»   »  ಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್

ಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಅವರ 'ಫ್ಯಾನ್' ನೋಡಿ ಅವರ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಶಾರುಖ್ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಫ್ಯಾನ್' ಚಿತ್ರ ಟೀಸರ್ ನವೆಂಬರ್ 2 ರಂದು ಬಿಡುಗಡೆ ಮಾಡಲಾಗಿದೆ.

ಫ್ಯಾನ್, ರಾಯೀಸ್, ದಿಲ್ವಾಲೆ ಹೀಗೆ ವಿಭಿನ್ನ ಚಿತ್ರಗಳು ಶಾರುಖ್ ಅಭಿಮಾನಿಗಳಿಗೆ ಕಾದಿದೆ.ರಾಹುಲ್ ಡೋಲಾಕೀಯಾ ಆಕ್ಷನ್-ಕಟ್ ಹೇಳಿರುವ 'ರಾಯೀಸ್' ಚಿತ್ರದಲ್ಲಿ ಶಾರುಖ್ ಗೆ ಫೈಟ್ ಮಾಸ್ಟರ್ ಆಗಿರೋದು ನಮ್ಮ ಕನ್ನಡದ ಫೈಟ್ ಮಾಸ್ಟರ್ ರವಿವರ್ಮ.['ಫ್ಯಾನ್' ಟೀಸರ್ ಔಟ್]

Fan

ಫ್ಯಾನ್ ಚಿತ್ರದ ಮೊದಲ ಟೀಸರ್ ಜುಲೈ ತಿಂಗಳಿನಲ್ಲೇ ಬಿಡುಗಡೆಯಾಗಿತ್ತು. ಶಾರುಖ್ ಖಾನ್ ಅವರು ತಮ್ಮ ನಿವಾಸ ಮನ್ನತ್ ನ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸುವ ದೃಶ್ಯವಿರುವ ಮೊದಲ ಟೀಸರ್ ಮೆಚ್ಚುಗೆಗಳಿಸಿತ್ತು. [ರಾಯೀಸ್ ಟೀಸರ್ ಸೂಪರ್]

2016ರ ಏಪ್ರಿಲ್ 15ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಬಾಂಡ್ ಬಾಜಾ ಬಾರಾತ್ ಚಿತ್ರ ಖ್ಯಾತಿಯ ಮನೀಶ್ ಶರ್ಮ ನಿರ್ದೇಶಿಸಿದ್ದಾರೆ. ಆದಿತ್ಯಾ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಶಾರುಖ್ ಅವರು ಡಬ್ಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಿದೆ. ಬಹುತೇಕ ದೆಹಲಿ, ಮುಂಬೈನಲ್ಲೇ ಶೂಟಿಂಗ್ ನಡೆಸಲಾಗಿದೆ. [ಐವತ್ತಕ್ಕೆ ಅಡಿಯಿಡುತ್ತಿರುವ ಬಾಲಿವುಡ್ 'ಖಾನ್' ತ್ರಯರು]

Fan teader

ಹೊಚ್ಚ ಹೊಸ ಟೀಸರ್ ನಲ್ಲಿ 'ಗೌರವ್' ಹೆಸರಿನ ಪಾತ್ರಧಾರಿಯ ಪರಿಚಯವಿದೆ. ಆರ್ಯನ್ ಖನ್ನ ಹೆಸರಿನ ಸೂಪರ್ ಸ್ಟಾರ್ ನೋಡಿಕೊಂಡೇ ಬೆಳೆಯುವ ಗೌರವ್ ಜೀವನದಲ್ಲಿ ಆಗುವ ಬದಲಾವಣೆಗಳ ಝಲಕ್ ನಿಮಗೆ ಸಿಗಲಿದೆ.

'ನನ್ನ ಹಾಗೂ ಆರ್ಯನ್ ಖನ್ನ ನಡುವಿನ ಕನೆಕ್ಷನ್ ವೈಫೈ, ಬ್ಲೂಟೂಥ್ ಗಿಂತಲೂ ಸ್ಟ್ರಾಂಗ್ ಆಗಿದೆ' ಎಂಬ ಪಂಚಿಂಗ್ ಡೈಲಾಗ್ ಕೂಡಾ ಇದೆ. ಟೀಸರ್ ನಲ್ಲಿ ಶಾರುಖ್ ಅಭಿನಯದ ಚಿತ್ರಗಳ ದೃಶ್ಯಗಳು, ಅವರು ಪ್ರಶಸ್ತಿ ಗಳಿಸಿ ಸೂಪರ್ ಸ್ಟಾರ್ ಗಾಗಿ ಅಭಿಮಾನಿಗಳತ್ತ ಕೈ ಬೀಸುವ ದೃಶ್ಯವಿದೆ. ಟೀಸರ್ ಅಂತ್ಯದಲ್ಲಿ ಸೂಪರ್ ಸ್ಟಾರ್ ಕಾಂಪಿಟೇಷನ್ ನಲ್ಲಿ ಗೌರವ್ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಆರ್ಯನ್ ಖನ್ನಗೆ ಅರ್ಪಿಸುವ ಸೀನ್ ಇದೆ.

English summary
Shahrukh Khan starrer Fan movie's second teaser is out and boy, will SRK amaze you as Gaurav! The actor looks so different and will literally shock the hell out of you, but in a good way.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada