twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ಡಿನ ಶೋ ಮ್ಯಾನ್ ಗೆ ಗೂಗಲ್ ನಮನ

    By ಜೇಮ್ಸ್ ಮಾರ್ಟಿನ್
    |

    ಹಿಂದಿ ಚಿತ್ರರಂಗದ ಶೋಮ್ಯಾನ್ ರಾಜ್ ಕಪೂರ್ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ಸಂಸ್ಥೆ ವಿಶೇಷವಾದ ಡೂಡ್ಲ್ ಪ್ರಕಟಿಸಿ ತನ್ನ ನಮನ ಸಲ್ಲಿಸಿದೆ. ಗೂಗಲ್ ಸಂಸ್ಥೆಯ ಸರ್ಚ್ ಇಂಜಿನ್ ಪುಟದಲ್ಲಿ ಕಾಣಿಸಿಕೊಂಡಿರುವ ಈ ಡೂಡ್ಲ್ ರಾಜ್ ಕಪೂರ್ ಅವರ ಯಶಸ್ವಿ ಚಿತ್ರ ಶ್ರೀ420ನ ಎರಡು ಸೀನ್ ಸೇರಿಸಿ ವಿನ್ಯಾಸಗೊಳಿಸಲಾಗಿದೆ.

    ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ದಿವಂಗತ ರಾಜ್ ಕಪೂರ್ ಅವರು 1951ರ ಅವಾರಾ ಚಿತ್ರದ ಚಾರ್ಲಿ ಚಾಪ್ಲಿನ್ ಪೋಷಾಕು ತೊಟ್ಟ ಪಾತ್ರ ಜನಪ್ರಿಯಗೊಂಡಿತ್ತು. ಶ್ರೀ 420ರಲ್ಲಿ ರಾಜ್ ಕಪೂರ್ ನರ್ಗೀಸ್ ಜತೆ ಕೊಡೆ ಹಿಡಿದು ಸಾಗುವ ದೃಶ್ಯ ಮೇರಾ ಜೂತಾ ಹೇ ಜಪಾನಿ, ಪ್ಯಾರ್ ಹುವಾ ಇಕ್ರಾರ್ ಹುವಾ ಹಾಡಿನ ದೃಶ್ಯ ಡೂಡಲ್ ಗೆ ಸ್ಪೂರ್ತಿ ನೀಡಿದೆಯಂತೆ.

    Google doodle pays tribute to Raj Kapoor on 90th anniversary

    1924ರ ಡಿಸೆಂಬರ್ 14ರಂದು ಜನಿಸಿದ ರಾಜ್ ಕಪೂರ್ ಅವರು ಚಿತ್ರರಂಗದ ದಿಗ್ಗಜ ಪೃಥ್ವಿರಾಜ್ ಕಪೂರ್(ಕನ್ನಡದ ಸಾಕ್ಷಾತ್ಕಾರ ಚಿತ್ರದಲ್ಲಿ ನಟಿಸಿದ್ದರು) ಅವರ ಪುತ್ರ.ಹಿಂದಿ ಚಿತ್ರರಂಗಕ್ಕೆ ಹತ್ತು ಹಲವು ಹೊಸತನವನ್ನು ಪರಿಚಯಿಸಿದ ಹಲವಾರು ಕಲಾವಿದರನ್ನು ಪರಿಚಯಿಸಿದ ರಾಜ್ ಕಪೂರ್ ಅವರು 1988ರಲ್ಲಿ 63ನೇ ವಯಸ್ಸಿನಲ್ಲಿ ಮೃತರಾದರು. [ಆರ್.ಕೆ.ನಾರಾಯಣ್ ಗೆ ನಮನ ಸಲ್ಲಿಸಿದ ಗೂಗಲ್]

    ಶ್ರೀ420 ಅಲ್ಲದೆ ಸಂಗಮ್, ಮೇರಾ ನಾಮ್ ಜೋಕರ್, ಚೋರಿ ಚೋರಿ, ಅನಾರಿ ಚಿತ್ರಗಳು ಚಿತ್ರದ ಹಾಡುಗಳು ಸದಾ ಸ್ಮರಣೀಯವಾಗಿವೆ. ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. 1998ರಿಂದ ಸುಮಾರು 100ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ. ರಾಜ್ ಕಪೂರ್ ಅವರ ಡೂಡ್ಲ್ ಭಾರತದಲ್ಲಿ ಮಾತ್ರ ನೋಡಬಹುದಾಗಿದೆ.

    English summary
    Google on Sunday(Dec.14) paid homage to legendary Bollywood actor-filmmaker Raj Kapoor on his 90th birth anniversary by dedicating a special doodle to him. Sunday's Google doodle is a collage of two scenes from one of Raj Kapoor movies, 1955's Shree 420.
    Sunday, December 14, 2014, 16:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X