»   » ಸೋನಿಯಾ ಗಾಂಧಿ ಪಾತ್ರಕ್ಕಾಗಿ ಜರ್ಮನಿಯಿಂದ ಬಂದ ನಟಿ.!

ಸೋನಿಯಾ ಗಾಂಧಿ ಪಾತ್ರಕ್ಕಾಗಿ ಜರ್ಮನಿಯಿಂದ ಬಂದ ನಟಿ.!

Posted By:
Subscribe to Filmibeat Kannada

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ಹೊಸ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರದ ಹೊಸ ಪೋಸ್ಟರ್ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚಿತ್ರಕ್ಕೆ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಎಂದು ಹೆಸರಿಟ್ಟಿದ್ದು, ದೇಶದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ನಟಿಸುತ್ತಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಅವರ ಪಾತ್ರಗಳು ಬರಲಿವೆ. ಹೀಗಾಗಿ, ಇವರ ಪಾತ್ರಗಳಲ್ಲಿ ಯಾರು ನಟಿಸಬಹುದು ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಇದೀಗ, ಸೋನಿಯಾ ಗಾಂಧಿ ಪಾತ್ರಕ್ಕೆ ನಾಯಕಿ ಆಯ್ಕೆಯಾಗಿದ್ದು, ಮೊದಲ ನೋಟದಲ್ಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈ ಚಿತ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಬಾಲಿವುಡ್‌ ನಟ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಸೋನಿಯಾ ಗಾಂಧಿ ಪಾತ್ರಕ್ಕೆ ಜರ್ಮನ್ ಮೂಲದ ನಟಿಯನ್ನು ಕರೆತರಲಾಗಿದ್ದು, ನಟಿ ಸುಝೇನ್ ಬರ್ನೆಟ್, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರ ನಿಭಾಯಿಸಲಿದ್ದಾರೆ.

German actor Suzanne Bernert to play Sonia Gandhi

ಈಗಾಗಲೇ ಸೋನಿಯಾ ಗಾಂಧಿ ಪಾತ್ರದ ಫಸ್ಟ್ ಲುಕಗ್ ಬಹಿರಂಗವಾಗಿದ್ದು, ಸೇಮ್ ಟು ಸೇಮ್ ಸೋನಿಯಾ ಗಾಂಧಿಯನ್ನೇ ನೋಡಿದ ಅನುಭವವಾಗುತ್ತಿದೆ. ನಿನ್ನೆಯಿಂದ ಚಿತ್ರೀಕರಣ ಆರಂಭವಾಗಿದ್ದು, ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವತಾರದಲ್ಲಿರುವ ಈ ನಟ ಯಾರು.?

ನಟಿ ಸುಝೇನ್ ಬರ್ನೆಟ್ ಅವರಿಗೆ ಇದು ಮೊದಲ ಭಾರತೀಯ ಚಿತ್ರವಲ್ಲ. ಈಗಾಗಲೇ ಸಾಕಷ್ಟು ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಮರಾಠಿ, ಹಿಂದಿ ಹಾಗೂ ಬಂಗಾಳಿ ಭಾಷೆಗಳನ್ನು ಸರಾಗವಾಗಿ ಇವರು ಮಾತನಾಡಬಲ್ಲರು.

12ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆಯುತ್ತಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುಂಚೆ ಈ ಚಿತ್ರವನ್ನ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗಿದೆ.

English summary
German actor Suzanne Bernert to play former Congress chief Sonia Gandhi in Anupam Kher starrer 'The Accidental Prime Minister' movie, Based on Sanjay Baru's book of the same name.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X