twitter
    For Quick Alerts
    ALLOW NOTIFICATIONS  
    For Daily Alerts

    ನಟ ಸೋನು ಸೂದ್ ವಿರುದ್ಧ ಎಫ್‌ಐಆರ್ ದಾಖಲು: ಉದ್ದೇಶಪೂರ್ವಕ ಎಂದ ನೆಟ್ಟಿಗರು

    |

    ಕೊರೊನಾ ಸಮಯದಲ್ಲಿ ಲಕ್ಷಾಂತರ ಜನ ಕಾರ್ಮಿಕರಿಗೆ ಸಹಾಯ ಮಾಡಿದ್ದ ಸೋನು ಸೂದ್ ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳ ವಿರೋಧ ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಕೆಲವು ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ.

    Recommended Video

    ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದಕ್ಕೆ ಸೋನು ಸೂದ್ ಗೆ ಇಂತ ಪರಿಸ್ಥಿತಿ ಬಂತ

    ಸೋನು ಸೂದ್‌ ಅನ್ನು ಹಾಡಿ ಹೊಗಳುತ್ತಿದ್ದ ಕೆಲವು ಪಕ್ಷಗಳ ಸದಸ್ಯರು, ಕಾರ್ಯಕರ್ತರು ಈಗ ಸೋನು ಸೂದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ 'ಗುಂಪು ದಾಳಿ' ನಡೆಸಿ ಚಾರಿತ್ರ್ಯ ಹರಣಕ್ಕೆ ಯತ್ನಿಸುತ್ತಿದ್ದಾರೆ.

    ಇದೀಗ ನಟ ಸೋನು ಸೂದ್ ವಿರುದ್ಧ ಪಂಜಾಬ್‌ನ ಮೋಗಾ ಪ್ರಾಂಥ್ಯದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇದು ಸಹ ರಾಜಕೀಯ ಷಡ್ಯಂತ್ರದ ಭಾಗ ಎನ್ನಲಾಗುತ್ತಿದೆ.

    ನಟ ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‌ನ ಮೋಗಾ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸೋನು ಸೂದ್‌, ತಮ್ಮ ಸಹೋದರಿಯ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಮತದಾನದ ದಿನ ಮತಗಟ್ಟೆ ಭೇಟಿಗೆ ಆಗಮಿಸಿದ ಸೋನು ಸೂದ್‌ರ ವಾಹನವನ್ನು ತಡೆದು ಕಾರು ವಶಪಡಿಸಿಕೊಂಡು ಅವರನ್ನು ಬಲವಂತದಿಂದ ಮನೆಗೆ ಕಳಿಸಲಾಗಿತ್ತು. ಅದಾದ ಬಳಿಕ ಇಂದು ಎಫ್‌ಐಆರ್ ದಾಖಲಿಸಲಾಗಿದೆ.

    ಮತದಾರರ ಮೇಲೆ ಪ್ರಭಾವ ಆರೋಪ

    ಮತದಾರರ ಮೇಲೆ ಪ್ರಭಾವ ಆರೋಪ

    ಮತದಾನದ ದಿನ ತನ್ನ ಸಹೋದರಿಗೆ ಮತ ಚಲಾಯಿಸುವಂತೆ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಸೋನು ಸೂದ್ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸೋನು ಸೂದ್, ಮೋಗಾ ಕ್ಷೇತ್ರದ ಲಂಡೆಕೆ ಗ್ರಾಮದಲ್ಲಿ ಮತದಾನದ ದಿನ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಹೋದರಿ ಮಾಳವಿಕ ಪರ, ಸೋನು ಸೂದ್ ಅವರು ತಾರಾ ಪ್ರಚಾರಕರಾಗಿದ್ದರು. ತಾರಾ ಪ್ರಚಾರಕರು ಬಹಿರಂಗ ಪ್ರಚಾರ ಮುಗಿದ ದಿನವೇ ಕ್ಷೇತ್ರ ಬಿಟ್ಟು ತೆರಳಬೇಕು ಒಂದೊಮ್ಮೆ ಅದೇ ಕ್ಷೇತ್ರದಲ್ಲಿದ್ದರೆ ಮತಯಾಚನೆ ಮಾಡಬಾರದು. ಆದರೆ ಮತದಾನದ ದಿನದಂದು ಸೋನು ಸೂದ್ ತಮ್ಮ ಸಹೋದರಿ ಪರವಾಗಿ ಮತ ಯಾಚನೆ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಆರೋಪಿಸಿ ಮೋಗಾದ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಅದರನ್ವಯ ಎಫ್‌ಐಆರ್ ದಾಖಲಿಸಲಾಗಿದೆ.

    ಅಕ್ರಮ ನಡೆಯುತ್ತಿರುವ ಮಾಹಿತಿ ಬಂತು: ಸೋನು ಸೂದ್

    ಅಕ್ರಮ ನಡೆಯುತ್ತಿರುವ ಮಾಹಿತಿ ಬಂತು: ಸೋನು ಸೂದ್

    ಆದರೆ ಇದೇ ವಿಷಯವಾಗಿ ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಸೋನು ಸೂದ್, ''ಮೋಗಾ ಕ್ಷೇತ್ರದ ಕೆಲವು ಚುನಾವಣಾ ಬೂತ್‌ಗಳಲ್ಲಿ ಹಣ ಹಂಚಿಕೆ ಮಾಡಲಾಗುತ್ತಿದೆ ಹಾಗೂ ಅಕಾಲಿ ದಳದ ಸದಸ್ಯರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಸುದ್ದಿ ಬಂತು ಹಾಗಾಗಿ ಪರಿಶೀಲನೆ ಮಾಡಲೆಂದು ನಾನು ಗೆಳೆಯರೊಟ್ಟಿಗೆ ಕಾರಿನಲ್ಲಿ ಹೋದೆ. ಅಷ್ಟರಲ್ಲೆ ನನ್ನ ವಾಹನ ತಡೆಯಲಾಯಿತು. ಅಧಿಕಾರಿಯ ಆದೇಶದಂತೆ ಕೂಡಲೇ ಮನೆಗೆ ಬಂದೆ, ನ್ಯಾಯಯುತವಾದ ಚುನಾವಣೆ ನಡೆಯಬೇಕೆಂಬುದು ನನ್ನ ಒತ್ತಾಯ'' ಎಂದಿದ್ದಾರೆ ಸೋನು ಸೂದ್.

    ಟಿಕೆಟ್ ಕೊಡಿಸಿದ್ದು ಸೋನು ಸೂದ್!?

    ಟಿಕೆಟ್ ಕೊಡಿಸಿದ್ದು ಸೋನು ಸೂದ್!?

    ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್ ಮೋಗಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಾಳವಿಕಾರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಸೋನು ಸೂದ್ ತಮ್ಮ ಸಹೋದರಿಯ ಪರವಾಗಿ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ್ದಾರೆ. ಸಹೋದರಿಗೆ ಟಿಕೆಟ್ ಕೊಡಿಸುವ ಹಿಂದೆ ಸೋನು ಸೂದ್‌ರ ಪ್ರಯತ್ನವೇ ಇದೆ ಎನ್ನಲಾಗುತ್ತಿದೆ. ಟಿಕೆಟ್‌ ಬಗ್ಗೆ ಚರ್ಚಿಸಲು ಸಹೋದರಿಯ ಜೊತೆಗೆ ಸೋನು ಸೂದ್ ಸಹ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಇತರ ಮುಖಂಡರನ್ನು ಭೇಟಿ ಮಾಡಿದ್ದರು.

    ಸೋನು ಸೂದ್‌ಗೆ ಬಿಜೆಪಿ ಆಹ್ವಾನ ನೀಡಿತ್ತು

    ಸೋನು ಸೂದ್‌ಗೆ ಬಿಜೆಪಿ ಆಹ್ವಾನ ನೀಡಿತ್ತು

    ಸೋನು ಸೂದ್‌ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಬಿಜೆಪಿಯವರು ಸೋನು ಸೂದ್‌ ಅನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಪಂಜಾಬ್‌ನ ಬಿಜೆಪಿ ಅಧ್ಯಕ್ಷ ಸ್ಥಾನದ ಆಫರ್ ನೀಡಿದ್ದರು. ಆದರೆ ಸೋನು ಸೂದ್ ಅದನ್ನು ನಿರಾಕರಿಸಿದರು. ಇದೇ ಸಮಯಕ್ಕೆ ಸರಿಯಾಗಿ ಸೋನು ಸೂದ್ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ನಂತರ ಸೋನು ಸೂದ್ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆಗೆ ಆಪ್ತವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಸೋನು ಅವರನ್ನು ದೆಹಲಿಯ ಶಿಕ್ಷಣ ಇಲಾಖೆ ರಾಯಭಾರಿ ಅನ್ನಾಗಿಸಲಾಯಿತು. ಪಂಜಾಬ್‌ನಲ್ಲಿ ಸೋನು ಸೂದ್ ಅವರು ಎಎಪಿಯ ತಾರಾ ಪ್ರಚಾರಕರಾಗಲಿದ್ದಾರೆ ಎನ್ನಲಾಯಿತು. ಆದರೆ ಅದೂ ಸುಳ್ಳಾಗಿ ಕೊನೆಗೆ ಕಾಂಗ್ರೆಸ್ ಜೊತೆ ಸಖ್ಯ ಬೆಳೆಸಿದರು ಸೋನು ಸೂದ್. ಇದರಿಂದಾಗಿ ಬಿಜೆಪಿ ಕಾರ್ಯಕರ್ತರ ಸಿಟ್ಟಿಗೆ ಗುರಿಯಾಗಿದ್ದಾರೆ.

    English summary
    FIR registered against actor Sonu Sood in Moga city police station. Election officer alleged that Sonu Sood campaigned for his sister in Moga's Landeke village on the voting day.
    Tuesday, February 22, 2022, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X