For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಆತ್ಮಹತ್ಯೆ: ಆ ಇಬ್ಬರು ನಟರ ವಿಚಾರಣೆ ಆಗಲೇಬೇಕು ಎಂದ ಮಾಜಿ ಸಿಎಂ

  |

  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನೇ-ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೊದಲಿಗೆ ಸೀಮಿತವಾಗಿದ್ದ ಅನುಮಾನಿತರ ಪಟ್ಟಿಗೆ ಹೊಸ ಹೊಸ ಸೇರ್ಪಡೆಗಳು ಆಗುತ್ತಾ ಸಾಗುತ್ತಿದೆ.

  ಎಸ್ ಪಿ ಬಾಲಸುಬ್ರಹ್ಮಣ್ಯಂ ತಗುಲಿದ ಕರೋನ ಸೋಂಕು | Filmibeat Kannada

  ಸುಶಾಂತ್ ಆತ್ಮಹತ್ಯೆಗೆ ಕರಣ್ ಜೋಹರ್, ಮಹೇಶ್ ಭಟ್, ರಿಯಾ ಚಕ್ರವರ್ತಿ ಕಾರಣ ಎನ್ನಲಾಗಿತ್ತು. ನಂತರ ಈ ಪ್ರಕರಣಕ್ಕೆ ರಾಜಕೀಯ ಸಂಪರ್ಕ ಇದೆಯೆಂದು ಆರೋಪಿಸಿ ಮಹಾರಾಷ್ಟ್ರ ಸಿಎಂ ಪುತ್ರ, ಸಚಿವ ಆದಿತ್ಯ ಠಾಕ್ರೆ ಹೆಸರು ಎಳೆದು ತರಲಾಯಿತು.

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಮೌನ ಮುರಿದ ಆದಿತ್ಯ ಠಾಕ್ರೆ

  ಇದೀಗ ಮತ್ತಿಬ್ಬರು ಪ್ರಮುಖ ನಟರ ಹೆಸರನ್ನು ಪ್ರಕರಣಕ್ಕೆ ಎಳೆದು ತರಲಾಗಿದೆ. ಬಿಜೆಪಿ ಮಾಜಿ ಸಿಎಂ ಒಬ್ಬರು, ನಟ ಸೂರಜ್ ಪಂಚೋಲಿ ಮತ್ತು ಡಿನೋ ಮರಿಯೋ ಅವರನ್ನು ವಿಚಾರಣೆ ಮಾಡಲೇ ಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ ಅವರು.

  ಮಹಾರಾಷ್ಟ್ರ ಮಾಜಿ ಸಿಎಂ ಆಗ್ರಹ

  ಮಹಾರಾಷ್ಟ್ರ ಮಾಜಿ ಸಿಎಂ ಆಗ್ರಹ

  ಮಹಾರಾಷ್ಟ್ರಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜೆಪಿಯ ಪ್ರಮುಖ ನಾಯಕರಾಗಿರುವ ನಾರಾಯಣ ರಾಣೆ, ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ್ದು, ನಟ ಸೂರಜ್ ಪಂಚೋಲಿ ಮತ್ತು ಡಿನೋ ಮರಿಯೋ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

  ಸೂರಜ್ ಪಂಚೋಲಿ ಮನೆಯಲ್ಲಿ ಪಾರ್ಟಿ ನಡೆದಿತ್ತು

  ಸೂರಜ್ ಪಂಚೋಲಿ ಮನೆಯಲ್ಲಿ ಪಾರ್ಟಿ ನಡೆದಿತ್ತು

  ಸುಶಾಂತ್ ಸಿಂಗ್ ಸಾವನ್ನಪ್ಪಿದ ದಿನ ಸೂರಜ್ ಪಂಚೋಲಿ ಮನೆಯಲ್ಲಿ ದೊಡ್ಡ ಪಾರ್ಟಿ ನಡೆದಿತ್ತು. ದೊಡ್ಡ-ದೊಡ್ಡ ಬಾಲಿವುಡ್ ನಟರು ಪಾರ್ಟಿಗೆ ಬಂದಿದ್ದರು. ಅವರನ್ನೂ ಸಹ ವಿಚಾರಣೆಗೆ ಒಳಪಡಿಸಬೇಕು ಎಂದು ನಾರಾಯಣ ರಾಣೆ ಹೇಳಿದ್ದಾರೆ.

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು ಎಂದಿದ್ದ ವೈದ್ಯೆಯೇ ನಾಪತ್ತೆ!

  'ಆತ್ಮಹತ್ಯೆ ದಿನ ಕೆಲ ಸಚಿವರು ಸುಶಾಂತ್ ಮನೆಗೆ ಹೋಗಿದ್ದರು'

  'ಆತ್ಮಹತ್ಯೆ ದಿನ ಕೆಲ ಸಚಿವರು ಸುಶಾಂತ್ ಮನೆಗೆ ಹೋಗಿದ್ದರು'

  ಪಾರ್ಟಿ ನಡೆದ ದಿನ ರಾತ್ರಿ ಹಲವು ಸಚಿವರು ಸುಶಾಂತ್ ಸಿಂಗ್ ನಿವಾಸದ ಬಳಿಯೇ ಇರುವ ದಿನೋ ಮರಿಯೋ ನಿವಾಸಕ್ಕೆ ಭೇಟಿ ನೀಡಿದ್ದರು. ಕೆಲ ಸಮಯದ ನಂತರ ಅವರಲ್ಲಿ ಕೆಲವರು ಸುಶಾಂತ್ ನಿವಾಸಕ್ಕೆ ತೆರಳಿದ್ದರು, ಇದಕ್ಕೆ ಏನು ಕಾರಣ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

  ಕೆಲವರನ್ನು ರಕ್ಷಿಸುವ ಯತ್ನ ನಡೆಸಲಾಗುತ್ತಿದೆ

  ಕೆಲವರನ್ನು ರಕ್ಷಿಸುವ ಯತ್ನ ನಡೆಸಲಾಗುತ್ತಿದೆ

  ಮುಂಬೈ ಪೋಲೀಸರು ಕೆಲವು ವಿಷಯಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ನೇರವಾಗಿ ಸಂಬಂಧಿಸಿದ ಕೆಲವರನ್ನು ಬಚಾವ್ ಮಾಡಲು ಮುಂಬೈ ಪೊಲೀಸರು ಯತ್ನಿಸುತ್ತಿದ್ದಾರೆ, ಪ್ರಕರಣದ ಪ್ರಮುಖ ಆರೋಪಿ ಆಗಿರುವ ರಿಯಾಳನ್ನು ಏಕೆ ಪೊಲೀಸರು ಬಂಧಿಸಿಲ್ಲ, ಆಕೆ ಎಲ್ಲಿದ್ದಾಳೆಂದೂ ಸಹ ಯಾರಿಗೂ ಗೊತ್ತಿಲ್ಲ ಎಂದು ನಾರಾಯಣ ರಾಣೆ ಹೇಳಿದ್ದಾರೆ.

  ದಿಶಾ ಸಾಲಿಯಾನ್ ಅನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ

  ದಿಶಾ ಸಾಲಿಯಾನ್ ಅನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ

  ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಬಗ್ಗೆಯೂ ಮಾತನಾಡಿದ ನಾರಾಯಣ ರಾಣೆ, ಆ ಪ್ರಕರಣಕ್ಕೂ ಸುಶಾಂತ್ ಆತ್ಮಹತ್ಯೆಗೂ ಖಂಡಿತ ಸಂಬಂಧವಿದೆ. ದಿಶಾ ಸಾಲಿಯಾನ್ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

  ಸುಶಾಂತ್ ಪ್ರಕರಣ ಸಿಬಿಐಗೆ ಒಪ್ಪಿಸಲು ನಿತೀಶ್ ಕುಮಾರ್ ಶಿಫಾರಸು: 10 ಪ್ರಮುಖ ಅಂಶಗಳು

  English summary
  Bihar former CM Narayan Rane took Suraj Pancholi and Dino Morea names in connection with Sushant Singh's death case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X