»   » ಮೊದಲ ದಿನವೇ ಬಾಕ್ಸ್ ಆಫೀಸಲ್ಲಿ ಗರ್ಜಿಸಿದ 'ಗಬ್ಬರ್'

ಮೊದಲ ದಿನವೇ ಬಾಕ್ಸ್ ಆಫೀಸಲ್ಲಿ ಗರ್ಜಿಸಿದ 'ಗಬ್ಬರ್'

Posted By:
Subscribe to Filmibeat Kannada

ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಚಿತ್ರ 'ಬೇಬಿ' ಬಳಿಕ ಅಕ್ಷಯ್ ಕುಮಾರ್ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ 'ಗಬ್ಬರ್ ಈಸ್ ಬ್ಯಾಕ್'. ಈ ಚಿತ್ರವೂ ಪಕ್ಕಾ ಆಕ್ಷನ್ ಮಯವಾಗಿದ್ದು ಮೊದಲ ದಿನವೇ ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದೆ.

ತಮಿಳು ಮೂಲದ 'ರಮಣಾ' ಚಿತ್ರದ ರೀಮೇಕ್ ಆಗಿರುವ 'ಗಬ್ಬರ್ ಈಸ್ ಬ್ಯಾಕ್' ಚಿತ್ರದ ಬಗ್ಗೆ ವಿಮರ್ಶಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೂಲ ಚಿತ್ರಕ್ಕೆ ಅಕ್ಷಯ್ ನ್ಯಾಯ ಸಲ್ಲಿಸಿದ್ದಾರೆ ಎಂದರೆ, ಇನ್ನೂ ಕೆಲವರು ಪರ್ವಾಗಿಲ್ಲ ಎಂದಿದ್ದಾರೆ.

Akshay Kumar

ಎ.ಆರ್. ಮುರುಗದಾಸ್ ಆಕ್ಷನ್ ಕಟ್ ಹೇಳಿದ್ದ 'ರಮಣಾ' (2002) ಚಿತ್ರ ತೆರೆಕಂಡು ಬಹಳ ವರ್ಷಗಳೇ ಕಳೆದುಹೋಗಿವೆ. ಇದೇ ಚಿತ್ರ ತೆಲುಗಿನಲ್ಲಿ 'ಠಾಗೂರ್' (2003) ಎಂದು ರೀಮೇಕ್ ಆಗಿತ್ತು. ಕನ್ನಡದಲ್ಲಿ 'ವಿಷ್ಣುಸೇನಾ' (2005) ಆಗಿ ಡಾ.ವಿಷ್ಣುವರ್ಧನ್ ಅಭಿಮಾನಿಗಳನ್ನು ರಂಜಿಸಿತ್ತು.

ದಕ್ಷಿಣ ಭಾರತದಲ್ಲಿ ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಹಿಟ್ ಚಿತ್ರವಾಗಿ ಹೊರಹೊಮ್ಮಿದ ಈ ಚಿತ್ರ ಇದೀಗ 'ಗಬ್ಬರ್ ಈಸ್ ಬ್ಯಾಕ್' ಆಗಿ ಹಿಂದಿ ಚಿತ್ರರಸಿಕರನ್ನು ರಂಜಿಸುತ್ತಿದೆ. ಮೇ.1ರಂದು ತೆರೆಕಂಡಿರುವ ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೊದಲ ದಿನವೇ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಶೇ.75ರಷ್ಟು ಚಿತ್ರಮಂದಿರಗಳು ಭರ್ತಿಯಾದ ಸುದ್ದಿ ಬಂದಿದೆ. ಸರಿಸುಮಾರು ರು.25 ಕೋಟಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. ಗಲ್ಲಾಪೆಟ್ಟಿಗೆ ಗಳಿಕೆ ಹೀಗೆ ಮುಂದುವರಿದರೆ ಸುನಾಯಾಸವಾಗಿ ರು.100 ಕೋಟಿ ಕ್ಲಬ್ ಸೇರುತ್ತದೆ 'ಗಬ್ಬರ್' ಚಿತ್ರ.

ಮೊದಲ ದಿನ ಈ ಪಾಟಿ ಪ್ರತಿಕ್ರಿಯೆ ಶಾರುಖ್, ಸಲ್ಮಾನ್ ಖಾನ್ ಚಿತ್ರಗಳಿಗೂ ಸಿಕ್ಕಿಲ್ಲ ಎನ್ನುತ್ತದೆ ಬಾಲಿವುಡ್ ವಾಣಿಜ್ಯ ವಲಯ. ಕ್ರಿಷ್ ನಿರ್ದೇಶನದ ಈ ಚಿತ್ರವನ್ನು ಸಂಜಯ್ ಲೀಲಾ ಭನ್ಸಾಲಿ ಹಾಗೂ ವಯಕಾಮ್ 18 ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿವೆ. ಅಕ್ಕಿಗೆ ಶ್ರುತಿ ಹಾಸನ್ ಜೋಡಿಯಾಗಿದ್ದಾರೆ. (ಏಜೆನ್ಸೀಸ್)

English summary
Gabbar Is Back starring Akshay Kumar turned out to be the biggest opener of 2015, thereby giving some hope to the Indian Box Office of finally making some money, after some disastrous movie releases this year. The movie is predicted to have made at least Rs 25 crores as it's opening day collection.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada