For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರಬೊರ್ತಿಗೆ ಅತ್ಯಾಚಾರದ ಬೆದರಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

  |

  ಬಾಲಿವುಡ್ ನಟಿ ರಿಯಾ ಚಕ್ರಬೊರ್ತಿ ಅವರಿಗೆ ಅಶ್ಲೀಲ ಮತ್ತು ಬೆದರಿಕೆಯ ಸಂದೇಶಗಳನ್ನು ರವಾನಿಸಿದ್ದ ಇಬ್ಬರು ಇನ್‌ಸ್ಟಾಗ್ರಾಂ ಬಳಕೆದಾರರ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ಇನ್‌ಸ್ಟಾಗ್ರಾಂನಲ್ಲಿ ಬಂದ ಬೆದರಿಕೆ ಸಂದೇಶದ ಸ್ಕ್ರೀನ್‌ಶಾಟ್‌ಅನ್ನು ಜುಲೈ 16ರಂದು ರಿಯಾ ಚಕ್ರಬೊರ್ತಿ ಶೇರ್ ಮಾಡಿದ್ದರು. ರಿಯಾ ಅವರನ್ನು ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಒಬ್ಬರು ಬೆದರಿಕೆ ಹಾಕಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಅವರ ಗೆಳತಿ ರಿಯಾ ಅವರೇ ಕಾರಣ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುತ್ತಿದ್ದಾರೆ.

  ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಟ್ರೋಲ್ ಆಗುತ್ತಿರುವ ರಿಯಾಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಟ್ರೋಲ್ ಆಗುತ್ತಿರುವ ರಿಯಾ

  ತಮಗೆ ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಬರುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಕ್ರೈಮ್ ಘಟಕಕ್ಕೆ ಮನವಿ ಮಾಡಿದ್ದರು. ಬಳಿಕ ಅಂತರ್ಜಾಲದ ಮೂಲಕ ಪೊಲೀಸರೊಂದಿಗೆ ಸಂವಹನ ನಡೆಸಿದ್ದ ರಿಯಾ, ತಮ್ಮ ಸ್ನೇಹಿತರೊಬ್ಬರ ಜತೆ ಸಾಂಟಾಕ್ರೂಜ್ ಪೊಲೀಸ್ ಸ್ಟೇಷನ್‌ಗೆ ತೆರಳಿ ಆರೋಪಿಗಳ ವಿರುದ್ಧ ಲಿಖಿತ ರೂಪದಲ್ಲಿ ದೂರು ದಾಖಲಿಸಿದ್ದಾರೆ.

  ಅಮಿತ್ ಶಾ ಗೆ ಕೈಮುಗಿದು ಮನವಿ ಮಾಡಿದ ಸುಶಾಂತ್ ಸಿಂಗ್ ಪ್ರೇಯಸಿಅಮಿತ್ ಶಾ ಗೆ ಕೈಮುಗಿದು ಮನವಿ ಮಾಡಿದ ಸುಶಾಂತ್ ಸಿಂಗ್ ಪ್ರೇಯಸಿ

  ಇಬ್ಬರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 507 ಮತ್ತು 509ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಈ ಬಳಕೆಗಾರರನ್ನು ಪತ್ತೆಹಚ್ಚು ಕಾರ್ಯ ನಡೆಯುತ್ತಿದೆ. ರಿಯಾ ಅವರಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶ ರವಾನಿಸಿದವರನ್ನು ಪತ್ತೆಹಚ್ಚಲು ಅವರ ವಿವರಗಳನ್ನು ಒದಗಿಸುವಂತೆ ಇನ್‌ಸ್ಟಾಗ್ರಾಂಗೆ ಪತ್ರ ಬರೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  English summary
  Mumbai police have registered an FIR against two instagram users for allegedly threatening actor Rhea Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X