For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ಸಾವು: ದೇಹದ ಅಂಗಗಳಲ್ಲಿ ವಿಷ ಇದ್ಯಾ? ಎಫ್‌ಎಸ್‌ಎಲ್ ತನಿಖೆ

  |

  ಬಾಲಿವುಡ್ ಯುವ ನಟ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಈ ಸಾವಿನ ಸುತ್ತ ಸಹಜವಾಗಿ ಅನುಮಾನ ಮೂಡಿದೆ. 40 ವರ್ಷದ ಸಿದ್ದಾರ್ಥ್ ಬಹಳ ಫಿಟ್ ಆಗಿದ್ದರು, ಆರೋಗ್ಯವಾಗಿದ್ದರು. ಆದರೂ ಅವರಿಗೆ ಹೃದಯಾಘಾತ ಏಕೆ ಆಯಿತು ಎಂಬ ಪ್ರಶ್ನೆ ಬಲವಾಗಿದೆ ಕಾಡಿದೆ. ಸಿದ್ಧಾರ್ಥ್ ಮರಣೋತ್ತರ ವರದಿಯಲ್ಲಿ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ಖಾತ್ರಿಪಡಿಸಿದೆ. ವೈದ್ಯರು ಸಹ ಗಾಯಗಳು ಏನೂ ಆಗಿಲ್ಲ, ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ತಿಳಿಸಿದ್ದರು.

  ಅದರೆ ಸಾಮಾನ್ಯ ಜನರಲ್ಲಿ ಈ ಸಾವು ಚರ್ಚೆಯ ವಿಷಯವಾಗಿದೆ. ಸುಶಾಂತ್ ಸಿಂಗ್ ಸಾವಿನ ನಂತರ ಅಂತಹದೊಂದು ಹೃದಯಹಿಂಡುವ ಸಾವು ಇದಾಗಿದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  ಇದೀಗ, ಸಿದ್ಧಾರ್ಥ್ ಶುಕ್ಲಾ ಅವರ ದೇಹದ ಆಂತರಿಕ ಅಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವಿಷದ ಅಂಶ ಏನಾದರೂ ಇದ್ಯಾ ಎಂದು ಪರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೇಲ್ನೋಟಕ್ಕೆ ಯಾವುದೇ ಅನುಮಾನ ವ್ಯಕ್ತವಾಗಿಲ್ಲವಾದರೂ, ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಎಫ್‌ಎಲ್‌ಎಲ್ ವರದಿ ಸಿಗಲಿದೆ.

  ವಿಡಿಯೋ: ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆಯಲ್ಲಿ ಪೊಲೀಸರೊಂದಿಗೆ ಕೈ-ಕೈ ಮಿಲಾಯಿಸಿದ ನಟ-ನಟಿವಿಡಿಯೋ: ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆಯಲ್ಲಿ ಪೊಲೀಸರೊಂದಿಗೆ ಕೈ-ಕೈ ಮಿಲಾಯಿಸಿದ ನಟ-ನಟಿ

  ಅಂದ್ಹಾಗೆ, ಗುರುವಾರ ಬೆಳಗ್ಗೆ ಸಿದ್ಧಾರ್ಥ್ ಶುಕ್ಲಾ ತೀವ್ರ ಅಸ್ವಸ್ತವಾದ ಹಿನ್ನೆಲೆ ಮುಂಬೈನ ಕೂಪರ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣದಲ್ಲಿ ಸಿದ್ಧಾರ್ಥ್ ಇನ್ನಿಲ್ಲ ಎಂದು ವೈದ್ಯರು ಮಾಹಿತಿ ನೀಡಿದರು. ಸಿದ್ಧಾರ್ಥ್ ಅಕಾಲಿಕ ನಿಧನಕ್ಕೆ ಅನೇಕರು ಕಂಬನಿ ಮಿಡಿದರು. ಶುಕ್ರವಾರ ಸಂಜೆ ಶುಕ್ಲಾ ಅಂತ್ಯಕ್ರಿಯೆ ಮಾಡಲಾಯಿತು.

  ಸಿದ್ಧಾರ್ಥ್ ಶುಕ್ಲಾ ಪ್ರತಿನಿತ್ಯ ಮಿಸ್ ಮಾಡದೆ ವರ್ಕೌಟ್ ಮಾಡ್ತಿದ್ದರು. ಎಷ್ಟೇ ಬ್ಯುಸಿಯಿದ್ದರೂ ವ್ಯಾಯಾಮ ಮಾಡಿಯೇ ಮಲಗುತ್ತಿದ್ದರು. ಅವರು ವರ್ಕೌಟ್ ತಪ್ಪಿಸಿಕೊಳ್ಳುತ್ತಿದ್ದಿದ್ದು ಬಹಳ ಅಪರೂಪ ಎನ್ನುವ ಮಾತು ಅವರ ಆಪ್ತರ ಬಳಗದಲ್ಲಿ ಕೇಳಿ ಬಂದಿರುವ ಮಾತು. ಅದರಂತೆ ಸಾಯುವ ಮುನ್ನ ದಿನವೂ ಸಿದ್ಧಾರ್ಥ್ ಶುಕ್ಲಾ ವ್ಯಾಯಾಮ ಮಾಡಿದ್ದರು. ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ 8 ಗಂಟೆ ಆಗಿತ್ತು. ಬಳಿಕ ರಾತ್ರಿ 10 ಗಂಟೆಗೆ ತಮ್ಮ ಮನೆಯ ಆವರಣದಲ್ಲಿಯೇ ಸಿದ್ಧಾರ್ಥ್ ಜಾಗಿಂಗ್ ಮಾಡಿದ್ದಾರೆ. ನಂತರ ಸ್ವಲ್ಪ ಆಹಾರವೂ ಸೇವಿಸಿದ್ದರು. ವ್ಯಾಯಾಮ ಮುಗಿಸಿ ಮಲಗಿದರು. ಆದರೆ ಮುಂಜಾನೆ 3 ಗಂಟೆ ಸುಮಾರಿಗೆ ಸಿದ್ಧಾರ್ಥ್‌ಗೆ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಎದೆ ನೋವು ಕಾಣಿಸಿಕೊಂಡಿರುವ ಬಗ್ಗೆ ತಾಯಿ ರಿತು ಶುಕ್ಲಾ ಅವರಲ್ಲಿ ಹೇಳಿಕೊಂಡರು. ಕೂಡಲೇ ತಾಯಿ ರಿತು ಶರ್ಮಾ ನೀರು ಕಾಯಿಸಿ ಕೊಟ್ಟರು. ಆಮೇಲೆ ಮಲಗಿದ ಶುಕ್ಲಾ ಮತ್ತೆ ಏಳಲೇ ಇಲ್ಲ. ಆಮೇಲೆ ಭಯಭೀತಿಗೊಂಡ ತಾಯಿ ಕೂಪರ್ ಆಸ್ಪತ್ರೆಗೆ ರವಾನಿಸಿದರು. ದುರಾದೃಷ್ಟವಶಾತ್ ಸಿದ್ಧಾರ್ಥ್ ಪ್ರಾಣ ಹಾರಿಗೋಗಿತ್ತು.

  ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಪ್ರೇಯಸಿ ಶೆಹನಾಜ್ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಪ್ರೇಯಸಿ ಶೆಹನಾಜ್

  ಇನ್ನು ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ 13ನೇ ಆವೃತ್ತಿಯ ವಿನ್ನರ್ ಆಗಿದ್ದರು. 2014ರಲ್ಲಿ ತೆರೆಕಂಡಿದ್ದ 'ಹಂಪ್ಟಿ ಶರ್ಮಾ ಕೆ ದುಲ್ಹಾನಿಯಾ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇದು ಇವರ ಚೊಚ್ಚಲ ಹಿಂದಿ ಸಿನಿಮಾ ಆಗಿತ್ತು. ಏಕ್ತಾ ಕಪೂರ್ ನಿರ್ಮಾಣದ 'ಬ್ರೋಕನ್ ಬಟ್ ಬ್ಯೂಟಿಫುಲ್ 3' ಶೋನಲ್ಲಿ ಸಿದ್ಧಾರ್ಥ್ ಶುಕ್ಲಾ ಕೊನೆಯದಾಗಿ ಕಾಣಿಸಿಕೊಂಡಿದ್ದರು.

  'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  English summary
  Forensic Lab Expert Will Investigate Presence Of Toxicity In The Organs of actor Sidharth Shukla.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X