For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್‌ನಿಂದ 'ಫಿಜಾ' ನಿರ್ಮಾಪಕ ಪ್ರದೀಪ್ ಗುಹಾ ನಿಧನ

  |

  ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಕರಿಷ್ಮಾ ಕಪೂರ್ ಅಭಿನಯದ 'ಫಿಜಾ' ಸಿನಿಮಾದ ನಿರ್ಮಾಪಕ ಮತ್ತು ಟೈಮ್ಸ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪ್ರದೀಪ್ ಗುಹಾ ಇಂದು (ಆಗಸ್ಟ್ 21) ನಿಧನರಾದರು ಎಂದು ವರದಿಯಾಗಿದೆ.

  ಪ್ರದೀಪ್ ಗುಹಾ ಪಿತ್ತಜನಕಾಂಗದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಹಲವು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

  ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

  ಇ-ಟೈಮ್ಸ್ ವರದಿಯ ಪ್ರಕಾರ, ಪ್ರದೀಪ್ ಗುಹಾ ಅವರಿಗೆ ಮುಂಬೈನ ಅತ್ಯುತ್ತಮ ವೈದ್ಯರು ಮತ್ತು ನ್ಯೂಯಾರ್ಕ್‌ನ ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಉತ್ತಮ ಪ್ರಯತ್ನಗಳ ಹೊರತಾಗಿಯೂ ಅವರ ಸ್ಥಿತಿ ಹದಗೆಟ್ಟಿತು. ಗುಹಾ ಪ್ರಸ್ತುತ 9X ಮೀಡಿಯಾದ ಎಂಡಿಯಾಗಿದ್ದರು. ಅವರು ಈಗ ಪತ್ನಿ ಪಾಪಿಯಾ ಮತ್ತು ಮಗ ಸಂಕೇತ್ ಅವರನ್ನು ಅಗಲಿದ್ದಾರೆ.

  ಪ್ರದೀಪ್ ಗುಹಾ ಅವರ ನಿಧನಕ್ಕೆ ಬಾಲಿವುಡ್ ಇಂಡಸ್ಟ್ರಿಯಿಂದ ಹಲವರು ಸಂತಾಪ ಸೂಚಿಸಿದ್ದಾರೆ. ಪ್ರದೀಪ್ ಗುಹಾ ಅವರ ಆಪ್ತ ಮಿತ್ರ ಹಾಗೂ ಹಿರಿಯ ಚಿತ್ರ ನಿರ್ಮಾಪಕ ಸುಭಾಷ್ ಘಾಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತನ ಅಗಲಿಕೆಗೆ ವಿದಾಯ ತಿಳಿಸಿದ್ದಾರೆ.

  'ಫ್ಯಾಮಿಲಿ ಮ್ಯಾನ್' ನಟ ಮನೋಜ್ ಬಾಜಪೇಯಿ ಕೂಡ ಪ್ರದೀಪ್ ಗುಹಾ ಅವರಿಗೆ ಸಂತಾಪ ಸೂಚಿಸಿದ್ದಾರೆ. ''ಪ್ರದೀಪ್ ಗುಹಾ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ, ಹಾಗೂ ದುಃಖ ತಂದಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

  ಗಾಯಕ ಅದ್ನಾನ್ ಸಾಮಿ ಸಹ ಪ್ರದೀಪ್ ಗುಹಾ ಸಾವಿಗೆ ಸಂತಾಪ ಸೂಚಿಸಿದ್ದಾರೆ. "ತೇರಾ ಚೆಹ್ರಾ" ಗಾಯಕ ತಮ್ಮ ಟ್ವಿಟ್ಟರ್‌ನಲ್ಲಿ ''ಮೀಡಿಯಾ ಲೆಜೆಂಡ್ ಪ್ರದೀಪ್ ಗುಹಾ ನಿಧನರಾದರು ಎಂದು ತಿಳಿದಾಗ ತುಂಬಾ ದುಃಖವಾಯಿತು. ಅವರು ಅದ್ಭುತ ವ್ಯಕ್ತಿ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಪ್ರತಿಭಾವಂತರು. 20 ವರ್ಷಗಳ ಹಿಂದೆ ಬಾಂಬೆ ಟೈಮ್ಸ್ ಸಂಪಾದಕರಾಗಿದ್ದಾಗಿನಿಂದಲೂ ನನಗೆ ಅವರ ಜೊತೆ ಒಳ್ಳೆಯ ನೆನಪುಗಳಿವೆ'' ಎಂದು ಟ್ವೀಟ್ ಮಾಡಿದರು.

  2000ನೇ ವರ್ಷದಲ್ಲಿ ತೆರೆಕಂಡಿದ್ದ 'ಫಿಜಾ' ಚಿತ್ರವನ್ನು ಪ್ರದೀಪ್ ಗುಹಾ ನಿರ್ಮಿಸಿದ್ದರು. ಹೃತಿಕ್ ರೋಷನ್ ಮತ್ತು ಕರೀಷ್ಮಾ ಕಪೂರ್ ನಟಿಸಿದ್ದ ಈ ಚಿತ್ರವನ್ನು ಖಲೀದ್ ಮೊಹಮ್ಮದ್ ನಿರ್ದೇಶಿಸಿದ್ದರು. ಜಯಾ ಬಚ್ಚನ್ ಮತ್ತು ನೇಹಾ ಬಾಜಪೇಯಿ, ಆಶಾ ಸಚ್‌ದೇವ ಸೇರಿದಂತೆ ಹಲವರು ಅಭಿನಯಿಸಿದ್ದರು.

  English summary
  'Fiza' producer Pradeep Guha passes away due to cancer; Subhash Ghai, Adnan Sami mourn demise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X