For Quick Alerts
  ALLOW NOTIFICATIONS  
  For Daily Alerts

  ಏಕ್ತಾ ಕಪೂರ್ ಸ್ಟೈಲ್ ನೋಡಿ ಆಡಿಕೊಂಡು ನಕ್ಕ ನೆಟ್ಟಿಗರು.!

  By Harshitha
  |

  ''ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥೀ', 'ಕಹಾನಿ ಘರ್ ಘರ್ ಕಿ', 'ಕುಟುಂಬ್', 'ಕಸಮ್ ಸೇ', 'ಕುಚ್ ಇಸ್ ತರಹ್', 'ಯೇ ಹೇ ಮೊಹಬ್ಬತೇ', 'ಕುಂಕುಮ್ ಭಾಗ್ಯ', 'ಕಸಮ್ ತೇರೆ ಪ್ಯಾರ್ ಕಿ', 'ಕುಂಡಲಿ ಭಾಗ್ಯ', 'ನಾಗಿನ್' ಸೇರಿದಂತೆ ಹಲವಾರು ಸೂಪರ್ ಹಿಟ್ ಮೆಗಾ ಸೀರಿಯಲ್ ಗಳನ್ನು ಹಿಂದಿ ಕಿರುತೆರೆಗೆ ನೀಡಿರುವ ಖ್ಯಾತಿ ಏಕ್ತಾ ಕಪೂರ್ ಗೆ ಸಲ್ಲುತ್ತದೆ.

  ಟಿ.ಆರ್.ಪಿ ಲೆಕ್ಕಾಚಾರದಲ್ಲಿ ಸದಾ ಮುಂಚೂಣಿಯಲ್ಲಿರುವ ಏಕ್ತಾ ಕಪೂರ್ ಗೆ ವೀಕ್ಷಕರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ.

  'ಬಾಲಾಜಿ ಟೆಲಿ ಫಿಲ್ಮ್ಸ್' ಮೂಲಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಏಕ್ತಾ ಕಪೂರ್ 'ಬಾಲಾಜಿ ಮೋಷನ್ ಪಿಕ್ಚರ್ಸ್' ಮೂಲಕ ಹಲವು ಹಿಂದಿ ಸಿನಿಮಾಗಳಿಗೆ ಬಂಡವಾಳ ಕೂಡ ಹಾಕಿದ್ದಾರೆ. ಹೀಗಾಗಿ ಏಕ್ತಾ ಕಪೂರ್ ಹೆಸರು ಬಾಲಿವುಡ್ ಅಂಗಳದಲ್ಲಿ ಚಿರಪರಿಚಿತ.

  ಇಂತಿಪ್ಪ ಏಕ್ತಾ ಕಪೂರ್ ಮೊನ್ನೆ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಫ್ಯಾಶನ್ ಸೆನ್ಸ್ ಮರೆತು ಫಂಕ್ಷನ್ ವೊಂದಕ್ಕೆ ವಿಚಿತ್ರ ಉಡುಗೆ ತೊಟ್ಟು ಟ್ರೋಲಿಗರ ಬಾಯಿಗೆ ಏಕ್ತಾ ಕಪೂರ್ ಆಹಾರವಾಗಿದ್ದಾರೆ. ಅಷ್ಟಕ್ಕೂ, ಏಕ್ತಾ ಕಪೂರ್ ತೊಟ್ಟಿದ್ದ ಉಡುಗೆ ಎಂಥದ್ದು.? ನೀವೇ ನೋಡಿ....

  ಹೇಗಿದೆ ಏಕ್ತಾ ಕಪೂರ್ ಉಡುಗೆ.?

  ಹೇಗಿದೆ ಏಕ್ತಾ ಕಪೂರ್ ಉಡುಗೆ.?

  ಡೆನಿಮ್ ಜೀನ್ಸ್ ಗೆ ಶರ್ಟ್ ಅಥವಾ ಟಿ-ಶರ್ಟ್ ಧರಿಸುವುದನ್ನು ಬಿಟ್ಟು ಕೆಂಪು ಬಣ್ಣದ ಗೌನ್ ಮಾದರಿಯ ಟಾಪ್ ನ ಏಕ್ತಾ ಕಪೂರ್ ಧರಿಸಿದ್ದರು. ಜೀನ್ಸ್ ಗೆ ಆ ಟಾಪ್ ಸರಿ ಹೊಂದುತ್ತಿರಲಿಲ್ಲ. ಹೀಗಾಗಿ ನೆಟ್ಟಿಗರು ಏಕ್ತಾ ಕಪೂರ್ ಕಾಲೆಳೆಯುತ್ತಿದ್ದಾರೆ.

  ಏಕ್ತಾ ಕಪೂರ್ ತೆರಿಗೆ ವಂಚನೆ ರು.30 ಕೋಟಿಏಕ್ತಾ ಕಪೂರ್ ತೆರಿಗೆ ವಂಚನೆ ರು.30 ಕೋಟಿ

  ಏಕ್ತಾ ಹೀಗೆ ಕಾಣಿಸಿಕೊಂಡಿದ್ದು ಎಲ್ಲಿ.?

  ಏಕ್ತಾ ಹೀಗೆ ಕಾಣಿಸಿಕೊಂಡಿದ್ದು ಎಲ್ಲಿ.?

  ಏಕ್ತಾ ಕಪೂರ್ ನಿರ್ಮಾಣದ 'ಯೇ ಹೇ ಮೊಹಬ್ಬತೇ' ಧಾರಾವಾಹಿ 1500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಖುಷಿಯನ್ನ ಸೆಲೆಬ್ರೇಟ್ ಮಾಡಲು ಮುಂಬೈನಲ್ಲಿರುವ ಜೆ.ಡಬ್ಲ್ಯೂ.ಮ್ಯಾರಿಯೆಟ್ ಹೋಟೆಲ್ ನಲ್ಲಿ ಮೊನ್ನೆಯಷ್ಟೇ ಏಕ್ತಾ ಕಪೂರ್ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಏಕ್ತಾ ಕಪೂರ್ ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದ್ದು ಈ ಅವತಾರದಲ್ಲಿ.

  ಏಕ್ತಾಗೆ 'ಡರ್ಟಿ' ವರ್ಮಾ ಮಿಲಿಯನ್ ಸೀರಿಯಲ್ ಕಿಸ್ಏಕ್ತಾಗೆ 'ಡರ್ಟಿ' ವರ್ಮಾ ಮಿಲಿಯನ್ ಸೀರಿಯಲ್ ಕಿಸ್

  ಫ್ಯಾಶನ್ ಡಿಸಾಸ್ಟರ್.!

  ಫ್ಯಾಶನ್ ಡಿಸಾಸ್ಟರ್.!

  ''ಇಂತಹ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಏಕ್ತಾ ಕಪೂರ್ ಏನು ಯೋಚನೆ ಮಾಡುತ್ತಿದ್ದರು.? ಇದು ಫ್ಯಾಶನ್ ಲೋಕದ ಡಿಸಾಸ್ಟರ್. ಇಂತಹ ಔಟ್ ಫಿಟ್ ಗಳಿಂದ ಡಿಸೈನರ್ ಗಳು ಅದ್ಹೇಗೆ ಸಂಪಾದನೆ ಮಾಡುತ್ತಿದ್ದಾರೋ.?'' ಅಂತ ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.

  ಫ್ಯಾಶನ್ ಸೆನ್ಸ್ ಇಲ್ವಾ.?

  ಫ್ಯಾಶನ್ ಸೆನ್ಸ್ ಇಲ್ವಾ.?

  ''ಜೀನ್ಸ್ ಮೇಲೆ ಯಾರಾದರೂ ಗೌನ್ ಧರಿಸುತ್ತಾರಾ.? ಏಕ್ತಾ ಕಪೂರ್ ಗೆ ಸ್ವಲ್ಪ ಫ್ಯಾಶನ್ ಸೆನ್ಸ್ ಹೇಳಿಕೊಡಿ. ಸದಾ ಕೆಟ್ಟ ಡ್ರೆಸ್ ಗಳನ್ನೇ ಏಕ್ತಾ ಧರಿಸುತ್ತಾರೆ. ಇನ್ಮೇಲಾದರೂ ಅವರಿಗೆ ಒಳ್ಳೆಯ ಡಿಸೈನರ್ ಸಿಗಲಿ'' ಅಂತ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿದ್ದಾರೆ.

  English summary
  Ekta Kapoor trolled for wearing Gown with Jeans at a Grand party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X