For Quick Alerts
  ALLOW NOTIFICATIONS  
  For Daily Alerts

  ಎನ್‌ಡಿ ಸ್ಟುಡಿಯೋದ 'ಜೋಧಾ-ಅಕ್ಬರ್‌' ಸೆಟ್‌ಗೆ ಬೆಂಕಿ

  |

  ಮಹಾರಾಷ್ಟ್ರದ ರಾಯಘಡದಲ್ಲಿನ ಎನ್‌ಡಿ ಸ್ಟುಡಿಯೋದಲ್ಲಿ ಹಾಕಲಾಗಿದ್ದ 'ಜೋದಾ-ಅಕ್ಬರ್‌' ಸೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮೇ 7 ರ ಮಧ್ಯಾಹ್ನದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಅಗ್ನಿಶಾಮಕದಳದವರು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಆದರೆ ಸೆಟ್ ಬಹುತೇಕ ನಾಶವಾಗಿದೆ.

  ಇದೇ ಸ್ಟುಡಿಯೋದಲ್ಲಿ 2007ರಲ್ಲಿ 'ಜೋಧಾ ಅಕ್ಬರ್' ಸಿನಿಮಾಕ್ಕಾಗಿ ಸೆಟ್ ಹಾಕಿದ್ದರು.ಚಿತ್ರೀಕರಣ ಮುಗಿದ ಬಳಿಕ ಸೆಟ್‌ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು, ಅದು ಪ್ರವಾಸಿ ಆಕರ್ಷಣೀಯವಾಗಿ ಬದಲಾಗಿತ್ತು. ಆದರೆ ಅದೇ ಸೆಟ್‌ಗೆ ಬೆಂಕಿ ಬಿದ್ದಿದ್ದು ಸೆಟ್ ಬಹುತೇಕ ಬೆಂಕಿಗಾಹುತಿಯಾಗಿದೆ.

  ಘಟನೆ ಬಗ್ಗೆ ಮಾಹಿತಿ ನೀಡಿರುವ ಕಾಲ್ಹಾಪುರ ತಹಶೀಲ್ದಾರ್ ಚಪ್ಪಲ್ವಾರ್, 'ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಧ್ಯಾಹ್ನ 12 ಗಂಟೆ ವೇಳೆಗೆ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 5 ಗಂಟೆ ವರೆಗೆ ಅಗ್ನಿಶಾಮಕದಳದವರು ಶ್ರಮಪಟ್ಟು ಬೆಂಕಿ ಆರಿಸಿದ್ದಾರೆ' ಎಂದರು.

  'ಸ್ಟುಡಿಯೋದ ಹಿಂದೆಯೇ ರೈಲ್ವೆ ಹಳಿ ಹಾದು ಹೋಗಿದ್ದು ಯಾರೋ ರೈಲ್ವೆ ಹಳಿಬಳಿಯ ಒಣಗಿದ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಅದೇ ಬೆಂಕಿ ವ್ಯಾಪಿಸಿ ಸೆಟ್‌ಗೆ ಹರಡಿಕೊಂಡಿದೆ. ಘಟನೆ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಒಂದೊಮ್ಮೆ ದೂರು ನೀಡಿದರೆ ತನಿಖೆ ಮಾಡುತ್ತೇವೆ' ಎಂದಿದ್ದಾರೆ.

  Nagini 2 ಸೀರಿಯಲ್ ನಿಂದ ಮೋಹನ್ ಶಂಕರ್ ಹೊರಬರಲು ಕಾರಣವೇನು? | Filmibeat Kannada

  ಎನ್‌ಡಿ ಸ್ಟುಡಿಯೋ ನಿರ್ದೇಶಕ ನಿತಿನ್ ದೇಸಾಯಿ ಅವರಿಗೆ ಸೇರಿದ್ದಾಗಿದೆ. ಹೃತಿಕ್ ರೋಷನ್-ಐಶ್ವರ್ಯಾ ರೈ ಅಭಿನಯದ 'ಜೋಧಾ-ಅಕ್ಬರ್' ಸಿನಿಮಾ ಇದೇ ಸೆಟ್‌ನಲ್ಲಿ ಚಿತ್ರೀಕರಿಸಲಾಗಿತ್ತು.

  English summary
  Fire breaks out in Rayghad's ND studio. Jodhaa Akbar set destroyed in fire accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X