"ನಮಗೆ ಖಚಿತ ಮಾಹಿತಿ ನೀಡಿ" ಶಾರುಖ್ ಫ್ಯಾನ್ಸ್ ಹೀಗೆ ಹೇಳುತ್ತಿರುವುದೇಕೆ?
ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಯಾವ ಸಿನಿಮಾಗಳಲ್ಲೂ ಅಭಿನಯಿಸುತ್ತಿಲ್ಲ. ಝೀರೋ ಸಿನಿಮಾದ ನಂತರ ಶಾರುಖ್ ಅಭಿಮಾನಿಗಳ ಮುಂದೆ ಬಂದಿಲ್ಲ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಸಿನಿಮಾದಿಂದ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ.
ಆದ್ರೆ ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿವೆ. ಶಾರುಖ್ ದಕ್ಷಿಣ ಭಾರತದ ಕಡೆ ಮುಖಮಾಡಿದ್ದಾರೆ ಎಂದೆಲ್ಲ ಸುದ್ದಿಗಳು ಕೇಳಿ ಬರುತ್ತನೆ ಇದೆ. "ಹೊಸ ಸಿನಿಮಾ ಒಪ್ಪಿಕೊಂಡರೆ ಖಂಡಿತ ಬಹಿರಂಗಪಡಿಸುವೆ. ಆದ್ರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ" ಎಂದು ಶಾರುಖ್ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬರೆದುಕೊಂಡಿದ್ದರು. ಆದ್ರೀಗ ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಶುರುವಾಗಿದೆ.

ಶಾರುಖ್ ಸಿನಿಮಾಗೆ ಆಟ್ಲಿ ನಿರ್ದೇಶನ
ಇದುವರೆಗೂ ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಯಾವುದೆ ಮಾಹಿತಿ ಬಹಿರಂಗ ಪಡಿಸಲಿಲ್ಲ. ಈಗ ದಿಢೀರನೆ ಶಾರುಖ್ ಹೊಸ ಸಿನಿಮಾದ ಬಗ್ಗೆ ಸುದ್ದಿಯೊಂದು ಅಚ್ಚರಿಕರ ಸುದ್ದಿಯೊಂದು ವೈರಲ್ ಆಗಿದೆ. ಬಾಲಿವುಡ್ ಕಿಂಗ್ ಖಾನ್ ಮುಂದಿನ ಸಿನಿಮಾಗೆ ಕಾಲಿವುಡ್ ನ ಖ್ಯಾತ ಯಂಗ್ ನಿರ್ದೇಶಕ ಆಟ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video

ಅಭಿಮಾನಿಗಳ ಅಭಿಯಾನ
ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಶಾರುಖ್ ಅಭಿಮಾನಿಗಳು ಈ ಬಗ್ಗೆ ಖಚಿತ ಮಾಹಿತಿ ನೀಡಿ ಎಂದು ಅಭಿಯಾನ ಮಾಡುತ್ತಿದ್ದಾರೆ. #WeWantConfirmationSRKandAtlee ಎಂದು ಹ್ಯಾಶ್ ಟ್ಯಾಗ್ ಹಾಕಿ ಅಭಿಮಾನಿಗಳು ಅಭಿಯಾನ ಶುರುಮಾಡಿಕೊಂಡಿದ್ದಾರೆ. ಶಾರುಖ್ ಅಥವಾ ಆಟ್ಲಿ ಈ ಬಗ್ಗೆ ಈ ಸುದ್ದಿ ಬಗ್ಗೆ ಅಧಕೃತವಾಗಿ ಬಹಿರಂಗ ಪಡಿಸಬೇಕು ಎನ್ನುವುದು ಅಭಿಮಾನಿಗಳ ಬೇಡಿಕೆ.

ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಸಿನಿಮಾ ಅನೌನ್ಸ್
ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇಬ್ಬರ ಕಾಂಬಿನೇಷನ್ ನ ಸಿನಿಮಾ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಅಂದ್ರೆ ಮುಂದಿನ ನವೆಂಬರ್ 2ರಂದು ಅನೌನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈಗಾಗಲೆ ಅಭಿಮಾನಿಗಳು ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಹೇಳುತ್ತಿದ್ದಾರೆ.

ಬಿಗಿಲ್ ರಿಲೀಸ್ ತಯಾರಿಯಲ್ಲಿ ಆಟ್ಲಿ
ಆಟ್ಲಿ ಸದ್ಯ ಬಿಗಿಲ್ ಸಿನಿಮಾದ ರಿಲೀಸ್ ನ ತಯಾರಿಯಲ್ಲಿದ್ದಾರೆ. ಕಾಲಿವುಡ್ ನಟ ವಿಜಯ್ ಅಭಿನಯದ ಬಿಗಿಲ್ ಆಟ್ಲಿ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಇತ್ತೀಚಿಗಷ್ಟೆ ಟ್ರೈಲರ್ ರಿಲೀಸ್ ಆಗಿದ್ದು ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಬಾಲಿವುಡ್ ನ ದೊಡ್ಡ ದೊಡ್ಡ ನಿರ್ದೇಶಕರ ನಡುವೆಯೂ ತಮಿಳಿನ ಯಂಗ್ ನಿರ್ದೇಶಕನೊಬ್ಬ ಕಿಂಗ್ ಖಾನ್ ಕಾಲ್ ಶೀಟ್ ಗಿಟ್ಟಿಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಅಂದ್ರೆ ದಕ್ಷಿಣ ಭಾರತೀಯರು ನಿಜಕ್ಕು ಹೆಮ್ಮೆ ಪಡುವ ವಿಚಾರ.


Click it and Unblock the Notifications











