»   » ದೇವಸ್ಥಾನದಲ್ಲಿ ಹೇಮಾ ಮಾಲಿನಿ ಪುತ್ರಿ ಇಷಾ ಮದುವೆ

ದೇವಸ್ಥಾನದಲ್ಲಿ ಹೇಮಾ ಮಾಲಿನಿ ಪುತ್ರಿ ಇಷಾ ಮದುವೆ

Posted By:
Subscribe to Filmibeat Kannada
ಬಾಲಿವುಡ್‌ನ ತಾರಾ ಜೋಡಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಪುತ್ರಿ, ಬಾಲಿವುಡ್ ತಾರೆ ಇಷಾ ಡಿಯೋಲ್ ಮದುವೆ ಜೂ.29ರಂದು ನೆರವೇರಲಿದೆ. ಇಷಾ ನಿಶ್ಚಿತಾರ್ಥ ಕೇವಲ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಫೆಬ್ರವರಿಯಲ್ಲೇ ನಡೆದಿತ್ತು.

ಸಿನಿಮಾ ತಾರೆಗಳ ಮದುವೆ ಎಂದರೆ ಅದ್ದೂರಿಯಾಗಿ ನಡೆಯುತ್ತದೇ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಇಷಾ ಡಿಯೋಲ್ ಮದುವೆ ಮಾತ್ರ ಸರಳವಾಗಿ ನಡೆಯುತ್ತಿದೆ. ಮುಂಬೈನ ಗುಡಿಯೊಂದರಲ್ಲಿ ಇಷಾ ಸಪ್ತಪದಿ ತುಳಿಯಲಿದ್ದಾರೆ.

ಬಾಂದ್ರಾದ ಉದ್ಯಮಿ ಭರತ್ ತಕ್ತಾನಿ ಕೈಹಿಡಿಯಲಿದ್ದಾರೆ ಇಷಾ. ಇವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದರು. ಬಳಿಕ ಇವರಿಬ್ಬರ ಕುಟುಂಬಿಕರ ಕಣ್ಣಿಗೆ ಬಿದ್ದು ಎರಡೂ ಮನೆ ಕಡೆಯವರು ಇವರ ಮದುವೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಈಗ ಗಟ್ಟಿಮೇಳ ಮೊಳಗುತ್ತಿದೆ.

ಮದುವೆಗೆ ಸೀಮಿತ ಸಂಖ್ಯೆಯ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುತ್ತಿದೆ ಎಂದು ಹೇಮಾ ಮಾಲಿನಿ ತಿಳಿಸಿದ್ದಾರೆ. ಮದುವೆ ಕೆಲಸಗಳು ಭರದಿಂದ ಸಾಗುತ್ತಿವೆ. ಮದುವೆ ಬಳಿಕ ಜೂ. 30ರಂದು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಮದುವೆ ಎಲ್ಲರಿಗೂ ವಿವಾಹ ಭೋಜನ ಹಾಕಿಸಲಿದ್ದಾರೆ ಧರ್ಮೇಂದ್ರ ದಂಪತಿಗಳು.

ವಿವಾಹ ಭೋಜನ ಸಮಾರಂಭಕ್ಕೆ ಸಿನಿಮಾ ತಾರೆಗಳು, ರಾಜಕೀಯ ಧುರೀಣರು ಹಾಗೂ ಉದ್ಯಮಿಗಳನ್ನು ಆಹ್ವಾನಿಸಲಾಗುತ್ತಿದೆ ಎಂಬ ವಿವರಗಳನ್ನು ಕನಸಿನ ಕನ್ಯೆ ಹೇಮಾ ಮಾಲಿನಿ ನೀಡಿದ್ದಾರೆ. ಸದ್ಯಕ್ಕೆ ಧರ್ಮೇಂದ್ರ ಯುಎಸ್‌ನಲ್ಲಿದ್ದು, ತಮ್ಮ ಮಗಳ ಮದುವೆ ನಿಮಿತ್ತ ಅವರು ಶೀಘ್ರದಲ್ಲೇ ಭಾರತಕ್ಕೆ ಆಗಮಿಸುತ್ತಿದ್ದಾರೆ.

'ಕೋಯಿ ಮೇರೆ ದಿಲ್ ಸೆ ಪೂಚೆ' ಎಂಬ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಇಷಾ ಅಡಿಯಿಟ್ಟಿದ್ದರು. ಈ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು. ಧೂಮ್, ನೋ ಎಂಟ್ರಿ, ದಸ್ ಚಿತ್ರಗಳು ಇಷಾಗೆ ಹೆಸರು ತಂದುಕೊಟ್ಟಂತಹವು. ಭರತನಾಟ್ಯ, ಒಡಿಸ್ಸಿ ನೃತ್ಯ ಪ್ರಕಾರಗಳಲ್ಲಿ ತರಬೇತಿಯನ್ನೂ ಪಡೆದಿದ್ದಾರೆ ಇಷಾ. (ಏಜೆನ್ಸೀಸ್)

English summary
Dream Girl Hema Malini and Dharmendra daughter and bollywood actrss Esha Deol to tie the knot on 29th June with her fiance Bharat Takhtani. The marriage will be held at a temple in Subarban Mumbai.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada