twitter
    For Quick Alerts
    ALLOW NOTIFICATIONS  
    For Daily Alerts

    Fact Check: ಶಾರುಖ್ ಖಾನ್ ಸಿನಿಮಾ 'ಪಠಾಣ್' ಬಾಯ್‌ಕಾಟ್ ಮಾಡುವಂತೆ ಕರೆ ನೀಡಿದ್ರಾ ಯೋಗಿ ಆದಿತ್ಯನಾಥ್?

    |

    ಶಾರುಖ್ ಖಾನ್ ಸಿನಿಮಾ 'ಪಠಾಣ್' ವಿವಾದದಲ್ಲಿ ಸಿಲುಕಿದೆ. ಈ ಸಿನಿಮಾದ ಭೇಷರಂ ಅನ್ನೋ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ ಅನ್ನೋ ಕಾರಣಕ್ಕೆ ವಿವಾದ ಸೃಷ್ಠಿಯಾಗಿದೆ. ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಡಿಯೋವೊಂದು ಸಂಚಲನ ಸೃಷ್ಠಿಸುತ್ತಿದೆ.

    ಕಳೆದ ಕೆಲವು ದಿನಗಳಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಈ ವಿಡಿಯೋದಲ್ಲಿ ಯುಪಿ ಮುಖ್ಯಮಂತ್ರಿ ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾವನ್ನು ಬ್ಯಾನ್ ಮಾಡುವಂತೆ ಕರೆ ನೀಡಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ.

    ಕೇಸರಿ ಬಿಕಿನಿ ವಿವಾದ: ಕೇಸರಿ ಬಿಕಿನಿ ವಿವಾದ: "ಪಠಾಣ್' ಬಾಯ್‌ಕಾಟ್ ಮಾಡಿದ್ರೂ, ನಾನು ನೋಡುತ್ತೇನೆ" ಎಂದ ಪ್ರಕಾಶ್ ಬೆಳವಾಡಿ!

    ಯೋಗಿ ಆದಿತ್ಯನಾಥ್ ಬಾಲಿವುಡ್ ಕಿಂಗ್ ಖಾನ್ ಬಗ್ಗೆ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಈ ಚರ್ಚೆಯಲ್ಲಿದೆ. ಅಸಲಿಗೆ ಈ ವಿಡಿಯೋದಲ್ಲಿ ಯೋಗಿ 'ಪಠಾಣ್' ಸಿನಿಮಾವನ್ನು ಬ್ಯಾನ್ ಮಾಡುವಂತೆ ಕರೆ ನೀಡಿದ್ದಾರಾ? ಈ ವಿಡಿಯೋ ಅಸಲಿಯತ್ತೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

    ಯುಪಿ ಸಿಎಂ ವಿಡಿಯೋದಲ್ಲಿ ಏನಿದೆ?

    ಯುಪಿ ಸಿಎಂ ವಿಡಿಯೋದಲ್ಲಿ ಏನಿದೆ?

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಾಲಿವುಡ್‌ ನಟ ಶಾರುಖ್ ಖಾನ್‌ಗೆ ಈ ವಿಡಿಯೋದಲ್ಲಿ ಬೈದಿದ್ದಾರೆ. ಅದರ ತರ್ಜುಮೆ ಹೀಗಿದೆ. " ಕೆಲವು ಸೋ ಕಾಲ್ಡ್ ಎಡ ಪಂಥೀಯ ನಟರು ಹಾಗೂ ಲೇಖಕರು ದೇಶದ್ರೋಹಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದುರಾದೃಷ್ಟವಶಾತ್ ಶಾರುಖ್ ಖಾನ್ ಅವರಲ್ಲಿ ಒಬ್ಬರು. ಹಾಗಂತ ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಕೂಡ ಈ ರೀತಿ ವರ್ತಿಸಿದ್ದಾರೆ. ಈ ದೇಶದ ಬಹು ಸಂಖ್ಯೆಯಲ್ಲಿರುವ ಸಮಾಜ ಅವರ ಸಿನಿಮಾವನ್ನು ಬಾಯ್‌ಕಾಟ್ ಮಾಡಿದರೆ, ಸಾಮಾನ್ಯ ಮುಸ್ಲಿಂರಂತೆ ಬೀದಿಯಲ್ಲಿ ಅಲೆಯಬೇಕಾಗುತ್ತೆ" ಎಂದು ಯೋಗಿ ಆದಿತ್ಯನಾಥ್ ಈ ವಿಡಿಯೋದಲ್ಲಿ ಹೇಳಿದ್ದಾರೆ. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

    ಸೋಶಿಯಲ್ ಮೀಡಿಯಾದಲ್ಲಿ ಏನಿದು ಚರ್ಚೆ?

    ಸೋಶಿಯಲ್ ಮೀಡಿಯಾದಲ್ಲಿ ಏನಿದು ಚರ್ಚೆ?

    ಉತ್ತರ ಪ್ರದೇಶದ ಯು ಪಿ ಸಿಎಂ ಯೋಗಿ ಆದಿತ್ಯನಾಥ್ ವಿಡಿಯೋವನ್ನು ಇಟ್ಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಂದೇಶವನ್ನು ಹರಿಬಿಡಲಾಗುತ್ತಿದೆ. ಅದು ಈ ರೀತಿ ಇದೆ. "ಶಾರುಖ್ ಖಾನ್ ಅವರ 'ಪಠಾಣ್' ಸಿನಿಮಾವನ್ನು ನೋಡದಂತೆ ಬಾಬಾ ಜೀ ಅವರ ಸಂದೇಶ. ಈ ಸಂದೇಶವನ್ನು ಮನೆಯಿಂದ ಮನೆಗೆ ತೆಗೆದುಕೊಂಡು ಹೋಗಿ. ಈ ವಿಡಿಯೋ ಬಹಳ ಮುಖ್ಯ. ನೀವು ಸಂಬಂಧ ಹೊಂದಿರುವ ಯಾವುದೇ ದೊಡ್ಡ ಗುಂಪಿಗೆ ಇದನ್ನು ಕಳುಹಿಸಿ ಮತ್ತು ಕುಟುಂಬದ ಯುವಕರಿಗೆ ತಿಳಿಸಿ." ಎಂದು ಪ್ರಚಾರ ಮಾಡಲಾಗಿತ್ತಿದೆ. ನಿಜಕ್ಕೂ ಈ ವಿಡಿಯೋದ ಅಸಲಿಯತ್ತು ಬೇರೆನೇ ಇದೆ.

    ಯೋಗಿ ವಿಡಿಯೋದ ಅಸಲಿಯತ್ತೇನು?

    ಯೋಗಿ ವಿಡಿಯೋದ ಅಸಲಿಯತ್ತೇನು?

    ಅಸಲಿಗೆ ಇದು ಯೋಗಿ ಆದಿತ್ಯನಾಥ್ ಅವರ ಏಳು ವರ್ಷದ ಹಳೆಯ ವಿಡಿಯೋ. ವಿವಾದದ ಈ ಸಂದರ್ಭದಲ್ಲಿ ಇದೇ ವಿಡಿಯೋವನ್ನು ಇಟ್ಟುಕೊಂಡು ಕಿಡಿಗೇಡಿಗಳು ಸುಳ್ಳು ಸಂದೇಶವನ್ನು ಹಬ್ಬಿಸುತ್ತಿದ್ದಾರೆ. 2015, ನವೆಂಬರ್ 5ರಂದು ಇಂಡಿಯನ್ ಎಕ್ಸ್‌ಪ್ರೆಸ್ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಪಬ್ಲಿಶ್ ಮಾಡಿತ್ತು. ಆ ವೇಳೆ ಶಾರುಖ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದರು.

    'ಇನ್ನೂ ಎಂಪಿ ಆಗಿದ್ದ ಯೋಗಿ'

    'ಇನ್ನೂ ಎಂಪಿ ಆಗಿದ್ದ ಯೋಗಿ'

    ಶಾರುಖ್ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಯೋಗಿ ಬಾಯ್‌ಕಾಟ್ ಬಗ್ಗೆ ಮಾತಾಡಿದ್ದರು. "ಹಫೀಜ್ ಸಯೀದ್ ಹಾಗೇ ಶಾರುಖ್ ಖಾನ್ ಮಾತಾಡುತ್ತಿದ್ದಾರೆ. ಅವರು ಪಾಕಿಸ್ತಾನಕ್ಕೆ ಬೇಕಿದ್ದರೆ ಹೋಗಬಹುದು ಎಂದು ಹೇಳಿದ್ದರು. ಈ ಹೇಳಿಕೆ ನೀಡುವಾಗ ಅವರು ಉತ್ತರ ಪ್ರದೇಶದ ಗೋರಖ್‌ಪುರದ ಎಂಪಿಯಾಗಿದ್ದರು. ಮೊದಲ ಬಾರಿ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮುನ್ನ ದಾಖಲಾಗಿರುವ ಹೇಳಿಕೆ ಇದು.

    English summary
    Fact Check:UP CM Yogi Adityanath Did Not Say People To Boycott SRK's Pathan, Know More.
    Saturday, December 17, 2022, 20:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X