For Quick Alerts
  ALLOW NOTIFICATIONS  
  For Daily Alerts

  ಈ ಬಾರಿ ಸಲ್ಮಾನ್ ಖಾನ್ ರಿಂದ ಭರ್ಜರಿ ಗಿಫ್ಟ್ ಪಡೆದವರು ಯಾರು?

  By Suneetha
  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರದು ತುಂಬಾ ದೊಡ್ಡ ಮನಸ್ಸು. ಒಂದು ಬಾರಿ 'ಎಕ್ ವಿಲ್ಲನ್' ಚಿತ್ರ ವೀಕ್ಷಿಸಿ ಸಿದ್ದಾರ್ಥ್ ಮಲ್ಹೋತ್ರಾ ಅವರ ಅಭಿನಯಕ್ಕೆ ಮೆಚ್ಚಿ ವಾಚೊಂದನ್ನು ಗಿಫ್ಟ್ ಆಗಿ ನೀಡಿದ್ದರು.

  ಇದೀಗ ರೀಸೆಂಟ್ ಆಗಿ ಸ್ಪೆಷಲ್ ಪರ್ಸನ್ ಒಬ್ಬರಿಗೆ ದುಬಾರಿ ಗಿಫ್ಟ್ ನೀಡಿ ಬಿಟೌನ್ ನಲ್ಲಿ ಸಖತ್ ಸುದ್ದಿಯಾಗುತ್ತಿದ್ದಾರೆ.['ಭಜರಂಗಿ ಭಾಯ್ ಜಾನ್' ಬಗ್ಗೆ ಯಾರು ಏನಂದ್ರು?]

  ಆ ಸ್ಪೆಷಲ್ ಪರ್ಸನ್ ಯಾರಪ್ಪಾ ಅಂದ್ರೆ ಸಲ್ಮಾನ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿ ಚಿತ್ರದ ಯಶಸ್ಸಿಗೆ ಕಾರಣಳಾದ ಕ್ಯೂಟ್ ಮುನ್ನಿ ಅಲಿಯಾಸ್ ಹರ್ಷಾಲಿ ಮಲ್ಹೋತ್ರಾಳಿಗೆ ದುಬಾರಿ ಗಿಫ್ಟ್ ನೀಡಿ ಬಿಟೌನ್ ಮಂದಿಯ ಪ್ರೀತಿಗೆ ಪಾತ್ರರಾಗಿದ್ದಾರೆ.[ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

  ಪುಟ್ಟ ಬಾಲೆಯೊಬ್ಬಳ ಅಧ್ಬುತ ನಟನೆಯನ್ನು ಕಂಡು ಫುಲ್ ಖುಷ್ ಆದ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಮುನ್ನಿ ಅಲಿಯಾಸ್ ಹರ್ಷಾಲಿಗೆ 1.5 ಕೋಟಿ ಸ್ಕಾಲರ್ ಶಿಪ್ ನೀಡಿ ಅವಳ ಶಿಕ್ಷಣಕ್ಕೆ ಸಹಕರಿಸಿದ್ದಾರೆ.['ಭಜರಂಗಿ ಭಾಯ್ ಜಾನ್' ಸೂಪರ್ ಸ್ಪೆಷಾಲಿಟೀಸ್]

  ಒಟ್ನಲ್ಲಿ ತಿಂಗಳುಗಟ್ಟಲೇ ರಜಾ ಹಾಕಿ ಶೂಟಿಂಗ್ ಮುಗಿಸಿಕೊಟ್ಟಿದ್ದಕ್ಕೆ ನಮ್ಮ ಮುನ್ನಿ ಗೆ ಅದೃಷ್ಟ ಹುಡುಕಿಕೊಂಡು ಬಂದ ಹಾಗಾಗಿದೆ. ಮುಂದೆ ಓದಿ...

  ಸಲ್ಮಾನ್ ಖಾನ್- ಹರ್ಷಾಲಿ ಮಲ್ಹೋತ್ರಾ

  ಸಲ್ಮಾನ್ ಖಾನ್- ಹರ್ಷಾಲಿ ಮಲ್ಹೋತ್ರಾ

  'ಭಜರಂಗಿ ಭಾಯ್ ಜಾನ್' ಚಿತ್ರಕ್ಕಾಗಿ ಹರ್ಷಾಲಿ ಸುಮಾರು ಒಂದು ತಿಂಗಳುಗಳ ಕಾಲ ಶಾಲೆಗೆ ರಜೆ ಹಾಕಿ ಚಿತ್ರೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು. ಇದರಿಂದ ಮನಸೋತ ಸಲ್ಮಾನ್ ಖಾನ್ 1.5 ಕೋಟಿ ರೂಪಾಯಿ ಉಡುಗೊರೆ ನೀಡಿ ಶುಭ ಹಾರೈಸಿದ್ದಾರೆ.

  ಬಾಲಿವುಡ್ ನಟಿ ಕಮ್ ಮಾಡೆಲ್ ಯಾಮಿ ಗೌತಮ್ ಜೊತೆ ಮುನ್ನಿ(ಹರ್ಷಾಲಿ)

  ಬಾಲಿವುಡ್ ನಟಿ ಕಮ್ ಮಾಡೆಲ್ ಯಾಮಿ ಗೌತಮ್ ಜೊತೆ ಮುನ್ನಿ(ಹರ್ಷಾಲಿ)

  ಫೇರ್ ಆಂಡ್ ಲವ್ಲಿ ಜಾಹೀರಾತು ಶೂಟಿಂಗ್ ವೇಳೆ ಸೆಟ್ ನಲ್ಲಿ ಹರ್ಷಾಲಿ ಮಲ್ಹೋತ್ರಾ ಜೊತೆ ಯಾಮಿ ಗೌತಮ್ ಫೋಟೋ ಗೆ ಪೋಸ್ ನೀಡಿದರು.

  ಸೋನಾಕ್ಷಿ ಸಿನ್ಹಾ - ಹ‍ರ್ಷಾಲಿ

  ಸೋನಾಕ್ಷಿ ಸಿನ್ಹಾ - ಹ‍ರ್ಷಾಲಿ

  ನಮ್ಮ ಕ್ಯೂಟ್ ಮುನ್ನಿಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರಿಂದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕೆನ್ನೆಗೊಂದು ಪ್ರೀತಿಯ ಸಿಹಿ ಮುತ್ತು.

  'ಭಜರಂಗಿ ಭಾಯ್ ಜಾನ್' ಚಿತ್ರದ ಸಂಭ್ರಮಾಚರಣೆಯಲ್ಲಿ

  'ಭಜರಂಗಿ ಭಾಯ್ ಜಾನ್' ಚಿತ್ರದ ಸಂಭ್ರಮಾಚರಣೆಯಲ್ಲಿ

  'ಭಜರಂಗಿ ಭಾಯ್ ಜಾನ್' ಬಿಗ್ ಹಿಟ್ ಸಂಭ್ರಮಾಚರಣೆಯಲ್ಲಿ ಮುನ್ನಿ ಅಲಿಯಾಸ್ ಹರ್ಷಾಲಿ ಜೊತೆ ನಾಯಕ ಸಲ್ಮಾನ್ ಖಾನ್, ನಾಯಕಿ ಕರೀನಾ ಕಪೂರ್, ಹಾಗೂ ಚಿತ್ರದ ನಿರ್ದೇಶಕ ಕಬೀರ್ ಖಾನ್.

  ಬಾಲಿವುಡ್ ಸ್ಟಾರ್ ಸೈಫ್ ಅಲಿಖಾನ್ ಜೊತೆ ಹರ್ಷಾಲಿ ಮಲ್ಹೋತ್ರಾ

  ಬಾಲಿವುಡ್ ಸ್ಟಾರ್ ಸೈಫ್ ಅಲಿಖಾನ್ ಜೊತೆ ಹರ್ಷಾಲಿ ಮಲ್ಹೋತ್ರಾ

  "ಭಜರಂಗಿ ಭಾಯ್ ಜಾನ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಸಂದರ್ಭದಲ್ಲಿ ಸೈಫ್ ಅಲಿಖಾನ್ ಜೊತೆ ಮುನ್ನಿ ಅಲಿಯಾಸ್ ಹ‍ರ್ಷಾಲಿ ಮಲ್ಹೋತ್ರಾ ಪೋಟೋಗೆ ಪೋಸ್ ನೀಡಿದರು.

  ಬಾಲಿವುಡ್ ನಟ ಟೈಗರ್ ಶ್ರಾಫ್

  ಬಾಲಿವುಡ್ ನಟ ಟೈಗರ್ ಶ್ರಾಫ್

  ಬಾಲಿವುಡ್ ಖ್ಯಾತ ನಟ ಜಾಕೀಶ್ರಾಫ್ ಪುತ್ರ ಟೈಗರ್ ಶ್ರಾಫ್ ಬಾಲಿವುಡ್ ಆವಾರ್ಡ್ ಕಾರ್ಯಕ್ರಮವೊಂದರಲ್ಲಿ ಹರ್ಷಾಲಿ ಮಲ್ಹೋತ್ರಾ ಜೊತೆ.

  English summary
  Bollywood star Salman Khan recently after gifting his 'Bajrangi Bhaijaan' hit. Bollywood actor Salman Khan has giving up rather expensive 1.5 crore worth gift to a special person. This special person is none other than Harshaali Malhotra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X