For Quick Alerts
  ALLOW NOTIFICATIONS  
  For Daily Alerts

  ಅತಿರೇಕದ ಅಭಿಮಾನ: ಕರೀನಾ ಕಪೂರ್‌ ಮೈ ಮೇಲೆ ಕೈ ಹಾಕಲು ಬಂದ ಯುವಕ

  |

  ಅಭಿಮಾನಿಗಳು ತಮಗೆ ಇಷ್ಟವಾದ ನಟ ಅಥವಾ ನಟಿಯನ್ನು ಭೇಟಿ ಮಾಡಿದಾಗ, ಅಥವಾ ಎದುರಿಗೆ ನೋಡಿದಾಗ ಫೋಟೋ ತೆಗೆಸಿಕೊಳ್ಳುವುದು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಆದರೆ ಅಭಿಮಾನ ಅತಿರೇಕಕ್ಕೆ ಹೋಗಬಾರದು. ಫೋಟೋ ತೆಗೆಸಿಕೊಳ್ಳುವ ಗುಂಗಿನಲ್ಲಿ ನಟ ಅಥವಾ ನಟಿಗೆ ತೊಂದರೆ ಕೊಡುವಂತೆ ಅಭಿಮಾನಿಗಳು ನಡೆದುಕೊಳ್ಳಬಾರದು. ಇದರಿಂದ ಆ ವ್ಯಕ್ತಿಗೂ ಕೂಡ ತೊಂದರೆ ಆಗುತ್ತದೆ.

  ಇತ್ತೀಚಿಗೆ ಸೆಲ್ಫಿ ಕ್ರೇಜ್‌ ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಸಿನಿಮಾ ತಾರೆಯರು ತೊಂದರೆಗೊಳಗಾಗುತ್ತಿದ್ದಾರೆ. ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಬಂದ ಸಂಧರ್ಭದಲ್ಲಿ ನಡೆಯುವ ಘಟನೆಗಳು ನಟಿಯರಿಗೆ ಇರಿಸುಮುರಿಸು ಉಂಟಾಗುತ್ತದೆ. ಇಂತಹದ್ದೇ ಸನ್ನಿವೇಶವನ್ನು ಬಾಲಿವುಡ್‌ ನಟಿ ಕರಿನಾ ಕಪೂರ್‌ ಅನುಭವಿಸಿದ್ದು, ಅಭಿಮಾನಿಯ ವರ್ತನೆಗೆ ಶಾಕ್‌ ಆಗಿದ್ದಾರೆ.

  ಕರೀನಾ ಕಪೂರ್ ಹುಟ್ಟುಹಬ್ಬದಲ್ಲಿ ಭಾಗಿಯಾದ ಸೆಲೆಬ್ರಿಟಿಗಳಿವರುಕರೀನಾ ಕಪೂರ್ ಹುಟ್ಟುಹಬ್ಬದಲ್ಲಿ ಭಾಗಿಯಾದ ಸೆಲೆಬ್ರಿಟಿಗಳಿವರು

  ಕರೀನಾ ಕಪೂರ್‌ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಇವರಿಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದು, ಒಮ್ಮೆ ತಮ್ಮ ಮೆಚ್ಚಿನ ನಟಿಯನ್ನು ಭೇಟಿಯಾದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಇನ್ನೂ ಕರೀನಾ ಕಪೂರ್‌ ಎದುರಿಗೆ ಸಿಕ್ಕಾಗ ಅಭಿಮಾನಿಗಳು ಖುಷಿ ಪಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ ಆದರೆ ನಟಿಯೇ ಭಯಪಡುವಂತೆ ಅಭಿಮಾನಿ ವರ್ತಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

  ಕರೀನಾ ಕಪೂರ್‌ ಇತ್ತೀಚಿಗೆ ತಮ್ಮ ಮುಂದಿನ ಚಿತ್ರದ ಸಲುವಾಗಿ ವಿದೇಶಕ್ಕೆ ತೆರಳಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದರು. ಕರೀನಾ ಕಪೂರ್‌ ಅವರನ್ನು ಕಂಡ ಅಲ್ಲಿದ್ದ ಅಭಿಮಾನಿಗಳು ಖುಷಿಯಾಗಿದ್ದು, ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಾರೆ.ಈ ವೇಳೆ ಅಭಿಮಾನಿಯೊಬ್ಬ ಸಾರ್ವಜನಿಕವಾಗಿ ಆಕೆಯ ಮೇಲೆ ಕೈ ಹಾಕಿ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾನೆ. ಕೂಡಲೇ ಕರೀನಾ ಕಪೂರ್‌ ಬಾಡಿಗಾರ್ಡ್ ಆತನನ್ನು ತಡೆದಿದ್ದಾರೆ.

  'ಲಾಲ್‌ ಸಿಂಗ್ ಚಡ್ಡ' ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡರೂ ಸಾಕಾಗಲ್ಲ!'ಲಾಲ್‌ ಸಿಂಗ್ ಚಡ್ಡ' ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡರೂ ಸಾಕಾಗಲ್ಲ!

  ಅಭಿಮಾನಿಯ ವರ್ತನೆ ಕಂಡು ಕರೀನಾ ಕಪೂರ್ ಶಾಕ್‌ ಆಗಿದ್ದು, ಕೂಡಲೇ ಹಿಂದೆ ಸರಿಯುತ್ತಾರೆ. ಇನ್ನುಳಿದ ಮಹಿಳಾ ಅಭಿಮಾನಿಗಳು ಸಹ ಆಕೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಎಳೆದಾಡುತ್ತಾರೆ. ಈ ವೇಳೆ ಬಾಲಿವುಡ್‌ ನಟಿಗೆ ಇರಿಸುಮುರಿಸು ಉಂಟಾಗಿದ್ದು, ಕರೀನಾ ಯಾವುದೇ ಫೋಟೋಗೆ ಪೋಸ್‌ ಕೊಡದೆ ಕಿರಿ ಕಿರಿಯಿಂದಲೇ ಅಲ್ಲಿಂದ ತೆರಳುತ್ತಾರೆ. ಬಾಡಿಗಾರ್ಡ್‌ಗಳು ಕೂಡ ಆಕೆಯನ್ನು ರಕ್ಷಿಸಿ ಒಳಗಡೆ ಕರೆದುಕೊಂಡು ಹೋಗುತ್ತಾರೆ.

  ಕರೀನಾ ಕಪೂರ್ ಜೊತೆ ವ್ಯಕ್ತಿ ಅನುಚಿತವಾಗಿ ನಡೆದುಕೊಂಡ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕರೀನಾ ಅಭಿಮಾನಿಗಳು ಆತನ ವಿರುದ್ಧ ಕಿಡಿಕಾರಿದ್ದಾರೆ. ಯಾವ ನಟ-ನಟಿಯರ ಜೊತೆ ಹೀಗೆ ವರ್ತಿಸಬೇಡಿ, ಅವರ ಖಾಸಗಿ ಜೀವನಕ್ಕೆ ತೊಂದರೆ ಕೊಡಬೇಡಿ ಎಂದು ಕಮೆಂಟ್‌ ಮಾಡಿದ್ದಾರೆ.

  ನಾನು ಅಷ್ಟು ಸಂಭಾವನೆ ಕೇಳಿಲ್ಲ: 'ಸೀತಾ' ಬಗ್ಗೆ ಕರೀನಾ ಕಪೂರ್ ಸ್ಪಷ್ಟನೆನಾನು ಅಷ್ಟು ಸಂಭಾವನೆ ಕೇಳಿಲ್ಲ: 'ಸೀತಾ' ಬಗ್ಗೆ ಕರೀನಾ ಕಪೂರ್ ಸ್ಪಷ್ಟನೆ

  ಇನ್ನು ಇತ್ತೀಚಿಗೆ ಕೇರಳದಲ್ಲಿಯೂ ಇಂತಹ ಘಟನೆ ನಡೆದಿತ್ತು. ಸಿನಿಮಾ ಪ್ರಚಾರಕ್ಕೆ ಬಂದ ಮಲಯಾಳಂ ಖ್ಯಾತ ನಟಿಯಯ ಜೊತೆ ಅಭಿಮಾನಿ ಎಂದು ಕೊಂಡು ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ನಟಿಯ ಭುಜದ ಮೇಲೆ ಕೈ ಹಾಕಿದ್ದಾನೆ. ಇದರಿಂದ ಕೋಪಗೊಂಡ ನಟಿ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

  English summary
  Fans misbehave with bollywood actress Kareena Kapoor at mumbai airport. Know more about the incident.
  Monday, October 3, 2022, 20:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X