Just In
Don't Miss!
- Finance
ಚಿನ್ನದ ಬೆಲೆ ಏರಿಕೆ: ಗರಿಷ್ಠ ಮಟ್ಟಕ್ಕಿಂತ 9,500 ರೂಪಾಯಿ ಕಡಿಮೆ
- News
ಬಿಜೆಪಿ ಪರ ಪಕ್ಷಪಾತ: ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ಆರೋಪ
- Sports
ಐಪಿಎಲ್ 2021: ನೀತಿ ಸಂಹಿತೆ ಉಲ್ಲಂಘಿಸಿ ಖಂಡನೆಗೆ ಒಳಗಾದ ವಿರಾಟ್ ಕೊಹ್ಲಿ
- Automobiles
ಬಿಡುಗಡೆಗೂ ಮುನ್ನವೇ ಎಪ್ರಿಲಿಯಾ ಎಸ್ಎಕ್ಸ್ಆರ್ 125 ಬೆಲೆ ಮಾಹಿತಿ ಬಹಿರಂಗ
- Lifestyle
ಈ ವಿಧಾನ ಅನುಸರಿಸಿದರೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತೆ
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ಮಾಪಕನ ಪತ್ನಿ ಮತ್ತು ಮಗಳು ಬೆಂಕಿಗೆ ಆಹುತಿ
ಬಾಲಿವುಡ್ ನಿರ್ಮಾಪಕನ ಪತ್ನಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ನಿರ್ಮಾಪಕ ಸಂತೋಷ್ ಗುಪ್ತಾ ಅವರ ಪತ್ನಿ ಅಸ್ಮಿತಾ (55 ವರ್ಷ) ಮತ್ತು ಮಗಳು ಸೃಷ್ಟಿ ಅಂಧೇರಿಯ ನಿವಾಸದಲ್ಲಿ ಜೀವಂತವಾಗಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗಳು ಜೀವಂತವಾಗಿ ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವಿಚಾರ ತಿಳಿದ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಇಬ್ಬರನ್ನು ಕೂಪರ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೆ, ಮಾರ್ಗಮಧ್ಯದಲ್ಲಿ ನಿರ್ಮಾಪಕನ ಪತ್ನಿ ಅಸ್ಮಿತಾ ಗುಪ್ತಾ ಸಾವನ್ನಪಿದರು.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 'ಬಿಗ್ ಬಾಸ್' ಚೈತ್ರಾ ಕೊಟೂರು
ಮಗಳು ಸೃಷ್ಟಿ ಗುಪ್ತಾ ಅವರು ಶೇಕಡಾ 70 ರಷ್ಟು ಗಾಯಗೊಂಡಿದ್ದರು. ಬಳಿಕ, ಅವರನ್ನು ಏರೋಲಿ ನ್ಯಾಷನಲ್ ಬರ್ನ್ಸ್ ಸೆಂಟರರ್‌ನಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಮಂಗಳವಾರ ಮೃತಪಟ್ಟರು.
ಅಸ್ಮಿತಾ ಗುಪ್ತಾ ಅವರು ಹಲವು ತಿಂಗಳಿನಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ತಾಯಿಯ ಕಷ್ಟ ನೋಡಲಾರದೆ ಮಗಳು ಸಹ ಅಮ್ಮನ ಜೊತೆ ಸಾಯಲು ತೀರ್ಮಾನಿಸಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಮ್ಮ ಮತ್ತು ಮಗಳು ಸಾವಿಗೆ ಸಂಬಂಧಿಸಿದಂತೆ ಎರಡು ವಿಭಿನ್ನ ಆಕಸ್ಮಿಕ ಸಾವಿನ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಎನ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಭಾರತ್ ಗಾಯಕ್‌ವಾಡ್ ಮಾಹಿತಿ ನೀಡಿದ್ದಾರೆ.