»   » ಫೇಸ್ಬುಕ್ಕಿನಿಂದ ಹೊರಗಾದ ಪೂನಂ ಪಾಂಡೆ

ಫೇಸ್ಬುಕ್ಕಿನಿಂದ ಹೊರಗಾದ ಪೂನಂ ಪಾಂಡೆ

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಐಸ್ ಬಕೆಟ್ ಚಾಲೆಂಜ್ 'ಹಾಟ್' ಆಗಿ ತೆಗೆದುಕೊಂಡ ಪ್ರಚಾರ ಪ್ರಿಯೆ ಪೂನಂ ಪಾಂಡೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ಕಿನಿಂದ ಹೊರಗಾಗಿದ್ದಾರೆ. ಪೂನಂ ಅವರೇ ಫೇಸ್ ಬುಕ್ ನಿಂದ ಹೊರಬಿದ್ರಾ? ಅಥವಾ ಫೇಸ್ ಬುಕ್ ಅವರನ್ನು ಹೊರದಬ್ಬಿತೇ? ಗೊತ್ತಿಲ್ಲ.

ಒಟ್ಟಾರೆ, ಟ್ವಿಟ್ಟರ್ ನಲ್ಲಿ ಸದಾ ಕಾಲ ಸಕ್ರಿಯವಾಗಿರುವ ಪೂನಂ ಅವರಿಗೂ ಫೇಸ್ ಬುಕ್ಕಿಗೂ ನಂಟು ಕಳಚಿಕೊಂಡಿದೆ. ಒಂದಿಲ್ಲೊಂದು ಕಾರಣಕ್ಕೆ ಬಟ್ಟೆ ಕಳಚಿ ಪೋಸ್ ಕೊಡುವ ಪೂನಂ ತಲೆಯಲ್ಲಿ ಏನು ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಫೇಸ್ ಬುಕ್ ಅಕೌಂಟ್ ಡೀ ಆಕ್ಟಿವೇಟ್ ಆಗಿದ್ದರೆ ಅದನ್ನು ಪುನಂ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ ಎಂಬುದು ತಿಳಿಯದ ದಡ್ಡಿ ಎಂದು ಜನ ನಗಾಡಿದ್ದಾರೆ.

Facebook Says Bye Bye To Poonam Pandey!

'ನನ್ನ ಅಧಿಕೃತ ಖಾತೆ ಇನ್ನಿಲ್ಲ. ಏನು ಮಾಡುವುದೋ ಗೊತ್ತಿಲ್ಲ. ಲಕ್ಷಾಂತರ ಫ್ಯಾನ್ಸ್ ಇದ್ರು ನನ್ನ ಹಿಂದೆ' ಎಂದು ಟ್ವಿಟ್ಟರ್ ನಲ್ಲಿ ಪೂನಂ ಹಲುಬಿದ್ದಾಳೆ.

ಇತ್ತೀಚೆಗೆ ಐಸ್ ಬಕೆಟ್ ಚಾಲೆಂಜ್ ತೆಗೆದುಕೊಂಡ ರೀತಿ ಬಗ್ಗೆ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಐಸ್ ಬಕೆಟ್ ಚಾಲೆಂಜ್ ಬಗ್ಗೆ ಏನು ತಿಳಿಯದೆ ಪ್ರಚಾರಕ್ಕಾಗಿ ಬಿಕಿನಿ ತೊಟ್ಟು ಮಾದಕತೆಯನ್ನೇ ಬಂಡವಾಳ ಮಾಡಿಕೊಂಡ ಪೂನಂಗೆ ನಿಜಕ್ಕೂ ತಲೆ ಕೆಟ್ಟಿದೆ. ಸಾಲದ್ದಕ್ಕೆ ತನ್ನ ಆಪ್ತ ಗೆಳಯರು ಎಂಬಂತೆ ಬಾಲಿವುಡ್ ನ ಬಿಗ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಅವರನ್ನು ನಾಮಿನೇಟ್ ಮಾಡಿದ್ದಾಳೆ ಇವಳಿಗೆ ತಲೆ ಸರಿ ಇದೆಯೇ? ಎಂದು ಜನ ಪ್ರಶ್ನಿಸಿದ್ದರು.

ಪೂನಂ ಪಾಂಡೆ ಮಾಡುವ ಎಲ್ಲಾ ಹುಚ್ಚಾಟಗಳಿಗೆ ಸಿಕ್ಕಂತೆ ಈ ಐಸ್ ಬಕೆಟ್ ಚಾಲೆಂಜ್ ಗೆ ಅಷ್ಟಾಗಿ ಜನರಿಂದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಯೂಟ್ಯೂಬ್ ನಲ್ಲಿ ಪೇಜ್ ವ್ಯೂ ಕೂಡಾ ಆರಂಭದ ದಿನ ಲಕ್ಷ ದಾಟಿರಲಿಲ್ಲ. ಜನ ಕೂಡಾ ಪೂನಂಗೆ ಥಮ್ಸ್ ಡೌನ್ ಹೇಳಿದ್ದರು.

English summary
Bollywood's hot diva Poonam Pandey who is mostly active on social networking sites like Facebook and Twitter, recently had a shock.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada