»   » ಪ್ರಿಯಾಂಕಾ-ಪ್ರಕಾಶ್ ಗಂಗಾಜಲ 2 ಲುಕ್ ನೋಡಿ

ಪ್ರಿಯಾಂಕಾ-ಪ್ರಕಾಶ್ ಗಂಗಾಜಲ 2 ಲುಕ್ ನೋಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಾಜಕೀಯ, ಪೊಲೀಸ್ ಇಲಾಖೆಯ ಭ್ರಷ್ಟಾಚಾರಗಳನ್ನು ತೆರೆಗೆ ಬರುವ ಜಾಣ್ಮೆ ಹೊಂದಿರುವ ಪ್ರಕಾಶ್ ಝಾ ಅವರ ಚಿತ್ರಗಳು ನಿಜ ಜೀವನದ ಪಾತ್ರಗಳು ನೈಜ ಘಟನೆಗಳನ್ನು ಆಧರಿಸಿ ಚಿತ್ರೀಕರಿಸಲಾಗಿರುತ್ತದೆ.

ಅಜಯ್ ದೇವಗನ್ ಅಭಿನಯದಲ್ಲಿ ಬಂದಿದ್ದ 'ಗಂಗಾಜಲ್' ಚಿತ್ರದ ಎರಡನೇ ಭಾಗ ತೆರೆಗೆ ಬರಲು ಸಿದ್ದವಾಗುತ್ತಿದೆ. ಭಾಗ 2 ರಲ್ಲಿ ಪ್ರಿಯಾಂಕಾ ಛೋಪ್ರಾ 'ಕಾಪ್' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Revealed: Priyanka Chopra's Look As IPS Officer In Gangaajal

ವಿಭಿನ್ನ, ವಿಶಿಷ್ಟ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುವುದಾಗಿ ಅಘೋಷಿತ ಪ್ರತಿಜ್ಞೆ ಕೈಗೊಂಡಿರುವ 'ಪಿಗ್ಗಿ' ಪ್ರಿಯಾಂಕಾ ಈಗ ಪ್ರಕಾಶ್ ಝಾ ಜೊತೆಗೂಡಿ ಪೊಲೀಸ್ ಇಲಾಖೆಯ ಕಥೆಯಲ್ಲಿ ಮುಳುಗಿದ್ದಾರೆ. ಮೇರಿ ಕೋಮ್ ಜೀವನ ಆಧಾರಿಸಿದ ಚಿತ್ರದಲ್ಲಿ ಬಾಕ್ಸರ್ ಆಗಿ ಸಕತ್ ಪಂಚ್ ನೀಡಿದ್ದ ಪ್ರಿಯಾಂಕಾ ಈಗ ಖಡಕ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಪ್ರಕಾಶ್ ಝಾ ಬರೆದ ರಾಜನೀತಿ 2 ಪೋಸ್ಟರ್]

ಗಂಗಾಜಲ್ 2 ಚಿತ್ರದಲ್ಲಿ ಪ್ರಿಯಾಂಕಾ ಅವರ ಲುಕ್ ರಿಲೀಸ್ ಮಾಡಲಾಗಿದೆ. ಅಭಾ ಮಾಥೂರ್ ಎಂಬ ಪಾತ್ರಧಾರಿಯಾಗಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದು, ಅಜಯ್ ದೇವಗನ್ ಪಾತ್ರಕ್ಕಿಂತ ಹೆಚ್ಚಿನ ತೂಕದ ಕ್ಯಾರೆಕ್ಟರ್ ಇದಾಗಿದೆ ಎಂಬ ಸುದ್ದಿ ಬಂದಿದೆ.

ಪೊಲೀಸ್ ಪಾತ್ರವಲ್ಲದೆ ಪ್ರಿಯಾಂಕಾ ಅವರ ದಿಲ್ ಧಡಕ್ನೆ ದೋ, ಬಾಜಿರಾವ್ ಮಸ್ತಾನಿ ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ.ದಿಲ್ ಧಡಕ್ನೆ ಚಿತ್ರದಲ್ಲಿ ಆಧುನಿಕ ಮಹಿಳೆಯಾಗಿ ಕಾಣಿಸಿಕೊಳ್ಳಲಿರುವ ಪಿಗ್ಗಿ, ಬಾಜಿರಾವ್ ಚಿತ್ರದಲ್ಲಿ ಕಾಶಿಭಾಯಿಯಾಗಿ ಸಿನಿರಸಿಕರನ್ನು ರಂಜಿಸಲಿದ್ದಾರೆ.

English summary
Priyanka Chopra is one such Bollywood actress who has been impressing us with varied roles and looks like PeeCee is all set to do it again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada