For Quick Alerts
  ALLOW NOTIFICATIONS  
  For Daily Alerts

  ಮತ್ತೆ ದಕ್ಷಿಣಮುಖಿಯಾಗಿ ಐಶ್ವರ್ಯಾ ರೈ ಎಂಟ್ರಿ

  By ಜೇಮ್ಸ್ ಮಾರ್ಟಿನ್
  |

  ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ದಕ್ಷಿಣ ಮುಖಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಇರುವರ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಐಶೂ ಈಗ ಮತ್ತೊಮ್ಮೆ ತಮಿಳು ಚಿತ್ರದಲ್ಲಿ ನಟಿಸುವುದು ಗ್ಯಾರಂಟಿಯಾಗಿದೆ. ಈ ಮೂಲಕ ಐಶ್ವರ್ಯಾ ರೈ ಸಿನಿರಸಿಕರನ್ನು ರಂಜಿಸಲು ಭರ್ಜರಿ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಶುಭ ಸಂಗತಿಯನ್ನು ಸ್ವತಃ ಚಿತ್ರದ ನಿರ್ದೇಶಕ ಪಿ ವಾಸು ಬಹಿರಂಗಗೊಳಿಸಿದ್ದಾರೆ.

  ಆಪ್ತಮಿತ್ರ ಸರಣಿ ಖ್ಯಾತಿಯ ಪಿ. ವಾಸು ಅವರ ತೆಲುಗು, ತಮಿಳು ದ್ವಿಭಾಷಾ ಚಿತ್ರಕ್ಕೆ ಐಶ್ವರ್ಯಾ ರೈ ಅವರೇ ನಾಯಕಿಯಾಗಲಿದ್ದಾರಂತೆ. ಐಶ್ವರ್ಯಾ ಅವರಿಗೆ ಈಗಾಗಲೇ ನಾನು ಕಥೆ ಓದಿ ಹೇಳಿದ್ದೇನೆ. ಕಥೆ ಕೇಳಿ ಅವರು ಥ್ರಿಲ್ ಆಗಿದ್ದಾರೆ. ನಮ್ಮ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಾಹಸಪ್ರಧಾನ ಪಾತ್ರದಲ್ಲಿ ಐಶ್ವರ್ಯಾ ರೈ ಕಾಣಿಸಿಕೊಳ್ಳಲಿದ್ದಾರೆ ಎಂದು ವಾಸು ಹೇಳಿದ್ದಾರೆ.

  ಹಿಂದೆದೂ ಕಾಣದಂಥ ಪಾತ್ರವೊಂದರಲ್ಲಿ ಐಶ್ವರ್ಯಾ ಕಾಣಿಸಿಕೊಳ್ಳುತ್ತಿದ್ದು, ಕಲಾರಿ ಫೈಟರ್ ಪಾತ್ರದಲ್ಲಿ ಐಶೂ ಎಲ್ಲರನ್ನು ರಂಜಿಸಲಿದ್ದಾರೆ ಎಂದು ವಾಸು ಹೇಳಿದ್ದಾರೆ. ಈ ಪಾತ್ರಕ್ಕಾಗಿ ಐಶ್ವರ್ಯಾ ಅವರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆಯಂತೆ. ಇನ್ನಷ್ಟು ಚಿತ್ರದ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

  ದಕ್ಷಿಣದಲ್ಲಿ ಐಶ್ವರ್ಯಾ ರೈ, ಬಹುಭಾಷಾ ಚಿತ್ರಕ್ಕೆ ಓಕೆ

  ದಕ್ಷಿಣದಲ್ಲಿ ಐಶ್ವರ್ಯಾ ರೈ, ಬಹುಭಾಷಾ ಚಿತ್ರಕ್ಕೆ ಓಕೆ

  ತಮಿಳು, ತೆಲುಗು ಭಾಷೆಯಲ್ಲಿ ಗ್ಲೋಬಲ್ ಒನ್ ಸ್ಟುಡಿಯೋಸ್ ನ ಕೆ ರಮೇಶ್ ನಿರ್ಮಿಸುತ್ತ್ತಿರುವ ಪಿ.ವಾಸು ನಿರ್ದೇಶನ ಇನ್ನೂ ಹೆಸರಿಡದ ಈ ಚಿತ್ರವನ್ನು ಹಿಂದಿ ಭಾಷೆಗೂ ಡಬ್ ಮಾಡಲಾಗುತ್ತದೆ

  ಸೂಚನೆ: ಇಲ್ಲಿರುವ ಚಿತ್ರಕ್ಕೂ ಸ್ಲೈಡ್ ನಲ್ಲಿರುವ ಚಿತ್ರಕ್ಕೂ ಸಂಬಂಧವಿಲ್ಲ. ಇದು ಸಾಂದರ್ಭಿಕ ಚಿತ್ರ

  ಪಿ ವಾಸು ಮಹತ್ವಾಕಾಂಕ್ಷಿ ಚಿತ್ರ ಇದಾಗಲಿದೆ

  ಪಿ ವಾಸು ಮಹತ್ವಾಕಾಂಕ್ಷಿ ಚಿತ್ರ ಇದಾಗಲಿದೆ

  ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆ ಕಂಡ ಡಾಅ. ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಚಿತ್ರವನ್ನು ನಿರ್ದೇಶಿಸಿರುವ ಪಿ. ವಾಸು ಅವರು ಸುಮಾರು 50 ಕ್ಕೂ ಅಧಿಕ ಚಿತ್ರಗಳನ್ನು ತೆರೆ ತಂದಿರುವ ಅನುಭವಿ. ಹಿಂದಿಯಲ್ಲಿ ಹೋಗಿ ಪ್ಯಾರ್ ಕಿ ಜೀತ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ದಕ್ಷಿಣದಲ್ಲಿ ಐಶ್ವರ್ಯಾ ರೈಗಾಗಿ ಹೊಸಕಥೆ ತಯಾರಿಸಲು ಸುಮಾರು 2 ವರ್ಷಗಳ ತೆಗೆದುಕೊಂಡು ಕಲಾರಿ ಫೈಟರ್ ಕಥೆ ಬರೆದಿದ್ದಾರೆ.

  ಮತ್ತೆ ಮಣಿರತ್ನಂ ಚಿತ್ರದಲ್ಲಿ ಐಶ್ವರ್ಯಾ ರೈ ನಟನೆ?

  ಮತ್ತೆ ಮಣಿರತ್ನಂ ಚಿತ್ರದಲ್ಲಿ ಐಶ್ವರ್ಯಾ ರೈ ನಟನೆ?

  ಇರುವರ್ ಚಿತ್ರದ ನಂತರ ಮತ್ತೊಮ್ಮೆ ಐಶ್ವರ್ಯಾ ರೈ ಬಚ್ಚನ್ ಮಣಿರತ್ನಂ ನಿರ್ದೇಶನ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಬಹು ತಾರಾಗಣದ ಈ ಚಿತ್ರ ತೆಲುಗಿನಲ್ಲೂ ಏಕಕಾಲಕ್ಕೆ ಚಿತ್ರೀಕರಣ ಕಾಣಲಿದೆ ಎನ್ನಲಾಗಿದೆ.

  ನಾಗಾರ್ಜುನ, ಮಹೇಶ್ ಬಾಬು ಜತೆ ಐಶ್ವರ್ಯಾ

  ನಾಗಾರ್ಜುನ, ಮಹೇಶ್ ಬಾಬು ಜತೆ ಐಶ್ವರ್ಯಾ

  ಕಾಲಿವುಡ್, ಟಾಲಿವುಡ್ ಗಾಸಿಪ್ ಮೂಲಗಳ ಪ್ರಕಾರ ಮಣಿರತ್ನಂ ಅವರ ಬಹು ತಾರಾಗಣವಿರುವ ಮುಂದಿನ ಚಿತ್ರದಲ್ಲಿ ನಾಗಾರ್ಜುನ, ಮಹೇಶ್ ಬಾಬು ಹಾಗೂ ಶ್ರುತಿ ಹಾಸನ್ ಜತೆ ಐಶ್ವರ್ಯಾ ರೈ ನಟಿಸುವ ಸಾಧ್ಯತೆ ಹೆಚ್ಚಿದೆ.

  ಸೂಚನೆ: ಇಲ್ಲಿರುವ ಚಿತ್ರಕ್ಕೂ ಸ್ಲೈಡ್ ನಲ್ಲಿರುವ ಚಿತ್ರಕ್ಕೂ ಸಂಬಂಧವಿಲ್ಲ. ಇದು ಸಾಂದರ್ಭಿಕ ಚಿತ್ರ

  ವಾಸು ಚಿತ್ರಕ್ಕೆ ಫ್ರಾನ್ಸಿನಿಂದ ವಿಶೇಷ ತಜ್ಞರ ಬಳಕೆ

  ವಾಸು ಚಿತ್ರಕ್ಕೆ ಫ್ರಾನ್ಸಿನಿಂದ ವಿಶೇಷ ತಜ್ಞರ ಬಳಕೆ

  ಪಿ. ವಾಸು ನಿರ್ದೇಶನದ ಹೊಸ ಚಿತ್ರದ ಗ್ರಾಫಿಕ್ಸ್,ಅನಿಮೇಷನ್ ಗಾಗಿ ಫ್ರಾನ್ಸ್ ದೇಶದ ವಿಶೇಷ ತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಫ್ರಾನ್ಸಿನ ಅನಿಮ್ಯಾಟ್ರಾನಿಕ್ಸ್ ತಜ್ಞರು ಈ ಚಿತ್ರಕ್ಕೆ ವಿಷ್ಯುವಲ್ ಎಫೆಕ್ಟ್ ನೀಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ನಲ್ಲಿ ಕುದುರೆ ಏರಿರುವ ಐಶ್ವರ್ಯಾ ರೈ ಚಿತ್ರ ನೋಡಿ

  English summary
  Aishwarya Rai Bachchan, who had earlier acted in a few Tamil movies, has finally decided a project to make her comeback. The Bollywood diva will be returning with a bilingual Tamil/Telugu movie directed by P Vasu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X