For Quick Alerts
  ALLOW NOTIFICATIONS  
  For Daily Alerts

  'ಹೋಮ್ ಸ್ಟೇ' ಹಿಂದಿ ಚಿತ್ರದ ಸಖತ್ ಥ್ರಿಲ್ಲಿಂಗ್ ಟ್ರೇಲರ್

  By Rajendra
  |

  ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಬರುತ್ತಿದೆ ಕನ್ನಡದ ಸಸ್ಪೆನ್ಸ್ ಹಾರರ್ ಸಿನಿಮಾ 'ಹೋಮ್ ಸ್ಟೇ'. ಈ ಚಿತ್ರ ತೆಲುಗು, ಹಿಂದಿ ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೆ ಕನ್ನಡ ಆವೃತ್ತಿಯ ಟ್ರೇಲರ್ ಬಿಡುಗಡೆಯಾಗಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಉಂಟುಮಾಡಿದೆ. ಇದೀಗ ಹಿಂದಿ ಆವೃತ್ತಿಯ ಫಸ್ಟ್ ಲುಕ್ ನೋಡಿ.

  ಇಷ್ಟಕ್ಕೂ ಹೋಮ್ ಸ್ಟೇಯಲ್ಲಿ ಏನು ನಡೆಯುತ್ತದೆ? ಹುಡುಗಿ ಮಿಸ್ ಆಗಿದ್ದೇಕೆ? ಎಂಬ ಅಂಶಗಳೊಂದಿಗೆ ಫಸ್ಟ್ ಲುಕ್ ಚಿತ್ರವನ್ನು ಕುತೂಹಲದಿಂದ ನಿರೀಕ್ಷಿಸುವಂತೆ ಮಾಡುತ್ತದೆ. ಇಂದಿನ ಯುವ ಪೀಳಿಗೆಯ ವೀಕೆಂಡ್ ವಿಹಾರಗಳಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಲ್ಪಡುವ 'ಹೋಮ್ ಸ್ಟೇ'ನಲ್ಲಿ ನಡೆಯುವ ಒಂದು ಸನ್ನಿವೇಶವೇ ಚಿತ್ರದ ಕಥಾವಸ್ತು.

  ಸುಳ್ಯ ಮೂಲದ ಸಂತೋಷ್ ಕೊಡಂಕಿರಿ ಈ ಚಿತ್ರದ ನಿರ್ದೇಶಕರು. ಸುಳ್ಯದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ನಂತರ ಬೆಂಗಳೂರುನಲ್ಲಿ ಸಿನಿಮಾ ಇಂಡಷ್ಟ್ರಿಗೆ ಅಡಿಯಿಟ್ಟವರು. ಆರಂಭದಲ್ಲಿ ಜಾಹೀರಾತು ನಿರ್ದೇಶಕ. ಸರ್ಕಾರ ಮತ್ತು ಎನ್ ಜಿಓಗಳಿಗೆ ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಹೋಮ್ ಸ್ಟೇ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಗಮನಸೆಳೆದಿದ್ದಾರೆ ಸಂತೋಷ್. [ಕನ್ನಡದ ಸಸ್ಪೆನ್ಸ್ ಥ್ರಿಲ್ಲರ್ 'ಹೋಮ್ ಸ್ಟೇ' ಹೈಲೈಟ್ಸ್]

  ಈ ಚಿತ್ರಕ್ಕೆ ಆಶ್ಲೆ ಮೆಂಡೋಂಕ ಅವರ ಸಂಗೀತ, ನಂದಕಿಶೋರ್ - ಹಸೀಬ್ - ಎನ್ ಮುರಳಿಧರ್ ಅವರ ಛಾಯಾಗ್ರಹಣವಿದೆ. ವಿನೋದ್ ಮನೋಹರ್ ಅವರ ಸಂಕಲನ ಚಿತ್ರಕ್ಕಿದ್ದು ಪಾತ್ರವರ್ಗದಲ್ಲಿ ಸಯ್ಯಾಲಿ ಭಗತ್, ಶ್ರುತಿ, ರವಿಕಾಳೆ ಮುಂತಾದವರು ಇದ್ದಾರೆ.

  <iframe width="640" height="360" src="//www.youtube.com/embed/VVuAIW60SvM?feature=player_embedded" frameborder="0" allowfullscreen></iframe>

  ಇಡೀ ರಾತ್ರಿಯಲ್ಲಿ ಆಕೆ ಅಲ್ಲಿದ್ದ ಕಾವಲುಗಾರ, ಸಹಾಯಕಿ, ಮತ್ತು ಅನಾಮಿಕ ನೆರಳಿನಿಂದ ಎದುರಿಸಿದ ಉತ್ಕಟ ಸನ್ನಿವೇಶ ಯಾವುದು? ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ ಆ ಅನಾಮಿಕ ನೆರಳು ಯಾರದು? ಮನೆಯ ಮಾಲಿಕ ಹಿಂತಿರುಗಿದನಾ ಇಲ್ಲವಾ? ಕೊನೆಗೂ ತನ್ನ ಭಾವಿ ಪತಿಯನ್ನು ಸಪ್ರ್ರೈಸ್ ಮಾಡಿದಳಾ ಇಲ್ಲವಾ? ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಗೆ ಬರುತ್ತಿದೆ ಹೋಮ್ ಸ್ಟೇ ನೋಡಿ ಆನಂದಿಸಿ. (ಒನ್ಇಂಡಿಯಾ ಕನ್ನಡ)

  English summary
  Home stay...Stay Alive, is a suspense thriller movie, filming in 3 languages, Kannada, Hindi and Tamil. Here is the Hindi version firest Look. Story, screeplay, direction by Santhosh Kodenkeri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X