»   » ಶ್ರೀದೇವಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಜನಸ್ತೋಮ: ಇಂದು ಅಂತ್ಯಸಂಸ್ಕಾರ

ಶ್ರೀದೇವಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಜನಸ್ತೋಮ: ಇಂದು ಅಂತ್ಯಸಂಸ್ಕಾರ

Posted By:
Subscribe to Filmibeat Kannada
ಶ್ರೀದೇವಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಜನಸ್ತೋಮ | Filmibeat Kannada

ನಟಿ ಶ್ರೀದೇವಿ ಪಾರ್ಥೀವ ಶರೀರ ನಿನ್ನೆ ರಾತ್ರಿ ಸುಮಾರು 9.30ಕ್ಕೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದಾಗ, ಇಡೀ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಜನ ಕಿಕ್ಕಿರಿದು ತುಂಬಿದ್ದರು.

ಶ್ರೀದೇವಿ ಪಾರ್ಥೀವ ಶರೀರದ ದರ್ಶನ ಪಡೆಯಲು, ಏರ್ ಪೋರ್ಟ್ ನಿಂದ ಗ್ರೀನ್ ಎಕರ್ಸ್ ಹೋಮ್ ಮನೆಗೆ ಸಾಗುವ ದಾರಿಯ ಇಕ್ಕೆಲಗಳಲ್ಲೂ ಜನ ಜಮಾಯಿಸಿದ್ದರು.

ಗ್ರೀನ್ ಎಕರ್ಸ್ ಹೋಮ್, ಲೋಕಂಡ್ವಾಲಾದಲ್ಲಿರುವ ಶ್ರೀದೇವಿ ನಿವಾಸದ ಮುಂದೆಯಂತೂ ಕಳೆದ ಭಾನುವಾರ ಬೆಳಗ್ಗೆಯಿಂದಲೂ ಅಭಿಮಾನಿಗಳ ಜನಸ್ತೋಮ ಇದ್ದೇ ಇದೆ.

ಸದ್ಯ ಶ್ರೀದೇವಿ ಪಾರ್ಥೀವ ಶರೀರ ಇನ್ನೂ ಗ್ರೀನ್ ಎಕರ್ಸ್ ಹೋಮ್ ನಲ್ಲಿದ್ದು, ಇನ್ನೇನು ಲೋಕಂಡ್ವಾಲಾ ದಲ್ಲೇ ಇರುವ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ಗೆ ರವಾನಿಸಲಾಗುತ್ತದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಮುಂದೆ ಓದಿರಿ...

ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ

ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗುರುಗ್ರಾಮದ ಜನತೆ ಶ್ರೀದೇವಿ ಭಾವಚಿತ್ರದ ಮುಂದೆ ಕ್ಯಾಂಡಲ್ ಹತ್ತಿಸಿ ಪ್ರಾರ್ಥಿಸಿದ್ದಾರೆ.

ಮುಂಬೈ ನಿವಾಸ ತಲುಪಿದ ಶ್ರೀದೇವಿ ಪಾರ್ಥೀವ ಶರೀರ

ಶ್ರೀದೇವಿ ಮನೆ ಮುಂದೆ ಜನಸ್ತೋಮ

ಶ್ರೀದೇವಿ ಪಾರ್ಥೀವ ಶರೀರದ ದರ್ಶನ ಪಡೆಯಲು ಗ್ರೀನ್ ಎಕರ್ಸ್ ಹೋಮ್ ಮುಂದೆ ಸಾವಿರಾರು ಜನ ನೆರೆದಿದ್ದಾರೆ.

ಆಂಬುಲೆನ್ಸ್ ನಲ್ಲಿ ರವಾನೆ

ನಿನ್ನೆ ರಾತ್ರಿ ಮುಂಬೈ ಏರ್ ಪೋರ್ಟ್ ನಿಂದ ಗ್ರೀನ್ ಎಕರ್ಸ್ ಹೋಮ್ ವರೆಗೆ ಮುಂಬೈ ಪೊಲೀಸರ ಬಿಗಿ ಭದ್ರತೆಯೊಂದಿಗೆ ಆಂಬುಲೆನ್ಸ್ ನಲ್ಲಿ ಶ್ರೀದೇವಿ ಪಾರ್ಥೀವ ಶರೀರ ಸಾಗಿಸಲಾಯಿತು.

ದಾರಿಯ ಇಕ್ಕೆಲಗಳಲ್ಲೂ ಜನ

ಉದ್ಯಮಿ ಅನಿಲ್ ಅಂಬಾನಿ, ಶ್ರೀದೇವಿ ಪುತ್ರಿಯರಾದ ಜಾಹ್ನವಿ, ಖುಷಿ ಸೇರಿದಂತೆ ಇಡೀ ಕಪೂರ್ ಕುಟುಂಬದ ಸದಸ್ಯರು ಶ್ರೀದೇವಿ ಪಾರ್ಥೀವ ಶರೀರ ಆಗಮಿಸುವ ಹೊತ್ತಿಗೆ ಮುಂಬೈ ವಿಮಾನದಲ್ಲಿ ಹಾಜರಿದ್ದರು.

ಇಂದು ಅಂತ್ಯಕ್ರಿಯೆ

ಇಂದು ಬೆಳಗ್ಗೆ 9.30 ರಿಂದ ಸೆಲೆಬ್ರೇಷನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 4 ಗಂಟೆ ಸುಮಾರಿಗೆ ವಿಲ್ಲೆ ಪಾರ್ಲೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಯಾರು ಎಷ್ಟೇ ಅನುಮಾನ ಪಟ್ಟರೂ, ಶ್ರೀದೇವಿ ಸಾವಿನ ಕೇಸ್ ದುಬೈನಲ್ಲಿ ಕ್ಲೋಸ್ ಆಗಿದೆ!

ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?

English summary
Fans have gathered in large numbers outside Bollywood Actress Sridevi's residence in Mumbai to catch the glimpse of her mortal remains. Cremation to take place at 4 pm today (Feb 28th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada