»   » ಫೋರ್ಬ್ಸ್ ಪಟ್ಟಿ: ಶಾರುಖ್ ಹಿಂದಿಕ್ಕಿದ ಅಮಿತಾಬ್, ಸಲ್ಮಾನ್

ಫೋರ್ಬ್ಸ್ ಪಟ್ಟಿ: ಶಾರುಖ್ ಹಿಂದಿಕ್ಕಿದ ಅಮಿತಾಬ್, ಸಲ್ಮಾನ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ನಟಿಯರ ಪಟ್ಟಿಯನ್ನು ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿದೆ. ಸತತ ಮೂರನೇ ಬಾರಿಗೆ ರಾಬರ್ಟ್ ಡೌನಿ ಜ್ಯೂನಿಯರ್ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಟಾಪ್ 10 ಪಟ್ಟಿಯಿಂದ ಕಿಂಗ್ ಖಾನ್ ಶಾರುಖ್ ಹೊರ ಬಿದ್ದಿದ್ದರೆ, ಸೂಪರ್‌ಸ್ಟಾರ್‌ಗಳಾದ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಪಟ್ಟಿಯಲ್ಲಿ ಮೇಲಕ್ಕೇರಿದ್ದಾರೆ.

  50 ವರ್ಷ ವಯಸ್ಸಿನ ರಾಬರ್ಟ್ ಡೌನಿ ಜ್ಯೂನಿಯರ್ ಅವರು ಅವೆಂಜರ್; ಏಜ್ ಆಫ್ ಅಲ್ಟ್ರಾನ್ ನ ಬೃಹತ್ ಯಶಸ್ಸಿನಿಂದ ಸರಿ ಸುಮಾರು 80 ಮಿಲಿಯನ್ ಡಾಲರ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

  50 ಮಿಲಿಯನ್ ಡಾಲರ್ ಗಳಿಸಿ ಎರಡನೇ ಸ್ಥಾನದಲ್ಲಿ ಜಾಕಿ ಚಾನ್ ಇದ್ದರೆ, ವಿನ್ ಡೀಸೆಲ್ 47 ಮಿಲಿಯನ್ ಡಾಲರ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಫ್ಯೂರಿಯಸ್ 7 ಚಿತ್ರದ ಗೆಲುವು ಡೀಸೆಲ್ ಗೆ ಬಲ ತಂದಿದೆ. 'ಜೇಮ್ಸ್ ಬಾಂಡ್' ಡೇನಿಯಲ್ ಕ್ರೇಗ್ ಅವರು ಪಟ್ಟಿಯಲ್ಲಿರುವ ಏಕೈಕ ಬ್ರಿಟಿಷ್ ಮೂಲದ ನಟ ಎನಿಸಿದ್ದು 15 ಸ್ಥಾನದಲ್ಲಿ ಆಸ್ಟ್ರೇಲಿಯಾದ ಕ್ರಿಸ್ ಹೆಮ್ಸ್ ವರ್ಥ್ ಜೊತೆ ಇದ್ದಾರೆ.

  2014ರ ಜೂನ್ 1 ಹಾಗೂ 2015ರ ಜೂನ್ 1ರ ನಡುವಿನ ಅವಧಿಯಲ್ಲಿ ನಟರು ಪಡೆದಿರುವ ಸಂಭಾವನೆಯ ಮೊತ್ತವನ್ನು ಆಧರಿಸಿ ಫೋರ್ಬ್ಸ್ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

  ಪಟ್ಟಿಯಲ್ಲಿ ಅಮಿತಾಬ್ , ಸಲ್ಮಾನ್, ಅಕ್ಷಯ್

  ಹಾಲಿವುಡ್ ನಟರ ಜೊತೆ ಬಾಲಿವುಡ್ ನಟರನ್ನು ಮೊದಲ ಬಾರಿಗೆ ಪರಿಗಣಿಸಿದ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿರುವ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರು ಡಾಯ್ನ ‘ದಿ ರಾಕ್' ಜಾನ್ಸನ್ ಹಾಗೂ ಜಾನಿ ಡೆಪ್‌ರನ್ನು ಹಿಂದಿಕ್ಕಿದ್ದಾರೆ.

  ಮೊದಲ ಬಾರಿಗೆ ಪಟ್ಟಿಯಲ್ಲಿ ಬಾಲಿವುಡ್ ನಟರು

  2014ರ ಜೂನ್ 1 ಹಾಗೂ 2015ರ ಜೂನ್ 1ರ ನಡುವಿನ ಅವಧಿಯಲ್ಲಿ ನಟರು ಪಡೆದಿರುವ ಸಂಭಾವನೆಯ ಮೊತ್ತವನ್ನು ಆಧರಿಸಿ ಫೋರ್ಬ್ಸ್ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಇದೇ ಮೊದಲ ಬಾರಿಗೆ ಹಾಲಿವುಡ್ ನಟರ ಜೊತೆಗೆ ಬಾಲಿವುಡ್ ನಟರ ಗಳಿಕೆ ಪಟ್ಟಿಯನ್ನು ಪರಿಗಣಿಸಲಾಗಿದ್ದು, ಬಾಲಿವುಡ್ ಕಲಾವಿದರು ಟಾಪ್ ಸ್ಥಾನಗಳನ್ನೇ ಪಡೆದುಕೊಂಡಿದ್ದಾರೆ.

  ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್ ನಟರು

  ಸಲ್ಮಾನ್ ಹಾಗೂ ಅಮಿತಾಬ್ 33.5 ಮಿಲಿಯನ್ ಡಾಲರ್ ನೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಕ್ಷಯ್ ಕುಮಾರ್ 32.5 ಮಿಲಿಯನ್ ಡಾಲರ್ ನೊಂದಿಗೆ ಇದ್ದಾರೆ.

  ಕಿಂಗ್ ಖಾನ್ ಶಾರುಖ್

  ಕಿಂಗ್ ಖಾನ್ ಶಾರುಖ್ ಅವರು 18ನೇ ಸ್ಥಾನಕ್ಕೆ ಕುಸಿದಿದ್ದು 26 ಮಿಲಿಯನ್ ಡಾಲರ್ ಮಾತ್ರ ಹೊಂದಿದ್ದಾರೆ.

  ರಣಬೀರ್ ಕಪೂರ್

  ರಾಯ್ ಹಾಗೂ ಬಾಂಬೆ ವೆಲ್ವೆಟ್ ಸೋಲಿನ ನಡುವೆಯೂ ರಣಬೀರ್ ಕಪೂರ್ ಅವರು 15 ಮಿಲಿಯನ್ ಡಾಲರ್ ನೊಂದಿಗೆ 30ನೇ ಸ್ಥಾನದಲ್ಲಿದ್ದಾರೆ.

  ರಣ್‌ಬೀರ್ ಕಪೂರ್ ಬಗ್ಗೆ ಫೋರ್ಬ್ಸ್ ನಿಂದ ಟ್ವೀಟ್

  15 ದಶಲಕ್ಷ ಡಾಲರ್ ಸಂಭಾವನೆ ಪಡೆದಿರುವ ರಣಬೀರ್ ಕಪೂರ್ ಬಗ್ಗೆ ಫೋರ್ಬ್ಸ್ ಟ್ವೀಟ್ ಮಾಡಿದ್ದು ಹೀಗೆ...

  English summary
  Robert Downey Jr. topped the list as highest-paid actors for the third time in a row, Bollywood Actors Amitabh Bachchan, Salman Khan and Akshay Kumar have made it to the top 10 in Forbes' highest paid actor list. King Khan fills in the number 18 spot with a whopping $26 million in his pocket.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more