»   » ಲಾಸ್ ವೇಗಸ್ : ಮಾಜಿ ವಿಶ್ವ ಸುಂದರಿ ಮದ್ವೆ ಆಯ್ತಂತೆ!

ಲಾಸ್ ವೇಗಸ್ : ಮಾಜಿ ವಿಶ್ವ ಸುಂದರಿ ಮದ್ವೆ ಆಯ್ತಂತೆ!

Posted By:
Subscribe to Filmibeat Kannada

1997ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದಿದ್ದ ಹೈದರಾಬಾದಿನ ಚೆಲುವೆ ಡಯಾನಾ ಹೇಡನ್ ಮದುವೆಯಾಗಿರುವುದಾಗಿ ಘೋಷಿಸಿದ್ದಾರೆ. ಕಳೆದ ಶುಕ್ರವಾರ ನನ್ನ ಗೆಳೆಯ ಕಾಲಿನ್ ಡಿಕ್ ಮದುವೆಯಾದೆ ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ಅಭಿಮಾನಿಗಳಿಗೆ ಸುದ್ದಿ ಕೊಟ್ಟಿದ್ದಾಳೆ.

ಸ್ವಚ್ಛ ಬಿಳಿಪಿನ ವಸ್ತ್ರ ಧರಿಸಿದ್ದ ಡಯಾನಾ ರಾಜಕುಮಾರಿ ರೀತಿ ಕಾಣುತ್ತಿದ್ದಳು. ವಧುವಿನ ಅಪೇಕ್ಷೆಯಂತೆ ಮೂರು ದಿನಗಳ ಮದುವೆ ಸಮಾರಂಭ ಆಯೋಜನೆ ಮಾಡಲಾಗಿತ್ತು. ಅರ್ಚನಾ ಕೊಚ್ಚರ್ ವಸ್ತ್ರ ವಿನ್ಯಾಸಕ್ಕೆ ಅಮೆರಿಕದವರು ಮಾರು ಹೋದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೂರು ದಿನ ವಿಜೃಂಭಣೆಯ ಮದುವೆ ಸಮಾರಂಭ ಲಾಸ್ ವೆಗಾಸ್ ನಲ್ಲಿ ಆಯೋಜಿಸಲಾಗಿತ್ತಾದರೂ ಇದೊಂದು ಖಾಸಗಿ ಕಾರ್ಯಕ್ರಮವಾಗಿತ್ತು. ವಧು ವರರ ಕಡೆಯ ಕುಟುಂಬದವರು, ಆಪ್ತ ವರ್ಗ ಮಾತ್ರ ಮದುವೆ ಮನೆ ಸಂಭ್ರಮವನ್ನು ಕಂಡರು.

Ex-Miss World Diana Hayden Gets Married!

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಾಲಿನ್ ಡಿಕ್ ಜತೆ ಡೇಟಿಂಗ್ ಮಾಡಲು ಶುರು ಮಾಡಿದ ಡಯಾನಾ ಶೀಘ್ರದಲ್ಲೇ ವಿವಾಹ ಬಂಧನಕ್ಕೊಳಪಟ್ಟಿದ್ದ್ದಾರೆ. ಆಂಗ್ಲೋ ಇಂಡಿಯನ್ ಕ್ರಿಶ್ಚಿಯನ್ ಆಗಿರುವ ಡಯಾನಾ ಹೈದರಾಬಾದಿನಲ್ಲಿ ಹುಟ್ಟಿ ಬೆಳದವರು. ಅಮೆರಿಕ ಮೂಲದ ಕಾಲಿನ್ ಡಿಕ್ ಮುಂಬೈನ ಸರ್ಕಾರೇತರ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಡಯಾನಾ ಹಾಗೂ ಡಿಕ್ ಈಗ ಇಟಲಿಯಲ್ಲಿ ಹನಿಮೂನ್ ಗೆ ತೆರಳಿದ್ದಾರೆ.

1997ರಲ್ಲಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಆದ ಡಯಾನಾ ಮುಂದೆ ವಿಶ್ವ ಸುಂದರಿ ಪಟ್ಟವನ್ನೇ ಅದೇ ವರ್ಷ ಗಳಿಸಿದರು. ಬಾಲಿವುಡ್ , ಟಾಲಿವುಡ್ ನಲ್ಲಿ ಡಯಾನಾ ಹೆಚ್ಚು ಅವಕಾಶ ಪಡೆಯಲಿಲ್ಲ. ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಎರಡನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಡಯಾನಾ ಭಾಗವಹಿಸಿದ್ದು ಬಿಟ್ಟರೆ ಮತ್ತೆ ಸುದ್ದಿ ಇರಲಿಲ್ಲ.

English summary
Former Miss World 1997 Diana Hayden got married to fiance Collin Dick on Friday, September 13, 2013. As per the reports, it was a fairytale wedding for Diana and Collin, that was held at Las Vegas.
Please Wait while comments are loading...