»   » ಮೂರೇ ದಿನದಲ್ಲಿ ಭಾಕ್ಸಾಫೀಸ್ ಉಡೀಸ್ ಮಾಡಿದ 'ಉಡ್ತಾ ಪಂಜಾಬ್'

ಮೂರೇ ದಿನದಲ್ಲಿ ಭಾಕ್ಸಾಫೀಸ್ ಉಡೀಸ್ ಮಾಡಿದ 'ಉಡ್ತಾ ಪಂಜಾಬ್'

By: ಸೋನು ಗೌಡ
Subscribe to Filmibeat Kannada

ಇಡೀ ವಿಶ್ವದಾದ್ಯಂತ ಭಾರಿ ಸುದ್ದಿ ಮಾಡಿದ್ದ ಹಿಂದಿ ಸಿನಿಮಾ 'ಉಡ್ತಾ ಪಂಜಾಬ್'ಗೆ ದೆಹಲಿ ಮತ್ತು ಪಂಜಾಬ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೊದಲ ದಿನವೇ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ.

ನಟ ಶಾಹಿದ್ ಕಪೂರ್, ನಟಿ ಆಲಿಯಾ ಭಟ್, ನಟಿ ಕರೀನಾ ಕಪೂರ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಉಡ್ತಾ ಪಂಜಾಬ್' ಮೊದಲ ದಿನವೇ ಸುಮಾರು 10.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಹುಟ್ಟುಹಾಕಿದೆ.['ಉಡ್ತಾ ಪಂಜಾಬ್'ಗೆ ವಿಮರ್ಶಕರ ಮೆಚ್ಚುಗೆಯ ಕಾಮೆಂಟ್]

Hindi Movie 'Udta Punjab' 3 days Box Office Collections

ದೆಹಲಿ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಕಂಡುಬಂದಿದ್ದು, ಈಶಾನ್ಯ ಪ್ರದೇಶದಲ್ಲಿ ಸಾಧಾರಣ ಪ್ರತಿಕ್ರಿಯೆ ಕಂಡು ಬಂದಿದೆ.

ಶನಿವಾರ ಸುಮಾರು 11.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ 'ಉಡ್ತಾ ಪಂಜಾಬ್' ಇದೀಗ ಮೂರು ದಿನದಲ್ಲಿ (ದೆಹಲಿ, ಪಂಜಾಬ್ ನಲ್ಲಿ) ಒಟ್ಟು ಬರೋಬ್ಬರಿ 21.30 ಕೋಟಿ ರೂಪಾಯಿ ಕಲೆಕ್ಷನ್ಸ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ.

ಇನ್ನು 'ಉಡ್ತಾ ಪಂಜಾಬ್'ಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಉತ್ತಮ ರೆಸ್ಪಾನ್ಸ್ ದೊರೆತಿದೆಯಾದರೂ, ಏಕ ತೆರೆಯ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಸೆಳೆಯುವಲ್ಲಿ ಈ ಚಿತ್ರ ಕೊಂಚ ವಿಫಲವಾಗಿದೆ.

Hindi Movie 'Udta Punjab' 3 days Box Office Collections

ದೆಹಲಿ ಮತ್ತು ಪಂಜಾಬ್ ಗಳಲ್ಲಿ ಮೊದಲ ಪ್ರದರ್ಶನಕ್ಕೆ ಅಷ್ಟಾಗಿ ಪ್ರತಿಕ್ರಿಯೆ ದೊರೆತಿರಲಿಲ್ಲ. ಆದರೆ ನಂತರದ ಪ್ರದರ್ಶನಗಳಲ್ಲಿ 'ಉಡ್ತಾ ಪಂಜಾಬ್' ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಎಂದು ಪಂಜಾಬ್ ನ ಚಿತ್ರವಿತರಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ಅಭಿಷೇಕ್ ಚೌಬೆ ನಿರ್ದೇಶನ ಮಾಡಿದ್ದ 'ಉಡ್ತಾ ಪಂಜಾಬ್' ಬಿಡುಗಡೆಗೂ ಮುನ್ನವೇ ಆನ್ ಲೈನ್ ನಲ್ಲಿ ಲೀಕ್ ಆಗಿ ಎಲ್ಲರ ಕೈಯಲ್ಲೂ ಸೆನ್ಸಾರ್ ಕಾಪಿ ಹರಿದಾಡುತ್ತಿತ್ತು. ['ಉಡ್ತಾ ಪಂಜಾಬ್' ಚಿತ್ರತಂಡಕ್ಕೆ ಮತ್ತೆ ಆಘಾತ] ಮಾತ್ರವಲ್ಲದೇ ಸೆನ್ಸಾರ್ ಮಂಡಳಿ ಭರ್ಜರಿ ಕತ್ತರಿ ಹಾಕುವ ಮೂಲಕ ಬಿಟೌನ್ ನಲ್ಲಿ ಈ ಸಿನಿಮಾ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

English summary
Hindi Actor Shahid Kapoor, Bollywood Actress Alia Bhatt, Bollywood Actress Kareena Kapoor starrer most controversial film 'Udta Punjab' first day collection Rs. 10.5 Crore. On Saturday, The film earned Rs. 11.25 Crore. Making the total collections of the movie Rs. 21.30 Crore. The movie is directed by Abhishek Chaubey.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada