»   » 'ಹೇಟ್ ಸ್ಟೋರಿ-4' ಟ್ರೈಲರ್ ನೋಡಲು ಮುಗಿಬಿದ್ದ ಪ್ರೇಕ್ಷಕರು

'ಹೇಟ್ ಸ್ಟೋರಿ-4' ಟ್ರೈಲರ್ ನೋಡಲು ಮುಗಿಬಿದ್ದ ಪ್ರೇಕ್ಷಕರು

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ 'ಹೇಟ್ ಸ್ಟೋರಿ' ಚಿತ್ರದ ಸರಣಿ ಮುಂದುವರೆದಿದ್ದು, ಈಗ 'ಹೇಟ್ ಸ್ಟೋರಿ-4' ಟ್ರೈಲರ್ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಟ್ರೈಲರ್ ನೋಡಲು ಸಿನಿಪ್ರೇಕ್ಷಕರು ಮುಗಿಬಿದಿದ್ದು, ಒಂದೇ ದಿನದಲ್ಲಿ ಒಂದು ಕೋಟಿ ವೀಕ್ಷಕರು ಟ್ರೈಲರ್ ನೋಡಿದ್ದರು.

ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 1ನೇ ಸ್ಥಾನದಲ್ಲಿರುವ 'ಹೇಟ್ ಸ್ಟೋರಿ-4' ಟ್ರೈಲರ್ ಸದ್ಯ 1.62 ಕೋಟಿ ವೀಕ್ಷಕರನ್ನ ಹೊಂದಿದೆ. ಟ್ರೈಲರ್ ಸಖತ್ ಹಾಟ್ ಮತ್ತು ಸ್ಪೈಸಿ ದೃಶ್ಯಗಳಿದ್ದು, ಪಡ್ಡೆ ಹುಡಗರನ್ನ ಹೆಚ್ಚು ಆಕರ್ಷಿಸುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ 'ಐರಾವತ' ಚಿತ್ರದಲ್ಲಿ ನಾಯಕಿಯಾಗಿದ್ದ ಊರ್ವಶಿ ರೌಟೇಲಾ 'ಹೇಟ್ ಸ್ಟೋರಿ-4' ಚಿತ್ರದ ನಾಯಕಿ. ವಿವಾನ್ ಬತೇನಾ, ಕರಣ್ ವಾಹಿ ಇಬ್ಬರು ನಾಯಕರು. ಈ ಮೂವರು ಸುತ್ತಾ ನಡೆಯುವ ಹಾಟ್ ಸ್ಟೋರಿಯೇ ಈ ಹೇಟ್ ಸ್ಟೋರಿ. ಈ ಚಿತ್ರವನ್ನ ವಿಶಾಲ್ ಪಾಂಡ್ಯಾ ನಿರ್ದೇಶನ ಮಾಡಿದ್ದಾರೆ.

hate story 4 trailer trending in top

ಚಿತ್ರದ ನಾಯಕಿ ಊರ್ವಶಿ ನಟಿ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಈ ಸಂದರ್ಭದಲ್ಲಿ ನಾಯಕ ನಟರಿಬ್ಬರ ಸ್ನೇಹ ಬೆಳೆಯುತ್ತೆ. ಸಹೋದರರಾಗಿರುವ ನಟರಿಬ್ಬರಿಗೂ ನಾಯಕಿಯ ಮೇಲೆ ಪ್ರೀತಿಯಾಗುತ್ತೆ. ಈಕೆಗಾಗಿ ಒಬ್ಬರಿಗೊಬ್ಬರು ಕಿತ್ತಾಡುವಷ್ಟು ಪ್ರೀತಿ. ಆದ್ರೆ, ನಾಯಕಿ ಈ ಇಬ್ಬರನ್ನ ಬಳಸಿಕೊಂಡು ತನ್ನ ಕನಸನ್ನ ಹೇಗೆ ನೆರವೇರಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ಕಥೆ.

hate story 4 trailer trending in top

ಅಂದ್ಹಾಗೆ, 2012ರಲ್ಲಿ ಮೊದಲ ಬಾರಿಗೆ 'ಹೇಟ್ ಸ್ಟೋರಿ' ಚಿತ್ರ ರಿಲೀಸ್ ಆಗಿತ್ತು. ಚಿತ್ರದಲ್ಲಿ ನಟಿ ಪೌಲಿದಾಮ್ ಬೋಲ್ಡ್ ಆಗಿ ನಟಿಸುವುದರ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದರು. 2014ರಲ್ಲಿ 'ಹೇಟ್ ಸ್ಟೋರಿ-2'ನೇ ಭಾಗ ತೆರೆಕಂಡಿತ್ತು. 2ನೇ ಭಾಗದಲ್ಲಿ ಸುರ್ವಿನ್ ಚಾವ್ಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಹೇಟ್ ಸ್ಟೋರಿ-3ನೇ ಭಾಗದಲ್ಲಿ ಡೈಸಿ ಶಾ, ಜರೀನ್ ಖಾನ್ ಇಬ್ಬರೂ ನಟಿಯರು ನಶೇ ಏರಿಸಿದ್ದರು. ಈಗ ಹೇಟ್ ಸ್ಟೋರಿ 4ರ ಸರದಿ. ಮಾರ್ಚ್ 9 ರಂದು ವರ್ಲ್ಡ್ ವೈಡ್ ಹೇಟ್ ಸ್ಟೋರಿ 4 ಸಿನಿಮಾ ತೆರೆಕಾಣುತ್ತಿದೆ.

English summary
The trailer of Hate Story 4, starring Urvashi Rautela and Karan Wahi and Vivan Bhatena, was released on Saturday (january 28th). The trailer, which is one of the top trends on the youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada