»   » ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ.! ಮತ್ತೆ.?

ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ.! ಮತ್ತೆ.?

Posted By:
Subscribe to Filmibeat Kannada

ದುಬೈನಲ್ಲಿ ಶ್ರೀದೇವಿ 'ಹೃದಯಾಘಾತ'ದಿಂದ ನಿಧನರಾದರು ಎಂದೇ ಇಲ್ಲಿಯವರೆಗೂ ಸುದ್ದಿ ಆಗಿತ್ತು. ಆದ್ರೀಗ, ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಶ್ರೀದೇವಿ ಮೃತಪಟ್ಟಿರುವುದು ಹೃದಯಾಘಾತದಿಂದಲ್ಲ ಎಂಬುದು ಸ್ಪಷ್ಟವಾಗಿದೆ.

ಹಠಾತ್ತಾಗಿ ಶ್ರೀದೇವಿ ಕೊನೆಯುಸಿರೆಳೆದಿದ್ದು ಹೇಗೆ ಅಂದ್ರೆ, ''ಆಕಸ್ಮಿಕ ಮುಳುಗುವಿಕೆ''ಯಿಂದ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾತ್ ಟಬ್ ಒಳಗೆ ಶ್ರೀದೇವಿ ಕುಸಿದು ಬಿದ್ದಿದ್ದರ ಬಗ್ಗೆ ಈಗಾಗಲೇ ಕೆಲ ಪತ್ರಿಕೆಗಳು ವರದಿ ಮಾಡಿವೆ. ಬಾತ್ ಟಬ್ ಒಳಗೆ ಆಕಸ್ಮಿಕವಾಗಿ ಬಿದ್ದ ಶ್ರೀದೇವಿ ಸಾವನ್ನಪ್ಪಿದ್ದಾರೆ ಎಂದು ಯು.ಎ.ಇ ಯ ಗಲ್ಫ್ ನ್ಯೂಸ್ ವರದಿ ಮಾಡಿದೆ. ಮುಂದೆ ಓದಿರಿ...

ಹೃದಯಾಘಾತದ ಬಗ್ಗೆ ಉಲ್ಲೇಖ ಇಲ್ಲ.!

ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಯಾವುದೇ ಉಲ್ಲೇಖ ಇಲ್ಲ.

ಶ್ರೀದೇವಿ ಮೃತದೇಹ ಇನ್ನೂ ಕುಟುಂಬದ ಕೈಸೇರಿಲ್ಲ: ತಡವಾಗುತ್ತಿರುವುದಕ್ಕೆ ಕಾರಣವೇನು.?

'ಆಕಸ್ಮಿಕ ಮುಳುಗುವಿಕೆ'ಯಿಂದ ಸಾವು

ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು ನಟಿ ಶ್ರೀದೇವಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸ್ಪಷ್ಟವಾಗಿದೆ.

ಮದ್ಯ ಸೇವನೆ ಮಾಡಿದ್ರಾ.?

ಶ್ರೀದೇವಿ ಅವರ ರಕ್ತ ಪರೀಕ್ಷೆ ವರದಿಯಲ್ಲಿ ಮದ್ಯ ಸೇವನೆ ಮಾಡಿರುವುದು ಕಂಡುಬಂದಿದೆ. ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಕಂಟೆಂಟ್ ಪತ್ತೆಯಾಗಿದೆ.

ಆಯಾತಪ್ಪಿ ಬಾತ್ ಟಬ್ ಗೆ ಬಿದ್ದು ಮುಳುಗಿದ ಶ್ರೀದೇವಿ

ಮದ್ಯ ಸೇವನೆ ಮಾಡಿದ್ದ ಶ್ರೀದೇವಿ ಆಯಾತಪ್ಪಿ ಬಾತ್ ಟಬ್ ಒಳಗೆ ಬಿದ್ದು, ಮುಳುಗಿ, ಪ್ರಜ್ಞೆ ತಪ್ಪಿದ್ದಾರೆ ಎಂದು 'ಯು.ಎ.ಇ'ಯ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಯಾವುದೇ ಅಪರಾಧ ಸಂಚು ಇಲ್ಲ.!

ಶ್ರೀದೇವಿ ನಿಧನ ಹಿಂದೆ ಯಾವುದೇ ಅಪರಾಧದ ಸಂಚು ಇಲ್ಲ ಎಂದು ದುಬೈ ಪೊಲೀಸರು ಖಚಿತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಳ ರಿಪೋರ್ಟ್ ಶ್ರೀದೇವಿ ಕುಟುಂಬಸ್ಥರಿಗೆ ಹಾಗೂ ಭಾರತೀಯ ರಾಯಭಾರ ಕಛೇರಿಗೆ ಹಸ್ತಾಂತರ ಮಾಡಲಾಗಿದೆ. ಸದ್ಯದಲ್ಲೇ ಶ್ರೀದೇವಿ ಪಾರ್ಥೀವ ಶರೀರ ಕುಟುಂಬದ ಕೈಸೇರಲಿದೆ.

ಅಷ್ಟಕ್ಕೂ, ಅವತ್ತು ಆಗಿದ್ದು ಏನು.?

ಮೋಹಿತ್ ಮಾರ್ವಾ ವಿವಾಹ ಮುಗಿಸಿಕೊಂಡು ಬೋನಿ ಕಪೂರ್ ಭಾರತಕ್ಕೆ ವಾಪಸ್ ಬಂದಿದ್ರೆ, ಶ್ರೀದೇವಿ ಮಾತ್ರ ದುಬೈನಲ್ಲೇ ಉಳಿದುಕೊಂಡಿದ್ದರು. ಪತ್ನಿಗೆ ಸರ್ ಪ್ರೈಸ್ ನೀಡಲು ಬೋನಿ ಕಪೂರ್ ಪುನಃ ದುಬೈಗೆ ತೆರಳಿದರು. ಡಿನ್ನರ್ ಗೆ ಹೊರಹೋಗಲು ಬೋನಿ ಕಪೂರ್ ಪ್ಲಾನ್ ಮಾಡಿದ್ದ ಕಾರಣ, ರೆಡಿ ಆಗಲು ಶ್ರೀದೇವಿ ಬಾತ್ ರೂಮ್ ಗೆ ತೆರಳಿದರು.

ಬಾತ್ ಟಬ್ ಒಳಗೆ ಬಿದ್ದಿದ್ದ ಶ್ರೀದೇವಿ

ಬಾತ್ ರೂಮ್ ಒಳಗೆ ಹೋದ ಶ್ರೀದೇವಿ ಹದಿನೈದು ನಿಮಿಷ ಆದರೂ ಹೊರಗೆ ಬರಲಿಲ್ಲ. ಸದ್ದು ಕೂಡ ಆಗದೇ ಇದ್ದ ಕಾರಣ ಗಾಬರಿಗೊಂಡ ಬೋನಿ ಕಪೂರ್, ಬಾತ್ ರೂಮ್ ಬಾಗಿಲು ಒಡೆದು ಒಳಗೆ ಹೊಕ್ಕರು. ಆಗ ನೀರು ತುಂಬಿದ್ದ ಬಾತ್ ಟಬ್ ಒಳಗೆ ಶ್ರೀದೇವಿ ಬಿದ್ದಿರುವುದನ್ನು ಕಂಡು ಬೋನಿ ಕಪೂರ್ ಆಘಾತಗೊಂಡರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ, ಅಷ್ಟರಲ್ಲಾಗಲೇ ಶ್ರೀದೇವಿ ಸಾವನ್ನಪ್ಪಿದರು.

ಕಾಲು ಜಾರಿ ಬಿದ್ರಾ.?

ಬಾತ್ ರೂಮ್ ಒಳಗೆ ಶ್ರೀದೇವಿ ಕಾಲು ಜಾರಿ ಬಿದ್ರೋ, ಅಥವಾ ಹೇಗೆ ಬಿದ್ರೋ..? ನೋಡಿರುವವರು ಯಾರೂ ಇಲ್ಲ. ಆದ್ರೆ, ಮರಣೋತ್ತರ ವರದಿಯಲ್ಲಿ ಹಾಗೆ ಉಲ್ಲೇಖವಿದೆ. ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿರಬಹುದು. ಆದ್ರೆ, ಅದು ಆಕಸ್ಮಿಕ ಅಂತ ಹೇಳಲು ಹೇಗೆ ಸಾಧ್ಯ.? ಎಂಬ ಪ್ರಶ್ನೆ ಸದ್ಯ ಉದ್ಭವವಾಗಿದೆ.

English summary
Forensic report says Bollywood Actress Sridevi died from Accidental Drowning.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada