For Quick Alerts
  ALLOW NOTIFICATIONS  
  For Daily Alerts

  ಸೆಲ್ಫಿಗಾಗಿ ಹತ್ತಿರ ಬಂದ ಅಭಿಮಾನಿ: ಚರ್ಚೆ ಆಗ್ತಿದೆ ಸಾರಾ ಅಲಿ ಖಾನ್ ನಡೆದುಕೊಂಡ ರೀತಿ!

  |
  ಸೆಲ್ಫಿಗಾಗಿ ಹತ್ತಿರ ಬಂದ ಅಭಿಮಾನಿ ಚರ್ಚೆ ಆಗ್ತಿದೆ ಸಾರಾ ಅಲಿ ಖಾನ್ ನಡೆದುಕೊಂಡ ರೀತಿ!

  ಬಾಲಿವುಡ್ ಇಂಡಸ್ಟ್ರಿಯ ಶ್ರೀಮಂತನ ಮನೆತನದ ಹುಡುಗಿ ಸಾರಾ ಅಲಿ ಖಾನ್ ಅವರು ಏರ್ಪೋರ್ಟ್ನಲ್ಲಿ ನಡೆದುಕೊಂಡು ರೀತಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

  ನ್ಯೂಯಾರ್ಕ್ ನಿಂದ ಮುಂಬೈಗೆ ಬಂದಿಳಿದ ಸಾರಾ ಅಲಿಖಾನ್ ಏರ್ಪೋರ್ಟ್ ನಿಂದ ಹೊರಗೆ ಬರುತ್ತಿದ್ದರು. ಸಾಮಾನ್ಯವಾಗಿ ಏರ್ಪೋರ್ಟ್ ನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡಾಗ, ಅವರ ಲಗ್ಗೇಜ್ ಮತ್ತೊಬ್ಬರು ತೆಗೆದುಕೊಂಡು ಬರ್ತಾರೆ. ಕಣ್ಣಿಗೆ ಕನ್ನಡಕ, ಸ್ಟೈಲಿಶ್ ಕಾಸ್ಟ್ಯೂಮ್, ಹಿಂದೆ ಮುಂದೆ ಬಾಡಿಗಾರ್ಡ್ ಇರ್ತಾರೆ.

  ಆದರೆ, ಸಾರಾ ಅಲಿ ಖಾನ್ ವಿಷಯದಲ್ಲಿ ಇದ್ಯಾವುದು ಕಾಣಿಸಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಆರಾಮಾಗಿ ಹೋಗಿದ್ದಾರೆ. ಈ ವೇಳೆ ಸಾರಾ ಅವರನ್ನು ಗಮನಿಸಿದ ಅಭಿಮಾನಿಗಳು ಸೆಲ್ಫಿಗೆ ವಿನಂತಿಸಿದ್ದಾರೆ. ಅಭಿಮಾನಿಗಳ ಬೇಡಿಕೆಯನ್ನು ನಿರಾಸೆ ಮಾಡದ ನಟಿ, ತಾಳ್ಮೆಯಿಂದ ನಿಂತು ಸೆಲ್ಫಿಗೆ ಫೋಸ್ ನೀಡಿದ್ದಾರೆ.

  ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆ ಮೇಲೆ ಸಾರಾ, ತಾಯಿ ಅಮೃತ ಕಣ್ಣು.!ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆ ಮೇಲೆ ಸಾರಾ, ತಾಯಿ ಅಮೃತ ಕಣ್ಣು.!

  ಹೀಗೆ ಅಭಿಮಾನಿಗಳ ಜೊತೆ ಸೆಲ್ಫಿಗೆ ಫೋಸ್ ನೀಡುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ಸಾರಾ ಅವರ ಮುಖದ ಬಳಿ ತನ್ನ ಮುಖವನ್ನು ತಂದು ಫೋಸ್ ನೀಡಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಾರಾ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಆ ಅಭಿಮಾನಿಗೆ ಯಾವುದೇ ಪ್ರತಿರೋಧ ತೋರದ ನಟಿ ಅದನ್ನ ತೋರ್ಪಡಿಸದೆ ಒಂದು ಹೆಜ್ಜೆ ಹಿಂದೆ ಸರಿದು ನಗುನಗುತ್ತಾ ಫೋಸ್ ನೀಡಿದ್ದಾರೆ.

  ಬೇರೆ ಸೆಲೆಬ್ರಿಟಿಗಳು ಆಗಿದ್ದರೆ ಇಂತಹ ಸನ್ನಿವೇಶ ಬಂದಾಗ ಅರ್ಧದಲ್ಲೇ ಬಿಟ್ಟು ಅಲ್ಲಿಂದು ಹೋಗುತ್ತಿದ್ದರು. ಆದರೆ, ಸಾರಾ ಅಲಿಖಾನ್ ಅವರು ಬಹಳ ತಾಳ್ಮೆಯಿಂದ ಅಭಿಮಾನಿಗಳ ಜೊತೆ ವರ್ತಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

  ಸಾರಾ ಅಲಿ ಖಾನ್ ಅವರ ಸರಳ ವ್ಯಕ್ತಿತ್ವ, ಅವರ ತಾಳ್ಮೆ ಬಗ್ಗೆ ಈ ಹಿಂದೆ ಹಿರಿಯ ನಟ ರಿಷಿ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಶ್ರೀಮಂತನ ಮನೆತನದ ಕಲಾವಿದೆಯಾಗಿದ್ದರೂ ಆ ಜಂಬವಿಲ್ಲ. ಜನಸಾಮಾನ್ಯರ ಜೊತೆ ನೀವು ನಡೆದುಕೊಳ್ಳುವ ರೀತಿ ಇತರರಿಗೆ ಮಾದರಿ' ಎಂದಿದ್ದರು.

  'ಕೇದರ್ ನಾಥ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿರುವ ಸಾರಾ ಅಲಿ ಖಾನ್, 'ಸಿಂಬಾ' ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾನೂ ಹಿಟ್ ಆಗಿತ್ತು. ಈಗ ಇಮ್ತಿಯಾಜ್ ಅಲಿ ಅವರ ಚಿತ್ರದಲ್ಲಿ ಹಾಗೂ 'ಕೂಲಿ ನಂ 1' ಚಿತ್ರಗಳಲ್ಲಿ ಸಾರಾ ನಟಿಸುತ್ತಿದ್ದಾರೆ.

  English summary
  Bollywood actress Sara ali khan spotted in mumbai airport. fans taking selfie with actress. this video viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X