»   » 350 ಕೋಟಿ ಗಡಿ ದಾಟಿ ಕುಣಿದ ಶಾರುಖ್ ಚಿತ್ರ

350 ಕೋಟಿ ಗಡಿ ದಾಟಿ ಕುಣಿದ ಶಾರುಖ್ ಚಿತ್ರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮತ್ತೊಮ್ಮೆ ಬಾಕ್ಸಾಫೀಸ್ ನಲ್ಲಿ ಹೊಸ ಭಾಷ್ಯ ಬರೆಯುತ್ತಿದೆ.ಚೆನ್ನೈ ಎಕ್ಸ್ ಪ್ರೆಸ್ ಗೆ ಹೋಲಿಸಿದರೆ ಹ್ಯಾಪಿ ನ್ಯೂ ಇಯರ್ ಚಿತ್ರ ಸ್ವಲ್ಪ ನಿಧಾನಗತಿಯಿಂದ ಗಳಿಕೆಯಲ್ಲಿ ಮೇಲಕ್ಕೇರುತ್ತಿದೆ. ಇಂದಿಗೆ ಶಾರುಖ್ ಚಿತ್ರದ ವಿಶ್ವದೆಲ್ಲೆಡೆಯ ಗಳಿಕೆ ಲೆಕ್ಕ ಹಾಕಿದರೆ 350 ಕೋಟಿ ರು ದಾಟುತ್ತದೆ.

ದೇಶಿ ಮಾರುಕಟ್ಟೆಯಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರ ಈಗಾಗಲೇ 200 ಕೋಟಿ ರು ನಿವ್ವಳ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ 15 ಯುಎಸ್ ಡಾಲರ್ ಗಳಿಸಿದೆ. ಒಟ್ಟಾರೆ, 2014ರ ಅತ್ಯಧಿಕ ಗಳಿಕೆ ಹೊಂದಿದ ಚಿತ್ರ ಎಂಬ ಹೆಗ್ಗಳಿಕೆ ಕಿರೀಟ ಧರಿಸಲು ಹ್ಯಾಪಿ ನ್ಯೂ ಇಯರ್ ತಂಡ ಸಜ್ಜಾಗುತ್ತಿದೆ. [ಶಾರುಖ್ 8 ಪ್ಯಾಕ್ ಆಬ್ಸ್ ವಿಡಿಯೋ]

ಫರ್ಹಾಖಾನ್ ನಿರ್ದೇಶನದ ಈ ಚಿತ್ರ ಮೊದಲ ದಿನವೇ 44.97 ಕೋಟಿ ರೂ. ದಾಖಲೆ ವ್ಯವಹಾರ ಮಾಡಿ ಭರ್ಜರಿ ಓಪನಿಂಗ್ ಪಡೆದಿತ್ತು.ಕೇವಲ ಎರಡೂವರೆ ದಿನಗಳಲ್ಲೇ ಶಾರುಖ್ ಖಾನ್ ಅವರ ಹ್ಯಾಪಿ ನ್ಯೂ ಇಯರ್ ಚಿತ್ರ 100 ಕೋಟಿ ಗಳಿಕೆ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು.

2007ರ ಸೂಪರ್ ಹಿಟ್ ಚಿತ್ರ 'ಓಂ ಶಾಂತಿ ಓಂ' ಮತ್ತೆ ಶಾರುಖ್-ದೀಪಿಕಾ ಹಾಗೂ ಫರ್ಹಾ ಖಾನ್ ಜೋಡಿ ಒಂದಾಗಿದ್ದು,ಕಿಂಗ್ ​ ಖಾನ್​ ಶಾರುಖ್ 8 ಪ್ಯಾಕ್​ ಆಬ್ಸ್ ಬೆಳೆಸಿಕೊಂಡಿದ್ದು ಎಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ದೀಪಿಕಾ ನಟನೆಗಂತೂ ಪ್ರೇಕ್ಷಕ ಫಿದಾ ಆಗಿದ್ದಾನೆ.

200 ಕೋಟಿ ದಾಟಿದ ಶಾರುಖ್ 2ನೇ ಚಿತ್ರ
  

200 ಕೋಟಿ ದಾಟಿದ ಶಾರುಖ್ 2ನೇ ಚಿತ್ರ

200 ಕೋಟಿ ರು ಗಳಿಕೆ ದಾಟಿದ ಶಾರುಖ್ 2ನೇ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ನಿರ್ಮಾಣದ ಚೆನ್ನೈ ಎಕ್ಸ್ ಪ್ರೆಸ್ 250 ಕೋಟಿ ರು ಗೂ ಮೀರಿದ ಗಳಿಕೆ ಕಂಡಿತ್ತು. ಹ್ಯಾಪಿ ನ್ಯೂ ಇಯರ್ ಕೂಡಾ ಇದೇ ರೀತಿ ಜಾದೂ ಮಾಡುವ ನಿರೀಕ್ಷೆಯಿದೆ ಎಂದು ರೆಡ್ ಚಿಲ್ಲೀಸ್ ನ ಸಿಇಒ ವೆಂಕಿ ಮೈಸೂರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಯುಎಸ್ಎ -ಕೆನಡಾದಲ್ಲಿನ ಗಳಿಕೆ
  

ಯುಎಸ್ಎ -ಕೆನಡಾದಲ್ಲಿನ ಗಳಿಕೆ

ಯುಎಸ್ಎ -ಕೆನಡಾದಲ್ಲಿನ ಗಳಿಕೆ ವಿವರ ನೋಡಿದರೆ ಹ್ಯಾಪಿ ನ್ಯೂ ಇಯರ್ ಚಿತ್ರ ಉತ್ತರ ಅಮೆರಿಕ ಭಾಗದಲ್ಲಿ 21.87 ಕೋಟಿ ರು ಗಳಿಸಿದೆ

ಯುನೈಟೆಡ್ ಕಿಂಗ್ ಡಮ್ ನಲ್ಲಿ ಗಳಿಕೆ
  

ಯುನೈಟೆಡ್ ಕಿಂಗ್ ಡಮ್ ನಲ್ಲಿ ಗಳಿಕೆ

ಹ್ಯಾಪಿ ನ್ಯೂ ಇಯರ್ ಚಿತ್ರದ ಯುನೈಟೆಡ್ ಕಿಂಗ್ ಡಮ್ ಗಳಿಕೆ 12.14 ಕೋಟಿ ರು ದಾಟಿದೆ.

ಆಸ್ಟ್ರೇಲಿಯಾದಲ್ಲಿನ ಗಳಿಕೆ
  

ಆಸ್ಟ್ರೇಲಿಯಾದಲ್ಲಿನ ಗಳಿಕೆ

ಆಸ್ಟ್ರೇಲಿಯಾದಲ್ಲಿ ಫರ್ಹಾ ಖಾನ್ ನಿರ್ದೇಶನದ ಚಿತ್ರ 3.83 ಕೋಟಿ ರು ಗಳಿಸಿದೆ

ನ್ಯೂಜಿಲೆಂಡ್ ನಲ್ಲಿನ ಗಳಿಕೆ ಎಷ್ಟಿದೆ?
  

ನ್ಯೂಜಿಲೆಂಡ್ ನಲ್ಲಿನ ಗಳಿಕೆ ಎಷ್ಟಿದೆ?

ಶಾರುಖ್ ಅವರ ಹ್ಯಾಪಿ ನ್ಯೂ ಇಯರ್ ಚಿತ್ರ ನ್ಯೂಜಿಲೆಂಡ್ ನಲ್ಲಿ 1.37 ಕೋಟಿ ರು ಗಳಿಸಿದೆ

ಮಲೇಷಿಯಾದಲ್ಲಿ
  

ಮಲೇಷಿಯಾದಲ್ಲಿ

ಮಲೇಷಿಯಾದಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರ 0.68 ಕೋಟಿ ರು ಗಳಿಸಿದೆ.

ಲೆಬೆನಾನ್, ಆಸ್ಟ್ರೀಯಾ, ಪೆರುಗಳಲ್ಲಿ
  

ಲೆಬೆನಾನ್, ಆಸ್ಟ್ರೀಯಾ, ಪೆರುಗಳಲ್ಲಿ

ಹ್ಯಾಪಿ ನ್ಯೂ ಇಯರ್ ಚಿತ್ರದ ಗಳಿಕೆ
ಲೆಬೆನಾನ್ ನಲ್ಲಿ ೦.೦2 ಕೋಟಿ ರು
ಆಸ್ಟ್ರೀಯಾದಲ್ಲಿ 0.11 ಕೋಟಿ ರು
ಪೆರುವಿನಲ್ಲಿ 0.24 ಕೋಟಿ ರು

English summary
Shahrukh Khan's multi-starrer flick Happy New Year starring Deepika Padukone among others crossed Rs 350 Cr gross Box Office collections worldwide
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada