»   » ಶಿಲ್ಪಾಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಛಾಯಾಗ್ರಾಹಕನ ಮೇಲೆ 'ಬೌನ್ಸರ್'ಗಳಿಂದ ಹಲ್ಲೆ

ಶಿಲ್ಪಾಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಛಾಯಾಗ್ರಾಹಕನ ಮೇಲೆ 'ಬೌನ್ಸರ್'ಗಳಿಂದ ಹಲ್ಲೆ

Posted By:
Subscribe to Filmibeat Kannada

ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ಅವರ ಫೋಟೊ ಕ್ಲಿಕ್ಕಿಸಿದ ಇಬ್ಬರು ಮಾಧ್ಯಮ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ವೊಂದರ ಬೌನ್ಸರ್ ಗಳಿಬ್ಬರು ಶಿಲ್ಪಾಶೆಟ್ಟಿ ಫೋಟೊ ಕ್ಲಿಕ್ಕಿಸಿದ ಛಾಯಾಗ್ರಾಹಕರನ್ನ ಹಿಗ್ಗಾಮಗ್ಗಾ ಥಳಿಸಿದ್ದಾರೆ. ಬಳಿಕ ಬೌನ್ಸರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಷ್ಟಕ್ಕೂ, ಈ ಘಟನೆ ನಡೆದಿದ್ದು ಯಾಕೆ? ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಫೋಟೊ ಕ್ಲಿಕ್ಕಿಸಿದ್ದಕ್ಕೆ ಹಲ್ಲೆ ಮಾಡಿದ್ರಾ? ಮುಂದೆ ಓದಿ.....

ನಿಜವಾಗಲು ನಡೆದಿದ್ದೇನು?

ಗುರುವಾರ (ಸೆಪ್ಟಂಬರ್ 7) ರಾತ್ರಿ ಬಾಂದ್ರಾದ ಬಸ್ಟಿನ್ ಹೋಟೆಲ್‌ಗೆ ಶಿಲ್ಪಾ ಶೆಟ್ಟಿ-ರಾಜ್‌ ಕುಂದ್ರಾ ಆಗಮಿಸಿದ್ದರು. ಊಟ ಮುಗಿಸಿ ಹೊರಬಂದ ದಂಪತಿ ನಗುತ್ತಲೇ ಛಾಯಾಗ್ರಾಹಕರಿಗೆ ಪೋಸ್ ನೀಡಿದ್ದಾರೆ. ಅಲ್ಲಿಗೆ ಎಲ್ಲವೂ ಸರಿಯಾಗಿತ್ತು. ಆದ್ರೆ,,,,,,

ಶಿಲ್ಪಾ-ರಾಜ್‌ ತೆರಳಿದ ಮೇಲೆ ಹಲ್ಲೆ

ಛಾಯಾಗ್ರಾಹಕರಿಗೆ ಪೋಸ್ ನೀಡಿದ ನಂತರ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಕಾರ್‌ ಹತ್ತಿ ತೆರಳಿದ್ದಾರೆ. ಇವರಿಬ್ಬರು ಹೋಗುತ್ತಿದ್ದಂತೆ ಛಾಯಾಗ್ರಾಹಕರ ಮೇಲೆ ಬೌನ್ಸರ್ ಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬೌನ್ಸರ್ ಗಳು ಹಲ್ಲೆ ಮಾಡಿದ್ದು ಯಾಕೆ?

ಛಾಯಾಗ್ರಾಹಕರ ಮೇಲೆ ಹಲ್ಲೆ ಮಾಡಿರುವುದಕ್ಕೆ ನಿಜವಾದ ಕಾರಣ ಬಹಿರಂಗವಾಗಿಲ್ಲ. ರೆಸ್ಟೋರೆಂಟ್ ಬೌನ್ಸರ್ ಗಳಿಂದ ಹಲ್ಲೆಗೊಳಗಾಗಿರುವ ಛಾಯಾಗ್ರಾಹಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ. ಖಾರ್ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಬೌನ್ಸರ್ ಗಳನ್ನ ಬಂಧಿಸಿದ್ದಾರೆ.

ಘಟನೆ ಖಂಡಿಸಿದ ಶಿಲ್ಪಾ ಶೆಟ್ಟಿ

ಈ ಘಟನೆ ತಿಳಿದ ನಂತರ ತಮ್ಮ instagram ನಲ್ಲಿ ಪ್ರತಿಕ್ರಿಯಿಸಿರುವ ನಟಿ ಶಿಲ್ಪಾ ಶೆಟ್ಟಿ, ಬೌನ್ಸರ್ ಗಳ ನಡೆಯನ್ನ ಖಂಡಿಸಿದ್ದಾರೆ. ಮತ್ತು ಛಾಯಾಗ್ರಾಹಕರ ಮೇಲೆ ಆಗಿರುವ ಹಲ್ಲೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಛಾಯಾಗ್ರಾಹಕರ ಮೇಲೆ ಬೌನ್ಸರ್ ಗಳು ಹಲ್ಲೆ ಮಾಡಿದರುವ ವಿಡಿಯೋ ಇಲ್ಲಿದೆ ನೋಡಿ....

English summary
FIR registered against bouncers of a restaurant in Mumbai, for beating up 2 photographers for taking pictures of Shilpa Shetty & Raj Kundra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada