For Quick Alerts
  ALLOW NOTIFICATIONS  
  For Daily Alerts

  ದೆಹಲಿ ಪ್ರತಿಭಟನೆ: ಪ್ರಿಯಾಂಕಾ, ದಿಲ್ಜಿತ್‌ಗೆ ಕಂಗನಾ ಪ್ರಶ್ನೆ

  |

  ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಇಂದು ತೀವ್ರ ಸ್ವರೂಪಕ್ಕೆ ತಲುಪಿದೆ. ದೆಹಲಿಯ ಹೊರವಲಯದ ಬಿಡಾರ ಹೂಡಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ದೆಹಲಿಗೆ ನುಗ್ಗಿದ್ದಾರೆ. ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಭಾರತದ ಧ್ವಜದ ಪಕ್ಕ ಗುರುನಾನಕರ ಪೀತಾಂಭರ ಧ್ವಜ ಹಾರಿಸಿದ್ದಾರೆ.

  ರೈತರು ಕೆಂಪು ಕೋಟೆಗೆ ಮುತ್ತಿಗೆ ಹಾಕಿರುವುದು ದೇಶದಾದ್ಯಂತ ಭಾರಿ ಚರ್ಚೆ ಎಬ್ಬಿಸಿದ್ದು, ನಟಿ ಕಂಗನಾ ಸಹ ಈ ಬಗ್ಗೆ ಆಕ್ರೋಶದ ಟ್ವೀಟ್ ಮಾಡಿದ್ದಾರೆ.

  ಪ್ರತಿಭಟನಾಕಾರರೊಬ್ಬರು ಧ್ವಜ ಹಾರಿಸುತ್ತಿರುವ ಚಿತ್ರ ಪ್ರಕಟಿಸಿರುವ ಕಂಗನಾ, ದಿಲ್ಜಿತ್ ದುಸ್ಸಾಂಜ್, ಪ್ರಿಯಾಂಕಾ ಚೋಪ್ರಾ ಇದರ ಬಗ್ಗೆ ವಿಶ್ಲೇಷಣೆ ಕೊಡಬೇಕು ಎಂದು ಕೇಳಿದ್ದಾರೆ.

  'ಇಡೀಯ ವಿಶ್ವವೇ ನಮ್ಮನ್ನು (ಭಾರತ) ನೋಡಿ ನಗುತ್ತಿದೆ, ಇದೇ ಬೇಕಿತ್ತು ಅಲ್ಲವೇ ನಿಮಗೆ, ಧನ್ಯವಾದಗಳು' ಎಂದಿದ್ದಾರೆ ನಟಿ ಕಂಗನಾ.

  ನಟ ದಿಲ್ಜೀತ್ ದುಸ್ಸಾಂಜ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಅವರುಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಪ್ರತಿಭಟನೆ ಕುರಿತಾಗಿ ನಟ ದಿಲ್ಜೀತ್ ದುಸ್ಸಾಂಜ್ ಹಾಗೂ ಕಂಗನಾ ರಣೌತ್ ನಡುವೆ ಟ್ವಿಟ್ಟರ್‌ ನಲ್ಲಿ ಜಗಳ ನಡೆದಿತ್ತು.

  ಇದುನ್ನ ನಾವಿಬ್ರು ಮಾಡೋಣ ಅಂತ ನಾನೇ ಐಂದ್ರಿತಾಗೆ ಹೇಳಿದ್ದು | Filmibeat Kannada

  ಕಂಗನಾ ಹಾಕಿರುವ ಚಿತ್ರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕಂಗನಾ ರಣೌತ್ ಎಡಿಟ್ ಮಾಡಿರುವ ಚಿತ್ರ ಹಂಚಿಕೊಂಡಿದ್ದಾರೆ. ಭಾರತ ಧ್ವಜವನ್ನು ರೈತರು ಕೆಳಗೆ ಇಳಿಸಿಲ್ಲ ಎಂದು ಹಲವರು ಹೇಳಿದ್ದಾರೆ. ಸಾಕ್ಷ್ಯವೆಂಬಂತೆ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

  English summary
  Actress Kangana Ranaut questioned Diljit and Priyanka Chopra over farmers protest in Delhi today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X