ವರ್ಷದಿಂದ ಬಾಡಿಗೆ ಕಟ್ಟದ ನಟಿಯನ್ನ ಮನೆಯಿಂದ ಹೊರ ಹಾಕಿದ ಮಾಲೀಕ
Recommended Video

ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಎಂದರೆ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಐಷಾರಾಮಿ ಜೀವನ ನಡೆಸುತ್ತಾರೆ ಎಂದು ಜನರು ತಿಳಿದುಕೊಂಡಿರುತ್ತಾರೆ. ಆದರೆ ಕೆಲ ಸ್ಟಾರ್ ಗಳು ಚಿತ್ರರಂಗದಲ್ಲೇ ಇದ್ದರೂ ಜೀವನ ಸಾಗಿಸಲು ಹರಸಾಹಸ ಪಡುತ್ತಿರುತ್ತಾರೆ.
ಒಂದು ಕಾಲದಲ್ಲಿ ತೆರೆ ಮೇಲೆ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಸಮೂಹವನ್ನ ಪಡೆದುಕೊಂಡಿದ್ದ ನಟಿ ಇಂದು ಬಾಡಿಗೆ ಕಟ್ಟಲಾರದೆ ಪರದಾಡುತ್ತಿದ್ದಾರಂತೆ. ಕಳೆದ ಒಂದು ವರ್ಷದಿಂದ ಈ ಖ್ಯಾತ ನಟಿ ವಾಸವಿದ್ದ ಅಪಾರ್ಟ್ ಮೆಂಟ್ ನ ಬಾಡಿಗೆ ಕಟ್ಟಿಲ್ಲವಂತೆ.
ಬಾಡಿಗೆ ಪಡೆಯಲಾರದೆ ಅಪಾರ್ಟ್ ಮೆಂಟ್ ನ ಮಾಲೀಕರು ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಂಡಿದ್ದಾರೆ. ನಟಿಗೆ ಮನೆ ಖಾಲಿ ಮಾಡುವುದರ ಜೊತೆಗೆ ಬಾಕಿ ಉಳಿಸಿಕೊಂಡಿರುವ ಹಣವನ್ನೂ ಪಾವತಿ ಮಾಡಬೇಕಾಗಿ ಕೋರ್ಟ್ ತಾಕೀತು ಮಾಡಿದೆ. ಹಾಗಾದ್ರೆ ಯಾರು ಆ ನಟಿ? ನಟಿಗೆ ಇಂತಹ ಸಮಸ್ಯೆ ಎದುರಾಗಲು ಕಾರಣವೇನು ? ಮುಂದೆ ಓದಿ

ಮನೆ ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್
ಬಿ ಟೌನ್ ನ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ ತಾನು ವಾಸವಿರುವ ಮನೆಯ ಬಾಡಿಗೆ ಕಟ್ಟದೆ ಪರದಾಡುತ್ತಿದ್ದಾರಂತೆ. ಒಂದು ವರ್ಷದ ಬಾಡಿಗೆ ಪಾವತಿ ಮಾಡದ ಕಾರಣ ಮನೆಯಿಂದ ಅವರನ್ನ ಹೊರ ಹಾಕಲಾಗಿದೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.

59.87 ಲಕ್ಷ ಬಾಡಿಗೆ ಉಳಿಸಿಕೊಂಡಿರುವ ನಟಿ
ಮೂಲಗಳ ಪ್ರಕಾರ ಮಲ್ಲಿಕಾ ಶೆರಾವತ್ ಪ್ಯಾರಿಸ್ ನಲ್ಲಿ ವಾಸವಾಗಿರುವ ಅಪಾರ್ಟ್ ಮೆಂಟ್ ಗೆ 59.87 ಲಕ್ಷ ಹಣವನ್ನ ಕಟ್ಟಬೇಕಾಗಿದೆಯಂತೆ. ಒಂದು ವರ್ಷದಿಂದ ಹಣ ಪಾವತಿಸದೆ ಸತಾಯಿಸಿರುವುದರಿಂದ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಸುದ್ದಿ ಸುಳ್ಳು ಎಂದ ಮಲ್ಲಿಕಾ ಶೆರಾವತ್
ಬಾಡಿಗೆ ಕಟ್ಟದ ನಟಿಯನ್ನ ಮನೆಯಿಂದ ಹೊರ ಕಳುಹಿಸಲಾಗಿದೆ ಎನ್ನುವ ಸುದ್ದಿಯ ಬಗ್ಗೆ ಮಾತನಾಡಿರುವ ನಟಿ ಮಲ್ಲಿಕಾ ಈ ಸುದ್ದಿ ಸುಳ್ಳು ಎಂದಿದ್ದಾರೆ. ಅಷ್ಟೇ ಅಲ್ಲದೆ ನನಗೆ ಬಾಡಿಗೆ ಮನೆ ಇಲ್ಲ. ನಾನು ಸ್ವಂತ ಮನೆಯಲ್ಲೇ ವಾಸವಿದ್ದೇನೆ ಎಂದು ತಿಳಿಸಿದ್ದಾರೆ.

ಅವಕಾಶಗಳಿಲ್ಲದ ನಟಿ
ಈ ಸುದ್ದಿ ಹೊರಬೀಳುತ್ತಿದ್ದಂತೆ ನಟಿ ಮಲ್ಲಿಕಾ ಶೆರಾವತ್ ಹಣದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ ಎಂದು ಬಿ ಟೌನ್ ಮಂದಿ ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮಲ್ಲಿಕಾ ಕೈ ನಲ್ಲಿ ಈಗ ಹೇಳಿಕೊಳ್ಳಲು ಯಾವುದೇ ಸಿನಿಮಾಗಳ ಆಫರ್ ಇಲ್ಲ.


Click it and Unblock the Notifications











