twitter
    For Quick Alerts
    ALLOW NOTIFICATIONS  
    For Daily Alerts

    23 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಸಿನಿಮಾ ಪ್ರದರ್ಶನ! ಮೊದಲ ಸಿನಿಮಾ ಯಾವುದು?

    |

    ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ ಸಹ ಹಲವು ದಶಗಳಿಂದ ಭಾರತದ ಇತರ ರಾಜ್ಯಗಳಿಗಿಂತ ಸಾಂವಿಧಾನಿಕವಾಗಿ ಪ್ರತ್ಯೇಕವಾಗಿಯೇ ಗುರುತಿಸಿಕೊಂಡಿತ್ತು. ಅದಕ್ಕೆ ಮುಖ್ಯ ಕಾರಣ 370ನೇ ವಿಧಿ. ಮತ್ತು ಕೆಲವರ ಪ್ರತ್ಯೇಕವಾದಿ ಕೂಗು.

    ಜಮ್ಮು ಕಾಶ್ಮೀರದ ಹಲವು ಕಡೆ ಮೂಲಭೂತವಾದಿತನವನ್ನು ಹೇರಲಾಗಿತ್ತು, ಇದೇ ಕಾರಣದಿಂದಾಗಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಜಮ್ಮು ಕಾಶ್ಮೀರದ ಮಂದಿ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಲಿಲ್ಲವೆಂದೇ ಹೇಳಬೇಕಾಗುತ್ತದೆ. ಯಾವ ಮಟ್ಟಿಗೆಂದರೆ ಜಮ್ಮು ಕಾಶ್ಮೀರದಲ್ಲಿ ಸಿನಿಮಾ ಪ್ರದರ್ಶನ ಸಹ ಮಾಡಲಾಗುತ್ತಿರಲಿಲ್ಲ. ಇದಕ್ಕೆ ಕಾರಣ ಅಲ್ಲಿನ ಮುಖಂಡರ ಮೂಲಭೂತವಾದಿತನ ಹಾಗೂ ಪ್ರತ್ಯೇಕವಾದಿಗಳ ಪ್ರಭಾವ.

    ಹೊಸ ಸಿನಿಮಾ ನೀತಿ ಘೋಷಿಸಿದ ಜಮ್ಮು ಕಾಶ್ಮೀರಹೊಸ ಸಿನಿಮಾ ನೀತಿ ಘೋಷಿಸಿದ ಜಮ್ಮು ಕಾಶ್ಮೀರ

    ಆದರೆ 2019 ರಲ್ಲಿ ಜಮ್ಮು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಮಾನ್ಯತೆಯನ್ನು ರದ್ದು ಮಾಡಿ, ರಾಜ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೇಂದ್ರಾಡಳಿತ ಹೇರಿದ ಬಳಿಕ ಕೆಲವು ಬದಲಾವಣೆಗಳನ್ನು ಈ ಸುಂದರ ಕಣಿವೆ ರಾಜ್ಯ ಕಾಣುತ್ತಿದ್ದು, ಇದೀಗ ಬರೋಬ್ಬರಿ 30 ವರ್ಷಗಳ ಬಳಿಕ ಅಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ.

    First Multiplex Of Jammu Kashmir Opened On September 19, Cinema After 30 Years

    ಕಾಶ್ಮೀರದ ಮೊದಲ ಮಲ್ಟಿಪ್ಲೆಕ್ಸ್‌ ಥಿಯೇಟರ್ ಶ್ರೀನಗರದಲ್ಲಿ ಪ್ರಾರಂಭವಾಗಿದೆ. ಲೆಫ್ಟಿನಂಟ್ ಗೌರ್ನರ್ ಮನೋಜ್ ಸಿಂಹ ಅವರು ಇಂದು ಶ್ರೀನಗರದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಕಣಿವೆ ರಾಜ್ಯದ ಮೊದಲ ಮಲ್ಟಿಪ್ಲೆಕ್ಸ್‌ ಅನ್ನು ಐನಾಕ್ಸ್‌ ಡಿಸೈನ್ ಮಾಡಿ ನಿರ್ಮಿಸಿದೆ.

    ಬರೋಬ್ಬರಿ ಮೂರು ದಶಕಗಳ ಬಳಿಕ ಕಾಶ್ಮೀರದಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದ್ದು, ಕಾಶ್ಮೀರದ ಜನತೆ ಆರಾಮವಾಗಿ ಸಿನಿಮಾ ನೋಡಲೆಂದು ಮೂರು ಆಡಿಟೋರಿಯಮ್‌ಗಳ ಮಲ್ಟಿಪ್ಲೆಕ್ಸ್‌ ಅನ್ನು ಐನಾಕ್ಸ್ ಪ್ರಾರಂಭಿಸಿದೆ. ಒಮ್ಮೆಲೆ 1500 ಮಂದಿ ಸಿನಿಮಾ ವೀಕ್ಷಿಸಬಹುದು. ಒಂದು ಹಾಲ್‌ನಲ್ಲಿ 500 ಮಂದಿ ಒಟ್ಟಿಗೆ ಸಿನಿಮಾ ನೋಡಬಹುದಾಗಿದೆ.

    ಮಲ್ಟಿಪ್ಲೆಕ್ಸ್‌ ಉದ್ಘಾಟನೆ ಮಾಡಿದ ಲೆಫ್ಟಿನಂಟ್ ಗೌರ್ನರ್ ಮನೋಜ್ ಸಿಂಹ, ಕಾಶ್ಮೀರದ ಸೂಕ್ಷ್ಮ ಜಿಲ್ಲೆಗಳಾದ ಸೋಫಿಯಾನ್ ಹಾಗೂ ಪುಲ್ವಾಮಾದಲ್ಲಿಯೂ ಶೀಘ್ರದಲ್ಲಿಯೇ ಚಿತ್ರಮಂದಿರಗಳು ತಲೆ ಎತ್ತಲಿವೆ, ಆ ಬಳಿಕ ಕಣಿವೆಯ ಹತ್ತೂ ಜಿಲ್ಲೆಗಳಲ್ಲಿ ಚಿತ್ರಮಂದಿರಗಳು ತೆರೆಯಲಿವೆ ಎಂದಿದ್ದಾರೆ.

    ಕಳೆದ ಮೂವತ್ತು ವರ್ಷಗಳಿಂದಲೂ ಕಾಶ್ಮೀರಕ್ಕೆ ಮಲ್ಟಿಪ್ಲೆಕ್ಸ್ ತರಲು ಶ್ರಮಿಸಿದ ವಿಕಾಸ್ ಧಾರ್, ತಮ್ಮ ಒಡೆತನದಲ್ಲಿ ಮಲ್ಟಿಪ್ಲೆಕ್ಸ್ ಪ್ರಾರಂಭವಾಗಿದ್ದಕ್ಕೆ ಬಹಳ ಸಂತಸ ವ್ಯಕ್ತಪಡಿಸಿದ್ದು, ಮುಂಚೆ ಇಲ್ಲಿ 10-12 ಚಿತ್ರಮಂದಿರಗಳಿದ್ದವು, ನಾವು ಯೌವ್ವನದಲ್ಲಿದ್ದಾಗ ದಿನವೂ ಸಿನಿಮಾ ನೋಡುತ್ತಿದ್ದೆವು, ಈಗ ಮತ್ತೆ ಅದೇ ದಿನಗಳು ಬರಲಿವೆ. ಅಕ್ಟೋಬರ್ 1 ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ ಎಂದಿದ್ದಾರೆ.

    ಮಲ್ಟಿಪ್ಲೆಕ್ಸ್‌ ಉದ್ಘಾಟನೆ ಆಗಿದೆಯಾದರೂ ಸಿನಿಮಾ ಪ್ರದರ್ಶನ ಅಕ್ಟೋಬರ್ 1 ರಿಂದ ನಡೆಯಲಿದೆ. ಅಲ್ಲಿಯವರೆಗೆ ಟೆಸ್ಟ್ ರನ್, ಡ್ರೈ ರನ್ ನಡೆಯಲಿದೆ. ಅಕ್ಟೋಬರ್‌ 1 ರಿಂದ ಹಿಂದಿಯ 'ವಿಕ್ರಂ ವೇದ' ಹಾಗೂ ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ರದರ್ಶನವಾಗಲಿದೆ. ಜೊತೆಗೆ ಆಮಿರ್ ಖಾನ್‌ರ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಸಹ ಪ್ರದರ್ಶನಗೊಳ್ಳಲಿದೆ ಎಂದು ವಿಕಾಸ್ ಧಾರ್ ಹೇಳಿದ್ದಾರೆ.

    1990ರ ವರೆಗೆ ಜಮ್ಮು ಕಾಶ್ಮೀರದ ಜಿಲ್ಲಾ ಕೇಂದ್ರಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಾಕಷ್ಟಿದ್ದವು, ಸಿನಿಮಾಗಳ ಪ್ರದರ್ಶನವೂ ನಡೆಯುತ್ತಿತ್ತು. ಆದರೆ 1990 ರಲ್ಲಿ ಹೆಚ್ಚಾದ ಉಗ್ರವಾದ, ಪ್ರತ್ಯೇಕವಾದ, ಮೂಲಭೂತವಾದಿಗಳ ಪ್ರಭಾವದಿಂದ ಸಿನಿಮಾಗಳು ನಿಂತವು. ಪ್ರತ್ಯೇಕತವಾದಿಗಳ ಗುಂಪು ಚಿತ್ರಮಂದಿರ ಮಾಲೀಕರಿಗೆ ಜೀವ ಬೆದರಿಕೆ ಹಾಕಿ ಥಿಯೇಟರ್‌ಗಳನ್ನು ಬಂದ್ ಮಾಡಿಸಿತು. 1999 ರಲ್ಲಿ ಓಮರ್ ಅದ್ಭುಲ್ಲಾ, ಚಿತ್ರಮಂದಿರಗಳ ಪುನರ್‌ ಆರಂಭಕ್ಕೆ ಯತ್ನಿಸಿ ಬಹುತೇಕ ಸಫಲವೂ ಆದರು. ಆದರೆ ಅದೇ ಸಮಯಕ್ಕೆ ಭಯೋತ್ಪಾದಕರ ಗುಂಪು ಚಿತ್ರಮಂದಿರದ ಮೇಲೆ ಗ್ರೆನೇಡ್ ಎಸೆದು ಅಮಾಯಕರನ್ನು ಬಲಿ ಪಡೆದುಕೊಂಡಿತು. ಆ ಬಳಿಕ ಮತ್ತೆ ಕಾಶ್ಮೀರದಲ್ಲಿ ಚಿತ್ರಮಂದಿರಗಳ ಸದ್ದು ಅಡಗಿತು.

    English summary
    First Multiplex of Jammu and Kashmir inaugurated on September 19 by lieutenant governor Manoj Sinha. After 30 years movie has started in Kashmir.
    Wednesday, September 21, 2022, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X