For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗದೆ ತಾಯಿ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಕಪೂರ್ ಕುಡಿ ಏಕ್ತಾ

  |

  ಬಾಲಿವುಡ್‌ನಲ್ಲಿ ಅದರಲ್ಲಿಯೂ ಹಿಂದಿ ಟಿವಿ ವಿಭಾಗದಲ್ಲಿ ಏಕ್ತಾ ಕಪೂರ್ ರದ್ದು ಬಹುದೊಡ್ಡ ಹೆಸರು. ಧಾರಾವಾಹಿಗೆ ವೈಭವ, ಭಿನ್ನ ಕತೆ, ದೊಡ್ಡ ನಟರನ್ನು ತಂದವರು ಏಕ್ತಾ ಕಪೂರ್.

  ಬಹು ಗಟ್ಟಿಗಿತ್ತಿ ಏಕ್ತಾ ಕಪೂರ್ ಸಾಲು-ಸಾಲು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾರೆ. ಹಲವು ಸಿನಿಮಾಗಳನ್ನೂ ನಿರ್ಮಿಸಿರುವ ಏಕ್ತಾ ಗೆ ವಯಸ್ಸು 45. ಇನ್ನೂ ಮದುವೆಯಾಗಿರದ ಏಕ್ತಾ ಕಪೂರ್ ಗಂಡು ಮಗುವೊಂದಕ್ಕೆ ತಾಯಿಯಾಗಿದ್ದಾರೆ.

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಏಕ್ತಾ ಕಪೂರ್, ತಮ್ಮ 'ತಾಯ್ತನ'ದ ಬಗ್ಗೆ ಮಾತನಾಡಿದ್ದಾರೆ. ಮದುವೆ ಆಗದೆ ತಾಯಿ ಆಗಲು ನಿಶ್ಚಯಿಸಿದ್ದೇಕೆ ಎಂಬುದರ ಬಗ್ಗೆಯೂ ಏಕ್ತಾ ಮಾತನಾಡಿದ್ದಾರೆ.

  'ನಾನು ನಿರ್ಮಿಸಿದ ಹಲವು ಧಾರಾವಾಹಿಗಳ ಮೂಲಕ ಮಹಿಳೆಯರಲ್ಲಿ ಮದುವೆಯೇ ಅಂತಿಮ. ಮದುವೆ ಆಗದೇ ಇದ್ದರೆ ಭವಿಷ್ಯ ಇಲ್ಲ ಎಂಬಂತಹ ಭಾವನೆ ಹುಟ್ಟುವಂತೆ ಮಾಡಿಬಿಟ್ಟಿದ್ದೇನೆ. ಹಾಗಾಗಿ ನಾನು ಮದುವೆ ಆಗಬಾರದೆಂದು ವಿಧಿ ನಿರ್ಧರಿಸಿದಂತಿದೆ' ಎಂದಿದ್ದಾರೆ ಏಕ್ತಾ ಕಪೂರ್.

  ನಾನು ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಆಲೋಚನೆ ಮಾಡಿದಾಗ ಮೊದಲಿಗೆ ಕುಟುಂಬದ ಬಳಿ ಹೇಳಿರಲಿಲ್ಲ. ನಾನು ಅದನ್ನು ಹೇಳುವಷ್ಟರಲ್ಲಿ ತನ್ನ ಸಹೋದರ ತುಷಾರ್ ಕಪೂರ್, ಬಾಡಿಗೆ ತಾಯಿ ಮೂಲಕ ತಂದೆಯಾಗಿದ್ದ. ಹಾಗಾಗಿ ನನ್ನ ನಿರ್ಧಾರಕ್ಕೆ ಕುಟುಂಬದವರು ಅಡ್ಡಿ ಪಡಿಸಲಿಲ್ಲ' ಎಂದಿದ್ದಾರೆ ಏಕ್ತಾ.

  ಏಕ್ತಾ ಕಪೂರ್ ಸಹೋದರ ತುಷಾರ್ ಕಪೂರ್ ಸಹ ಬಾಡಿಗೆ ತಾಯಿಯ ಮೂಲಕ ತಂದೆಯಾಗಿದ್ದಾರೆ. ತುಷಾರ್ ಕಪೂರ್ ಗೆ ಒಂದು ಹೆಣ್ಣು ಮಗು ಇದೆ. ಏಕ್ತಾ ಕಪೂರ್ ಗೆ ಒಂದು ಗಂಡು ಮಗು ಇದೆ.

  Recommended Video

  ಟಾಪ್ ಟಾಪ್ ಟಾಪ್ ಟಕ್ಕರ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ | Top Tucker /Filmibeat kannada

  ಏಕ್ತಾ ಕಪೂರ್ ಈವರೆಗೆ 134 ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. 38 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 28 ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರಖ್ಯಾತ ಬಾಲಾಜಿ ಟೆಲಿಫಿಲಮ್ಸ್‌ ಏಕ್ತಾ ಕಪೂರ್ ಒಡೆತನದ್ದೇ.

  English summary
  Producer Ekta Kapoor talked about why she did not get married and become mother.
  Tuesday, February 9, 2021, 20:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X