Just In
Don't Miss!
- News
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಬ್ಬಾ.!ಈ ವರ್ಷದ ಕೆಟ್ಟ ಸಿನಿಮಾ, ಕೆಟ್ಟ ನಟ-ನಟಿ ಇವರೇ ಸ್ವಾಮಿ
ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ ಅನ್ನೋ ವಗೈರ, ವಗೈರ ಪ್ರಶಸ್ತಿಗಳನ್ನು ಎಲ್ಲಾ ಚಿತ್ರರಂಗ ಕ್ಷೇತ್ರದಲ್ಲಿ ನಟ-ನಟಿಯರಿಗೆ ಹಾಗೂ ನಿರ್ದೇಶಕರಿಗೆ ಕೊಡೋದು ಸರ್ವೇ ಸಾಮಾನ್ಯ.
ಆದರೆ ವರ್ಷದ ಅತ್ಯಂತ ಕೆಟ್ಟ ಚಿತ್ರ, ಕೆಟ್ಟ ನಟಿ, ಕೆಟ್ಟ ನಟ ಕೆಟ್ಟ ನಿರ್ದೇಶಕ ಮುಂತಾದ ಪ್ರಶಸ್ತಿಗಳನ್ನು ಪ್ರದಾನ ಮಾಡೋದನ್ನ ನೀವು ನೋಡಿದ್ದೀರಾ? ಕೇಳಿದ್ದೀರಾ?, ಇಲ್ವಾ?, ಹಾಗಿದ್ರೆ ಇಲ್ಲಿ ಕೇಳಿ.[ಬಾಲಿವುಡ್ 2014: ವರ್ಷದ ಕೆಟ್ಟ ನಟ, ನಟಿ ಪ್ರಶಸ್ತಿ ಪ್ರಕಟ]
ಬಾಲಿವುಡ್ ಚಿತ್ರರಂಗ ಕ್ಷೇತ್ರದಲ್ಲಿ 'ಗೋಲ್ಡನ್ ಕೇಲ ಅವಾರ್ಡ್ಸ್' ಅಂತ ಪ್ರತೀ ವರ್ಷ ಕೊಡುತ್ತಾರೆ. ಇದರಲ್ಲಿ ವರ್ಷದ ಕೆಟ್ಟ ಚಿತ್ರ, ಕೆಟ್ಟ ನಿರ್ದೇಶಕ, ಕೆಟ್ಟ ನಟ-ನಟಿ ಅಂತ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದೀಗ 2015ನೇ ಸಾಲಿನ '8ನೇ ಗೋಲ್ಡನ್ ಕೇಲ ಅವಾರ್ಡ್ಸ್' ಪ್ರಕಟಗೊಂಡಿದೆ.['TOIFA Award 2016': ಪ್ರಶಸ್ತಿ ವಿಜೇತರ ಕಂಪ್ಲೀಟ್ ಲಿಸ್ಟ್]
ಈ ಬಾರಿ ಯಾವ ಚಿತ್ರಕ್ಕೆ 'ಕೆಟ್ಟ ಚಿತ್ರ' ಪ್ರಶಸ್ತಿ ಲಭಿಸಿದೆ, ಯಾವ ನಟನಿಗೆ 'ಕೆಟ್ಟ ನಟ' ಅನ್ನೋ ಪ್ರಶಸ್ತಿ ಬಂದಿದೆ. ಹಾಗೂ ಯಾವ ನಟಿಗೆ ಕೆಟ್ಟ ನಟಿ ಪಟ್ಟ ಸಿಕ್ಕಿದೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಅತ್ಯಂತ ಕೆಟ್ಟ ಚಿತ್ರ
2015ರ, 8ನೇ ಗೋಲ್ಡನ್ ಕೇಲ ಪ್ರಶಸ್ತಿ ಸಮಾರಂಭದಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ಕಾಜೋಲ್ ಅವರ 'ದಿಲ್ವಾಲೆ' ಚಿತ್ರ ಈ ವರ್ಷದ ಅತ್ಯಂತ ಕೆಟ್ಟ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಆಕ್ಷನ್-ಕಟ್ ಹೇಳಿದ್ದ ಈ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್ ಸೇರಿದಂತೆ ವರುಣ್ ಧವನ್ ಮತ್ತು ಕೃತಿ ಸನೋನ್ ಕೂಡ ನಟಿಸಿದ್ದರು.[ಐಐಎಫ್ಎ ಪ್ರಶಸ್ತಿ: 'ಕ್ವೀನ್' ಕಂಗನಾ, 'ಹೈದರ್' ಕಪೂರ್ ಬೆಸ್ಟ್]

ಕೆಟ್ಟ ನಟಿ
ಬಿಟೌನ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದಲ್ಲಿನ ನಟನೆಗಾಗಿ ನಟಿ ಸೋನಂ ಕಪೂರ್ ಅವರಿಗೆ ಅತ್ಯಂತ ಕೆಟ್ಟ ನಟಿ ಎಂಬ ಪ್ರಶಸ್ತಿ ಲಭಿಸಿದೆ.

'ಬಾಂಬೆ ವೆಲ್ವೆಟ್'ಗೆ ನಿರಾಶೆ
ರೋಹಿತ್ ಶೆಟ್ಟಿ ನಿರ್ದೇಶನದ 'ದಿಲ್ವಾಲೆ' ಚಿತ್ರಕ್ಕೆ ಕೆಟ್ಟ ಚಿತ್ರ ಎಂಬ ಅವಾರ್ಡ್ ದೊರಕಿರುವುದರಿಂದ, 'ಬಾಂಬೆ ವೆಲ್ವೆಟ್', 'ಶಾಂದಾರ್', 'ತಿವಾರ್' ಹಾಗೂ ಅಕ್ಷಯ್ ಕುಮಾರ್ ಅವರ 'ಸಿಂಗ್ ಇಸ್ ಬ್ಲಿಂಗ್' ಚಿತ್ರಕ್ಕೆ ನಿರಾಶೆಯಾಗಿದೆ.

ಕೆಟ್ಟ ನಿರ್ದೇಶಕ
ಸಲ್ಮಾನ್ ಖಾನ್ ಹಾಗೂ ಸೋನಂ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ನಿರ್ದೇಶಕ ಸೂರಜ್ ಭಾರ್ಜತ್ಯ ಅವರಿಗೆ ಅತ್ಯಂತ ಕೆಟ್ಟ ನಿರ್ದೇಶಕ ಅನ್ನೋ ಪ್ರಶಸ್ತಿ ಜೊತೆಗೆ 'ಬಸ್ ಕೀಜಿಯೇ ಬಹುತು ಹೋಗಯಾ' (ಸಾಕು ನಿಲ್ಲಿಸಿ ಜಾಸ್ತಿ ಆಯಿತು) ಅನ್ನೋ ಅವಾರ್ಡ್ ಕೂಡ ಸಿಕ್ಕಿದೆ.

ಕೆಟ್ಟ ನಟ
ಎಲ್ಲಾ ಪ್ರಶಸ್ತಿ ಸಮಾರಂಭಗಳಲ್ಲಿ 'ಹೀರೋ' ಚಿತ್ರದ ನಾಯಕ ಸೂರಜ್ ಪಾಂಚೋಲಿ ಅತ್ಯುತ್ತಮ ನವ ನಟ ಎಂಬ ಪ್ರಶಸ್ತಿಗೆ ಭಾಜನರಾದರೆ, 'ಗೋಲ್ಡನ್ ಕೇಲ ಪ್ರಶಸ್ತಿ' ಸಮಾರಂಭದಲ್ಲಿ ಮಾತ್ರ ಅತ್ಯಂತ ಕೆಟ್ಟ ನಟ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಿರಿಕಿರಿ ಉಂಟುಮಾಡುವ ಹಾಡು
ಈ ವರ್ಷದ ಅತ್ಯಂತ ಕಿರಿಕಿರಿ ಉಂಟುಮಾಡುವ ಹಾಡು ಎಂಬ ಪ್ರಶಸ್ತಿಗೆ ಸಲ್ಮಾನ್ ಖಾನ್ ಅವರ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಟೈಟಲ್ ಟ್ರ್ಯಾಕ್ 'ಪ್ರೇಮ್ ರತನ್ ಧನ್ ಪಾಯೋ' ಹಾಡು ಸೆಲೆಕ್ಟ್ ಆಗಿದ್ದು, ಕಿರಿಕಿರಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.

ಕೆಟ್ಟ ಸಾಹಿತ್ಯ
'ದಿಲ್ಲಿವಾಲಿ ಝಾಲಿಮ್ ಗರ್ಲ್ ಫ್ರೆಂಡ್' ಚಿತ್ರದ 'ಬರ್ತ್ ಡೇ ಬಾಶ್' ಎಂಬ ಹಾಡಿನ ಸಾಹಿತ್ಯಕ್ಕೆ ಅತ್ಯಂತ ಕೆಟ್ಟ ಸಾಹಿತ್ಯ ಅನ್ನೋ ಪ್ರಶಸ್ತಿ ಲಭಿಸಿದೆ.

ಇಮ್ರಾನ್ ಖಾನ್
'ಕಟ್ಟಿ ಬಟ್ಟಿ' ಚಿತ್ರದ ಖ್ಯಾತಿಯ ನಟ ಇಮ್ರಾನ್ ಖಾನ್ ಅವರಿಗೆ 'ವೈ ಆರ್ ಯೂ ಸ್ಟಿಲ್ ಟ್ರೈಯಿಂಗ್' (ಯಾಕೆ ಇನ್ನೂ ಪ್ರಯತ್ನ ಮಾಡುತ್ತೀಯಾ) ಎಂಬ ಪ್ರಶಸ್ತಿ ಲಭಿಸಿದೆ.

ಸೋನಾಕ್ಷಿ ಸಿನ್ಹಾ
'ಆಜ್ ಮೂಡ್ ಇಷ್ಕಾಲಿಕ್ ಹೇ' ಎಂಬ ಆಲ್ಬಂ ಸಾಂಗ್ ಗೆ ನಟಿ ಸೋನಾಕ್ಷಿ ಸಿನ್ಹಾ ಅವರಿಗೆ 'ವಾಟ್ ದ ಹೆಲ್' ಪ್ರಶಸ್ತಿ ಲಭಿಸಿದರೆ, ರಣದೀಪ್ ಹೂಡಾ ಅವರಿಗೆ ಅತ್ಯಂತ ಕೆಟ್ಟ ಉಚ್ಛಾರಣೆ' ಎಂಬ ಪ್ರಶಸ್ತಿ ಲಭಿಸಿದೆ.