೋತಿದೆ.

ಆಸ್ಕರ್‌ನ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ಒಟ್ಟು 63 ಚಿತ್ರಗಳು ಬಂದಿದ್ದವು. ಮೊದಲ ಸುತ್ತಿನಲ್ಲಿ 9 ಚಿತ್ರಗಳು ಆಯ್ಕೆಯಾಗಿವೆ, ಏಕಲವ್ಯ ಚಕ್ರವ್ಯೂಹ ಬೇಧಿಸದೆ ಮುಗ್ಗರಿಸಿ ಬಿದ್ದಿದೆ. ಆಸ್ಟ್ರೀಯಾದ 'ದಿ ಕೌಂಟರ್ ಪೀಟರ್ಸ್', ಕೆನಡಾದ 'ಡೇಸ್ ಆಫ್ ಡಾರ್ಕ್‌ನೆಸ್', ಇಸ್ರೇಲ್‌ನ 'ಬೀವ್‌ಫೋರ್ಟ್', ಇಟಲಿಯ 'ದಿ ಅನ್‌ನೋನ್ ವುಮನ್', ಕಜಕಿಸ್ತಾನದ 'ಮಂಗೋಲ್', ಪೋಲಂಡ್‌ನ 'ಕಾಟಿನ್', ರಷ್ಯಾದ '12', ಬ್ರೆಜಿಲ್‌ನ 'ದಿ ಇಯರ್ ಮೈ ಪೇರೆಂಟ್ಸ್ ವೆಂಟು ಟು ವೆಕೇಷನ್' ಮತ್ತು ಸೆರ್ಬಿಯಾದ 'ದಿ ಟ್ರ್ಯಾಪ್' ಮೊದಲ ಸುತ್ತಿನಲ್ಲಿ ಆಯ್ಕೆಯಾದ ಸಿನಿಮಾಗಳು.

ಅಂತಿಮ ಸುತ್ತಿನಲ್ಲಿ ಐದು ಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಚಿತ್ರವಾಗಿ ಏಕಲವ್ಯ ಆಯ್ಕೆ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಲಾಗಿತ್ತು. ವಿದುವಿನೋದ್ ಚೋಪ್ರಾ ತೀರ್ಪುಗಾರರಿಗೆ ಆತ್ಮೀಯರಾಗಿದ್ದ ಕಾರಣ ಏಕಲವ್ಯ ಆಯ್ಕೆಯಾಗಿತ್ತು ಎಂದು  'ಧರ್ಮ' ಚಿತ್ರದ ನಿರ್ದೇಶಕಿ ಭಾವನಾ ತಲ್ವಾರ್ ಆರೋಪಿಸಿದ್ದರು. ಫೆ.24ರಂದು 80ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಕೋಡಾಕ್ ಥಿಯೇಟರ್‌ನಲ್ಲಿ ನಡೆಯಲಿದೆ.   

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada