»   »  ಹಂಸಿಕಾ ಮೋತ್ವಾನಿಗೆ ಬಾಲಿವುಡ್ ಎಂದರೆ ಅಲರ್ಜಿ?

ಹಂಸಿಕಾ ಮೋತ್ವಾನಿಗೆ ಬಾಲಿವುಡ್ ಎಂದರೆ ಅಲರ್ಜಿ?

Posted By:
Subscribe to Filmibeat Kannada
ನಟಿ ಹಂಸಿಕಾ ಮೋತ್ವಾನಿ ತಮ್ಮ ಸಿನಿಮಾ ಜರ್ನಿಯನ್ನು ದಕ್ಷಿಣ ಭಾರತದತ್ತ ಕೇಂದ್ರೀಕರಿಸಿದ್ದಾರೆ. ಬಾಲಿವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬೆಡಗಿ ನಂತರ ನಟಿಸಿದ್ದು ಸೌತ್ ಕಡೆಯ ಚಿತ್ರಗಳಲ್ಲೇ ಎಂಬುದು ವಿಶೇಷ. ಇತ್ತೀಚಿಗಂತೂ ತಮಿಳು, ತೆಲುಗು ಹಾಗೂ ಆಗೀಗ ಕನ್ನಡ ಚಿತ್ರಗಳಲ್ಲೇ ಹೆಚ್ಚು ಬಿಜಿಯಾಗಿರುವ ಹಂಸಿಕಾ, ಇಂದು (09 ಆಗಸ್ಟ್ 2012) ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ದಕ್ಷಿಣ ಭಾರತದ ನಟಿಯರಿಗೆ ಬಾಲಿವುಡ್ ಚಿತ್ರರಂಗದ ಕಡೆ ಆಕರ್ಷಣೆ ಹೆಚ್ಚು. ಬಹಳಷ್ಟು ಜನರಿಗಂತೂ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವುದೇ ಗುರಿ. ಆದರೆ ಈ ಹಂಸಿಕಾ ಮಾತ್ರ ಅದಕ್ಕೆ ತದ್ವಿರುದ್ಧ. ಬಾಲಿವುಡ್ ಚಿತ್ರಗಳ ಕಡೆ ಅಷ್ಟೇನೂ ಗಮನಹರಿಸದೇ ದಕ್ಷಿಣ ಭಾರತವನ್ನೇ ಗುರಿಯನ್ನಾಗಿ ಆರಿಸಿಕೊಂಡಿದ್ದಾರೆ. ಅದರಲ್ಲೂ ಹಂಸಿಕಾಗೆ ಹೆಚ್ಚು ಆಫರ್ ನೀಡುತ್ತಿರುವ ಚಿತ್ರರಂಗಗಳು ತಮಿಳು ಹಾಗು ತೆಲುಗು. ನಂತರದ ಸ್ಥಾನದಲ್ಲಿದೆ ಕನ್ನಡ ಚಿತ್ರರಂಗ.

ಈ ಬಗ್ಗೆ ಅವರನ್ನು ಕೇಳಿದರೆ, "ಕಲಾವಿದೆಯಾದ ನನಗೆ ಭಾಷೆಯ ಹಂಗಿಲ್ಲ. ನನಗೆ ಬಾಲಿವುಡ್ ಚಿತ್ರಗಳು ಹಾಗೂ ಬೇರೆ ಭಾಷೆಗಳ ಚಿತ್ರಗಳ ಮಧ್ಯೆ ಭೇದವೇನಿಲ್ಲ. ಆದರೆ ನನಗೆ ದಕ್ಷಿಣ ಭಾರತದ ಚಿತ್ರರಂಗ 'ಕಂಫರ್ಟ್' ಎನಿಸುತ್ತದೆ. ಹೀಗಾಗಿ ನಾನು ಇಲ್ಲೇ ಸಿಗುತ್ತಿರುವ ಅವಕಾಶಗಳಿಂದ ಖುಷಿಯಾಗಿದ್ದೇನೆ" ಎಂದಿದ್ದಾರೆ.

ಹೆಚ್ಚಾಗಿ ತಮಿಳು ಹಾಗೂ ತೆಲುಗು ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಹಂಸಿಕಾ ಕೈಯಲ್ಲಿ ಇನ್ನೂ ಸಾಕಷ್ಟು ಚಿತ್ರಗಳಿವೆ. ಅವುಗಳಲ್ಲಿ ದೊಡ್ಡ ಬ್ಯಾನರ್ ನ ವೆಟ್ಟೈ ಮನ್ನಾನ್, ಸೆಟ್ಟೈ, ವಾಲು ಹಾಗೂ ಸಿಂಗಂ-2 ಸೇರಿವೆ. ಒಟ್ಟಿನಲ್ಲಿ ಸದ್ಯಕ್ಕಂತೂ ಈ ಚೆಲುವೆ ಬಾಲಿವುಡ್ ನಿಂದ ದೂರವಿದ್ದೇ ಸಾಕಷ್ಟು ಸಾಧಿಸಿದ್ದಾರೆ. ಅಷ್ಟೇ ಅಲ್ಲ, ಸೌತ್ ಇಂಡಿಯಾ ಚಿತ್ರಗಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. (ಏಜೆನ್ಸೀಸ್)

English summary
Hansika Motwani, who is celebrating her 21st birthday today (August 9), seems to be not interested in Bollywood. The bubbly girl, like other South actresses, is not keen on acting in Hindi films even though she made her debut in Bollywood.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada