For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಅನ್ನು ಹಾಡಿಹೊಗಳಿದ ನಟಿ ಜೆನಿಲಿಯಾ ಡಿಸೋಜಾ

  |

  ಬಾಲಿವುಡ್ ನ ಮುದ್ದಾದ ಜೋಡಿ ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್ ಅವರನ್ನು ನಟ ಸುದೀಪ್ ಭೇಟಿಯಾಗಿದ್ದಾರೆ.

  ಸುದೀಪ್ ಹಾಗೂ ರಿತೇಶ್ ದೇಶ್‌ಮುಖ್ ಬಹಳ ಹಳೆಯ ಮತ್ತು ಆತ್ಮೀಯ ಗೆಳೆಯರು ಜೆನಿಲಿಯಾ ಡಿಸೋಜಾ ಸಹ ಸುದೀಪ್ ಗೆ ಆತ್ಮಿಯರು. ಈ ಮೂವರು ಹಳೆಯ ಗೆಳೆಯರು ನಿನ್ನೆ ಭೇಟಿ ಆಗಿದ್ದಾರೆ.

  ಮೂವರು ಒಟ್ಟಿಗಿರುವ ಚಿತ್ರಗಳನ್ನು ಹಂಚಿಕೊಂಡಿರುವ ಜೆನಿಲಿಯಾ ಡಿಸೋಜಾ, 'ಸುದೀಪ್ ಅಂಥಹಾ ಅದ್ಭುತ ವ್ಯಕ್ತಿಯೊಂದಿಗೆ ಅದ್ಭುತವಾಗಿ ಸಮಯ ಕಳೆದೆವು. ಒಳ್ಳೆಯ ಸಂಭಾಷಣೆ, ಒಳ್ಳೆಯ ಸಂಜೆಗೆ ಧನ್ಯವಾದ, ನಾನೂ ಹಾಗೂ ರಿತೇಶ್ ದೇಶ್‌ಮುಖ್ ನಿಮ್ಮ ಜೊತೆ ಕಳೆದ ಸಮಸಯವನ್ನು ಬಹುವಾಗಿ ಇಷ್ಟಪಟ್ಟೆವು' ಎಂದಿದ್ದಾರೆ.

  'ಪ್ರಿಯಾ ಸುದೀಪ್ ಹಾಗೂ ಸಾನ್ವಿಯನ್ನು ಮಿಸ್ ಮಾಡಿಕೊಂಡೆವು. ಆದರೆ ಈ ಸಂಜೆ, ಮುಂಬರುವ ಇನ್ನೂ ಹಲವಾರು ಇಂಥಹಾ ಸಂಜೆಗಳಿಗೆ ಪ್ರಾರಂಭವಾಗಿದೆ. ನಿಮ್ಮ ದಿನನಿತ್ಯದ ಆಹಾರ ಅಭ್ಯಾಸವನ್ನು ಬಿಟ್ಟು ನಮಗಾಗಿ ಪೂರ್ಣ ಸಸ್ಯಹಾರ ಊಟ ಅರೇಂಜ್ ಮಾಡಿದ್ದಕ್ಕೆ ಧನ್ಯವಾದ' ಎಂದಿದ್ದಾರೆ ಜೆನಿಲಿಯಾ ಡಿಸೋಜಾ.

  ರಿತೇಶ್ ದೇಶ್‌ಮುಖ್ ಹಾಗೂ ಸುದೀಪ್ ಬಹಳ ಸಮಯದಿಂದಲೂ ಆತ್ಮೀಯ ಗೆಳೆಯರು. ಇಬ್ಬರೂ ಒಟ್ಟಿಗೆ ಹಿಂದಿಯ 'ರಣ್' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸಿದ್ದರು. ಈ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು.

  ಹೊಸ ನಿಯಮ ಅನುಸರಿಸಲಿಲ್ಲ ಅಂದ್ರೆ ತುಂಬಾ ಕಷ್ಟ | Filmibeat Kannada

  ನಟ ಸುದೀಪ್ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದು, ರಿತೇಶ್ ದೇಶ್‌ಮುಖ್ ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ, ಅಮಿತಾಬ್ ಬಚ್ಚನ್ ಇನ್ನೂ ಹಲವಾರು ಮಂದಿ ಬಾಲಿವುಡ್ ಸ್ಟಾರ್‌ಗಳೊಂದಿಗೆ ಗೆಳೆತನ ಹೊಂದಿದ್ದಾರೆ.

  English summary
  Actress Genelia D'Souza praised actor Sudeep and post pictures together on Social media. Ritesh Deshmukh also present.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X