For Quick Alerts
  ALLOW NOTIFICATIONS  
  For Daily Alerts

  ಗೂಗಲ್‌ನಲ್ಲಿ ರಶೀದ್ ಖಾನ್ ಪತ್ನಿ ಎಂದು ಹುಡುಕಿದರೆ ಅನುಷ್ಕಾ ಹೆಸರು ಬರುತ್ತೆ ಏಕೆ?

  |

  ಯಾವುದೇ ವಿಷಯ ಆಗಲಿ, ಯಾವುದೇ ಮಾಹಿತಿ ಬೇಕು ಅಂದ್ರು ಗೂಗಲ್‌ನಲ್ಲಿ ಹುಡುಕುವುದು ಸಾಮಾನ್ಯ. ಆದ್ರೆ, ಗೂಗಲ್‌ನಲ್ಲಿ ಅದೇಷ್ಟೊ ಬಾರಿ ತಪ್ಪು ಫಲಿತಾಂಶಗಳನ್ನು ನೀಡಿರುವ ಉದಾಹರಣೆಗಳಿವೆ. ಇದೀಗ, ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಪತ್ನಿ (rashid khan wife) ಎಂದು ಸರ್ಚ್ ಮಾಡಿದ್ರೆ ಅನುಷ್ಕಾ ಶರ್ಮಾ ಹೆಸರು ಮತ್ತು ಫೋಟೋ ತೋರಿಸುತ್ತದೆ.

  ಅರೇ ಇದನ್ನು ಸುಮ್ಮನೆ ಹೇಳುತ್ತಿಲ್ಲ. ಅದರ ಸ್ಕ್ರೀನ್‌ಶಾರ್ಟ್‌ ಸಹ ಈ ಸ್ಟೋರಿಯಲ್ಲಿ ಬಳಸಲಾಗಿದೆ. ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ. ಆದರೂ, ಗೂಗಲ್‌ನಲ್ಲಿ ಇಂತಹ ಎಡವಟ್ಟು ಏಕೆ ಎನ್ನುವುದು ಗೊಂದಲ ಉಂಟು ಮಾಡಿದೆ. ಮುಂದೆ ಓದಿ...

  ವಿರಾಟ್ ಕೊಹ್ಲಿ 'ದಿ ಬೆಸ್ಟ್ ಚೇಸರ್' ಎಂದ ನೆಟ್ಟಿಗರು!

  ಗೂಗಲ್ ಎಡವಟ್ಟು!

  ಗೂಗಲ್ ಎಡವಟ್ಟು!

  ಗೂಗಲ್‌ನಲ್ಲಿ rashid khan wife ಎಂದು ಟೈಪ್ ಮಾಡಿದರೆ ಫಲಿತಾಂಶದಲ್ಲಿ ಅನುಷ್ಕಾ ಶರ್ಮಾ ಹೆಸರು ಬರುತ್ತದೆ. ಅನುಷ್ಕಾ ಶರ್ಮಾ ಪತ್ನಿ ಎಂದು ತೋರಿಸುತ್ತದೆ. ಇದನ್ನು ನೋಡಿದ ನೆಟ್ಟಿಗರು ಗೂಗಲ್‌ನ ಟ್ರೋಲ್ ಮಾಡ್ತಿದ್ದಾರೆ.

  ರಶೀದ್ ಖಾನ್‌ಗೆ ಮದುವೆ ಆಗಿದ್ಯಾ?

  ರಶೀದ್ ಖಾನ್‌ಗೆ ಮದುವೆ ಆಗಿದ್ಯಾ?

  ಅಫ್ಘಾನಿಸ್ತಾನ್ ತಂಡದ ಆಟಗಾರ ಹಾಗೂ ಐಪಿಎಲ್‌ನಲ್ಲಿ ಸನ್‌ರೈಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿರುವ ರಶೀದ್ ಖಾನ್ ಇನ್ನು ಮದುವೆ ಆಗಿಲ್ಲ. ಅಫ್ಘಾನಿಸ್ತಾನ್ ತಂಡ ವಿಶ್ವಕಪ್ ಗೆಲ್ಲುವವರೆಗೂ ನಾನು ಮದುವೆ ಆಗಿಲ್ಲ ಎಂದು ಈ ಹಿಂದೆಯೊಮ್ಮೆ ರಶೀದ್ ಖಾನ್ ಹೇಳಿದ್ದು ಇಲ್ಲಿ ಸ್ಮರಿಸಬಹುದು.

  ಅನುಷ್ಕಾ-ವಿರಾಟ್ ಕೊಹ್ಲಿ ದಂಪತಿಗೆ ವಿಶ್ ಮಾಡಿ ಮತ್ತೆ ಟ್ರೋಲ್ ಆದ ಕರಣ್ ಜೋಹರ್

  ಅನುಷ್ಕಾ ಶರ್ಮಾ ನೆಚ್ಚಿನ ನಟಿ

  ಅನುಷ್ಕಾ ಶರ್ಮಾ ನೆಚ್ಚಿನ ನಟಿ

  2018ರಲ್ಲಿ ಇನ್ಸ್ಸಾಗ್ರಾಂನಲ್ಲಿ ಫ್ಯಾನ್ಸ್ ಜೊತೆ ಚಾಟ್ ಮಾಡಬೇಕಾದರೆ, ನಿಮ್ಮ ನೆಚ್ಚಿನ ನಟಿ ಯಾರು ಎಂದು ಕೇಳಿದ್ದಕ್ಕೆ ಅನುಷ್ಕಾ ಶರ್ಮಾ ಮತ್ತು ಪ್ರೀತಿ ಜಿಂಟಾ ಎಂದಿದ್ದರು. ಅನುಷ್ಕಾ ಶರ್ಮಾ ಅವರು ರಶೀದ್ ಖಾನ್ ಅವರ ನೆಚ್ಚಿನ ನಟಿ ಎಂದು ಸುದ್ದಿಗಳು ಸಹ ಆಗಿತ್ತು. ಹೀಗಾಗಿ, ರಶೀದ್ ಖಾನ್ ಮತ್ತು ಅನುಷ್ಕಾ ಶರ್ಮಾ ಹೆಸರಿನ ನಡುವೆ ಸಂಬಂಧ ಇದೆ. ಆದ್ರೆ, ಗೂಗಲ್‌ ಮಾತ್ರ ಅನುಷ್ಕಾ ಶರ್ಮಾ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಎಂದು ತೋರಿಸುತ್ತಿದೆ.

  ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಅನುಷ್ಕಾ

  ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಅನುಷ್ಕಾ

  ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜನವರಿ ತಿಂಗಳಲ್ಲಿ ಡಿಲವರಿ ದಿನಾಂಕ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಐಪಿಎಲ್ ಟೂರ್ನಿ ವೀಕ್ಷಣೆಗಾಗಿ ದುಬೈಗೆ ತೆರಳಿರುವ ಅನುಷ್ಕಾ, ಆರ್‌ಸಿಬಿ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡಿದ್ದರು.

  English summary
  Google Search Shows Bollywood actress, wife of Virat kohli Anushka Sharma As Afghan Cricketer Rashid Khan's Wife.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X