Just In
Don't Miss!
- News
ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬೇಡಿಕೆ ಹೆಚ್ಚಿದಂತೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
- Finance
ತನ್ನ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳ ನವೀಕರಣವನ್ನು ಮುಂದೂಡಿದ ವಾಟ್ಸಾಪ್
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Lifestyle
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡ್ರಗ್ಸ್ ಪ್ರಕರಣ: ರಿಯಾ ಸಹೋದರನ ವಿರುದ್ಧ ಪ್ರಕರಣ ಸೂಕ್ತವಲ್ಲ ಎಂದ ನ್ಯಾಯಾಲಯ
ಡ್ರಗ್ಸ್ ಪ್ರಕರಣದಲ್ಲಿ ಕೆಲವು ದಿನಗಳ ಹಿಂದಷ್ಟೆ ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿಗೆ ನ್ಯಾಯಾಲಯವು ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆಯು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಮುಂದುವರೆದಿದ್ದು, ಎನ್‌ಸಿಬಿಯು ಶೋವಿಕ್ ಮೇಲೆ ಹೇರಿರುವ ಪ್ರಕರಣದ ಸರಿಯಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
ಡ್ರಗ್ಸ್ ಜಾಲದಲ್ಲಿ ಹಣ ತೊಡಗಿಸಿ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಶೋವಿಕ್ ಮೇಲೆ ಹೊರಿಸಿತ್ತು ಎನ್‌ಸಿಬಿ. ಈ ಪ್ರಕರಣ ದಾಖಲಿಸಿದ್ದರಿಂದಲೇ ಶೋವಿಕ್‌ಗೆ ಜಾಮೀನು ದೊರಕುವುದು ಮೂರು ತಿಂಗಳಾಗಿತ್ತು. ಒಂದು ವೇಳೆ ಈ ಆರೋಪ ಸಾಬೀತಾದರೆ 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಆದರೆ ಇದೆಲ್ಲದರಿಂದ ನ್ಯಾಯಾಲಯವು ಶೋವಿಕ್‌ಗೆ ನೆಮ್ಮದಿ ನೀಡಿದೆ. 'ಶೋವಿಕ್, ಡ್ರಗ್ಸ್ ಜಾಲದಲ್ಲಿ ಬಂಡವಾಳ ಹೂಡಿದ್ದಾರೆ, ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ' ಎಂದು ಹೇಳಿದೆ.
ನ್ಯಾಯಾಧೀಶ, ಜಿಬಿ ಗುರುರಾವ್ ಹೇಳಿರುವಂತೆ, 'ಆರೋಪಿಯು ತಪ್ಪಿತಸ್ತನಲ್ಲ ಎಂದು ಹೇಳಲು ನ್ಯಾಯಾಲಯದ ಮುಂದೆ ಹಲವು ಅವಕಾಶಗಳು ಇವೆ' ಎಂದಿದ್ದಾರೆ. ಶೋವಿಕ್ ಮೇಲೆ ದೊಡ್ಡ ಆರೋಪವನ್ನು ಹೊರಿಸಲಾಗಿದೆ ಎಂದು ಸಹ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ನಡುವೆ ಬಾಲಿವುಡ್ ಡ್ರಗ್ಸ್ ಪ್ರಕರಣ ಹೊರಬಿದ್ದಿತ್ತು, ಅದರ ತನಿಖೆ ನಡೆಸಿದ ಎನ್‌ಸಿಬಿಯು ಮೊದಲಿಗೆ ಸುಶಾಂತ್‌ನ ವ್ಯವಸ್ಥಾಪಕ ಹಾಗೂ ಮನೆಗೆಲಸದ ಸಿಬ್ಬಂದಿಯ ಮೇಲ್ವಿಚಾರಕನ್ನು ಬಂಧಿಸಿತು. ನಂತರ ಸುಶಾಂತ್ ಪ್ರೇಯಸಿಯ ಸಹೋದರನಾದ ಶೋವಿಕ್‌ನನ್ನು ಬಂಧಿಸಲಾಯಿತು. ನಂತರ ರಿಯಾ ಚಕ್ರವರ್ತಿಯನ್ನು ಸಹ ಬಂಧಿಸಲಾಯಿತು.
ಸತತ ಮೂರು ತಿಂಗಳ ನಂತರ ಕಳೆದ ವಾರವಷ್ಟೆ ಶೋವಿಕ್ ಚಕ್ರವರ್ತಿಗೆ ಜಾಮೀನು ದೊರೆತಿದೆ. ರಿಯಾ ಚಕ್ರವರ್ತಿ ಒಂದು ತಿಂಗಳು ಜೈಲಿನಲ್ಲಿದ್ದ ಬಳಿಕ ಆಕೆಗೂ ಜಾಮೀನು ದೊರೆಯಿತು.