»   » ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?

ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?

By: Sonu Gowda
Subscribe to Filmibeat Kannada

ಬಾಲಿವುಡ್ ಜೊತೆಗೆ ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿ ಭಾರಿ ಸುದ್ದಿಯಲ್ಲಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ದೊಡ್ಡ-ದೊಡ್ಡ ಸಮಾರಂಭಗಳಲ್ಲಿ ಬರೀ ನಿಮಿಷಗಳಿಗೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ ಅಂದ್ರೆ ನೀವು ನಂಬುತ್ತೀರಾ?

ನಂಬಲೇಬೇಕು, ಯಾಕೆಂದರೆ ಮೊನ್ನೆ (ಜೂನ್ 25) ನಡೆದ ಐಫಾ-2016ನಲ್ಲಿ ಮೈ ಚಳಿ ಬಿಟ್ಟು ಸಖತ್ತಾಗಿ ಸೊಂಟ ಬಳುಕಿಸಿ ಎಲ್ಲರಿಗೂ ಮನರಂಜನೆ ನೀಡಲು ಪಿಗ್ಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ?, ಬರೋಬ್ಬರಿ 2 ಕೋಟಿ ರೂಪಾಯಿ.[ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?]

Hindi Actress Priyanka Chopra charged 2 crore for her IIFA

ಹೌದು ಐಫಾ-2016 ಗ್ರೀನ್ ಕಾರ್ಪೆಟ್ ನಲ್ಲಿ ನೆರೆದಿದ್ದ ಬಾಲಿವುಡ್ ನ ಗಣ್ಯಾತೀ ಗಣ್ಯರನ್ನು ಒಂದ್ ಹತ್ತಿಪ್ಪತ್ತ್ ನಿಮಿಷ ಮನರಂಜಿಸುವ ಸಲುವಾಗಿ ಭರ್ಜರಿ ಹಣ ವ್ಯಾನಿಟಿ ಬ್ಯಾಗಿಗಿಳಿಸಿದ್ದಾರೆ ಎನ್ನಲಾಗುತ್ತಿದೆ.[ಚಿತ್ರಗಳು: ಬಾಲಿವುಡ್ ದಿಗ್ಗಜರ ಸಮಾಗಮವಾಗಿದ್ದ ಐಫಾ 2016]

Hindi Actress Priyanka Chopra charged 2 crore for her IIFA

ಅಂದಹಾಗೆ ನಟಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಅವರು ಐಫಾ ಸಮಾರಂಭದ ಅದ್ಧೂರಿ ವೇದಿಕೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಪ್ಲ್ಯಾನ್ ಚೇಂಜ್ ಆಗಿ ಇಬ್ಬರು ಬೇರೆ ಬೇರೆಯಾಗಿ ಸಹ ಕಲಾವಿದರ ಜೊತೆ ಜಬರ್ದಸ್ತ್ ಆಗಿ ಕುಣಿದರು.[ಐಫಾ ಪ್ರಶಸ್ತಿ 2016: ದೀಪಿಕಾ ಮತ್ತು ರಣ್ವೀರ್ ಮೀರಿಸುವವರು ಯಾರಿಲ್ಲ!]

Hindi Actress Priyanka Chopra charged 2 crore for her IIFA

ಅಲ್ಲದೇ ದೀಪಿಕಾ ಪಡುಕೋಣೆ ಅವರು ಕೂಡ ನಾಲ್ಕೈದು ನಿಮಿಷಗಳ ಆಟಕ್ಕೆ ಭರ್ತಿ ಒಂದೂವರೆ ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ಬಾಲಿವುಡ್ ನ ಆಪ್ತ ವಲಯಗಳು ಸುದ್ದಿ ಮಾಡಿವೆ.

Hindi Actress Priyanka Chopra charged 2 crore for her IIFA

ಇನ್ನು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಸ್ಟೇಜ್ ಶೋ ಒಂದಕ್ಕೆ ಸುಮಾರು 5 ಕೋಟಿ ರೂಪಾಯಿ ಪಡೆದರೆ, ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಅವರು 3.5 ಕೋಟಿ ರೂಪಾಯಿ ಪಡೆಯುತ್ತಾರೆ.[ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರ ಸಂಭಾವನೆ ನಿಮಗ್ಗೊತ್ತಾ?]

Hindi Actress Priyanka Chopra charged 2 crore for her IIFA

ಇದೀಗ ಈ ನಟಿಮಣಿಯರಿಬ್ಬರು ಹಾಲಿವುಡ್ ಗೆ ಹಾರಿ ವಾಪಸ್ ಬಂದ ನಂತರ ತಮ್ಮ ಸಂಭಾವನೆಗಳಲ್ಲಿ ಕೊಂಚ ಹೈಕ್ ಮಾಡಿದ್ದಾರೆ. ಒಟ್ನಲ್ಲಿ ಇವರಿಬ್ಬರ ಸಂಭಾವನೆ ಬೇಡಿಕೆ ನೋಡಿ ಕಾರ್ಯಕ್ರಮದ ಆಯೋಜಕರು ಉಸ್ಸಪ್ಪಾ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

English summary
Hindi Actress Priyanka Chopra charged Rs 2 crore for her 17th IIFA Award 2016 Performance at Madrid On June 25th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada