'ನಿಮ್ಮ ಮದುವೆಗೆ ಯಾಕೆ ಕರೆದಿಲ್ಲ' ಎಂದ ಅಭಿಮಾನಿಗೆ ಪ್ರಿಯಾಂಕಾ ಚೋಪ್ರಾ ಸಖತ್ ಪ್ರತಿಕ್ರಿಯೆ

ಸಿನಿಮಾ ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮಗಳು ಎಷ್ಟು ಕಿರಿಕಿರಿ ಉಂಟುಮಾಡುತ್ತೊ ಅಷ್ಟೆ ಮನರಂಜನೆಯನ್ನು ನೀಡುತ್ತೆ. ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮವನ್ನು ಅತೀ ಹೆಚ್ಚು ಬಳಸುತ್ತಾರೆ. ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸಲು ಇದು ಬಹುಮುಖ್ಯ ಸಾಧನವಾಗಿದೆ.

ಅನೇಕ ಸೆಲೆಬ್ರಿಟಿಗಳು ಆಗಾಗ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಅಭಿಮಾನಿಗಳು ನೆಚ್ಚಿನ ನಟ ಅಥವಾ ನಟಿಯ ಜೊತೆ ನೇರವಾಗಿ ಮಾತನಾಡುವ ಮೂಲಕ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿರುತ್ತಾರೆ. ಆಗಾಗ ಕಲಾವಿದರು ಏನಾದರು ಪ್ರಶ್ನೆ ಕೇಳಿ ಎನ್ನುವ ಸೆಷನ್ ನಡೆಸುತ್ತಾರೆ.

ಇತ್ತೀಚಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಏನಾದರು ಪ್ರಶ್ನೆ ಕೇಳಿ ಎಂದು ಹೇಳಿದ್ದರು. ಪ್ರಿಯಾಂಕಾ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಎಸೆದಿದ್ದಾರೆ. ಒಬ್ಬ ಅಬಿಮಾನಿ ಪ್ರಿಯಾಂಕಾಗೆ ಪ್ರಶ್ನೆ ಮಾಡಿ, ನಿಮ್ಮ ಮದುವೆಗೆ ನನ್ನನ್ನು ಯಾಕೆ ಕರೆದಿಲ್ಲ ಎಂದು ದೂರಿದ್ದಾರೆ.

Fan questions to priyanka chopra for not inviting him to Priyanka and nick jonas wedding

'ನಿಮ್ಮ ಮದುವೆಗೆ ಯಾಕೆ ನನ್ನನ್ನು ಆಹ್ವಾನಿಸಿಲ್ಲ? ಆ ಸಮಯದಲ್ಲಿ ನಾನು ಜೋಧ್ ಪುರದಲ್ಲೇ ಇದ್ದೆ' ಎಂದಿದ್ದಾರೆ. ಅಭಿಮಾನಿಯ ಈ ಪ್ರಶ್ನೆಗೆ ಪ್ರಿಯಾಂಕಾ ಕ್ಷಮೆ ಕೇಳುವ ಜೊತೆಗೆ ತಮಾಷೆಯ ಉತ್ತರ ನೀಡಿದ್ದಾರೆ.

ನಾನು ಕ್ಷಮೆಕೇಳುತ್ತೇನೆ. ನನಗೆ ನೀವು ಯಾರೆಂದು ತಿಳಿದಿಲ್ಲ ಎಂದು ಭಾವಿಸುತ್ತೇನೆ. ಹಾಗಾಗಿ ನಿಮ್ಮನ್ನು ಮದುವೆಗೆ ಆಹ್ವಾನಿಸಲು ಸಾಧ್ಯವಾಗಿಲ್ಲ' ಎಂದಿದ್ದಾರೆ. ಜೊತೆಗೆ ನಗುತ್ತಿರುವ ಇಮೋಜಿ ಹಾಕಿದ್ದಾರೆ. ಪ್ರಿಯಾಂಕಾ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಪ್ರಶ್ನೆ ಮಾಡಿದ ಅಭಿಮಾನಿಯ ಕಾಲೆಳೆಯುತ್ತಿದ್ದಾರೆ.

ಪ್ರಿಯಾಂಕಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಪತಿ ನಿಕ್ ಜೋನಸ್ ಜೊತೆ ಕಾಲಕಳೆಯುತ್ತಿರುವ ಪ್ರಿಯಾಂಕಾ ಇತ್ತೀಚಿಗೆ ನ್ಯೂಯಾರ್ಕ್ ನಲ್ಲಿ ಇಂಡಿಯನ್ ರೆಸ್ಟೊರೆಂಟ್ ತೆರೆದು ಭಾರತೀಯರ ಗಮನ ಸೆಳೆದಿದ್ದಾರೆ. ಬಾಲಿವುಡ್ ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಸದ್ಯ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Fan questions to priyanka chopra for not inviting him to Priyanka and nick jonas wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X